ದೇಶದಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ; ಲೋಕಸಭಾ ಸೋಲಿನ ಬಳಿಕ ಸಂಸತ್​ನಲ್ಲಿ ರಾಹುಲ್​ ಗಾಂಧಿ ಮೊದಲ ಭಾಷಣ

ದೇಶದಲ್ಲಿ ರೈತರು ಪರಿಸ್ಥಿತಿ ಹದಗೆಟ್ಟಿದ್ದು, ಅವರ ಸ್ಥಿತಿಯನ್ನು ಸುಧಾರಿಸಲು ಪ್ರಧಾನಿಗಳು ಮುಂದಾಗಬೇಕು. ಸರ್ಕಾರ ರೈತರಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ. ಅದರಲ್ಲಿಯೂ ಕೇರಳದ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು

Seema.R | news18
Updated:July 11, 2019, 5:41 PM IST
ದೇಶದಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ; ಲೋಕಸಭಾ ಸೋಲಿನ ಬಳಿಕ ಸಂಸತ್​ನಲ್ಲಿ ರಾಹುಲ್​ ಗಾಂಧಿ ಮೊದಲ ಭಾಷಣ
ರಾಹುಲ್​ ಗಾಂಧಿ
  • News18
  • Last Updated: July 11, 2019, 5:41 PM IST
  • Share this:
ನವದೆಹಲಿ (ಜು.11): ಲೋಕಸಭಾ ಸೋಲಿನ ಬಳಿಕ 17ನೇ ಸಂಸತ್ತು ಅಧಿವೇಶನದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮೊದಲ ಬಾರಿ ಮಾತನಾಡಿದ್ದಾರೆ.

ಶೂನ್ಯ ಸಮಯದಲ್ಲಿ ಮಾತನಾಡಿದ ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿ, ರೈತರ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇಂದಿನ ರೈತರ ಸ್ಥಿತಿಗೆ ದಶಕಗಳ ಕಾಲ ಆಡಳಿತ ನಡೆಸಿದ ಸರ್ಕಾರ ಕಾರಣ ಎಂಬ ರಾಜನಾಥ್​ ಸಿಂಗ್​ ಟೀಕೆಗೆ ಉತ್ತರಿಸಿದ ಅವರು, ದೇಶದಲ್ಲಿನ ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಆತಂಕ ಹೊರಹಾಕಿದರು. "ದೇಶದಲ್ಲಿ ರೈತರ ಪರಿಸ್ಥಿತಿ ಹದಗೆಟ್ಟಿದ್ದು, ಅವರ ಸ್ಥಿತಿಯನ್ನು ಸುಧಾರಿಸಲು ಪ್ರಧಾನಿ ಮುಂದಾಗಬೇಕು. ಸರ್ಕಾರ ರೈತರಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ. ಅದರಲ್ಲಿಯೂ ಕೇರಳದ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು" ಎಂದು ಮನವಿ ಮಾಡಿದರು.

ಇದನ್ನು ಓದಿ: ದಲಿತ ಹುಡುಗನನ್ನು ಮದುವೆಯಾಗಿದ್ದಕ್ಕೆ ತಂದೆಯಿಂದಲೇ ಜೀವ ಬೆದರಿಕೆ; ನ್ಯಾಯಾಲಯದ ಕದ ತಟ್ಟಿದ ಬಿಜೆಪಿ ಶಾಸಕನ ಮಗಳು

ರಾಹುಲ್​ ಗಾಂಧಿ ಮಾತಿಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಮೋದಿ ಸರ್ಕಾರ ರೈತರ ಆದಾಯವನ್ನು 20-25 ರಷ್ಟು ಹೆಚ್ಚಳ ಮಾಡಿದೆ, ರೈತರ ಸಂಕಷ್ಟ ಆರಂಭವಾಗಿರುವುದು ಕಳೆದ ಕೆಲವು ವರ್ಷಗಳಿಂದ ಅಲ್ಲ. ಅದು ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿ ಶುರುವಾಗಿತ್ತು. ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಕಿಸಾನ್​ ಧನ್​ ಯೋಜನೆಯಿಂದಾಗಿ ರೈತರ ಆದಾಯ ದುಪ್ಪಟ್ಟುಗೊಂಡಿದೆ ಎಂದರು.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ