Rahul Gandhi: ಇಂದು ಇಡಿ ಕಚೇರಿಯಲ್ಲಿ ಏನೇನಾಯ್ತು? ನಾಳೆಯೂ ನಡೆಯಲಿದೆ ರಾಹುಲ್ ಗಾಂಧಿ ವಿಚಾರಣೆ

ಇಡಿ ವಿಚಾರಣೆಗೆ ಒಳಗಾದ ರಾಹುಲ್ ಗಾಂಧಿ

ಇಡಿ ವಿಚಾರಣೆಗೆ ಒಳಗಾದ ರಾಹುಲ್ ಗಾಂಧಿ

ಇಂದಿಗೇ ರಾಹುಲ್ ಗಾಂಧಿ ವಿಚಾರಣೆ ಮುಗಿದಿಲ್ಲ. ಹೀಗಾಗಿ ನಾಳೆಯೂ ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ನಾಳೆ ಕೂಡ ರಾಹುಲ್ ಗಾಂಧಿ ವಿಚಾರಣೆಗಾಗಿ ಇಡಿ ಕಚೇರಿಗೆ ಆಗಮಿಸಲಿದ್ದಾರೆ ಅಂತ ಹೇಳಲಾಗ್ತಿದೆ.

  • Share this:

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್ (National Herald Case) ಕಾಂಗ್ರೆಸ್ (Congress) ವರಿಷ್ಠರ ಸುತ್ತ ಸುತ್ತು ಹಾಕುತ್ತಲೇ ಇದೆ. ಇದರ ತನಿಖೆ (Investigation) ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED Officers) ವಿಚಾರಣೆಗೆ ಹಾಜರಾಗುವಂತೆ ಎಐಸಿಸಿ ಅಧ್ಯಕ್ಷೆ (AICC President) ಸೋನಿಯಾ ಗಾಂಧಿ (Sonia Gandhi) ಹಾಗೂ ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿಗೆ (Rahul Gandhi) ನೋಟಿಸ್ (Notice) ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಾಹುಲ್ ಗಾಂಧಿ ನವದೆಹಲಿಯ (New Delhi) ಇಡಿ ಕಚೇರಿಯಲ್ಲಿ ವಿಚಾರಣೆಗೆ (Enquiry) ಹಾಜರಾಗಿದ್ದರು. ಸುಮಾರು 8 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆದಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರಿಗೆ ಇಡಿ ಅಧಿಕಾರಿಗಳು ಮಹತ್ವದ ಮಾಹಿತಿ (Information) ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ನಾಳೆಯೂ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಲಿದ್ದು, ಇನ್ನಷ್ಟು ಮಹತ್ವದ ಮಾಹಿತಿ ಸಿಗುವ ಸಾಧ್ಯತೆ ಇದೆ.


ರಾಹುಲ್ ಗಾಂಧಿಗೆ ಸಾಥ್ ನೀಡಿದ ಪ್ರಿಯಾಂಕಾ ಗಾಂಧಿ


ಬರೋಬ್ಬರಿ 8 ಗಂಟೆಗೂ ಹೆಚ್ಚು ಕಾಲ ಇಂದು ರಾಹುಲ್ ಗಾಂಧಿಯವರನ್ನು ಇಡಿ ಅಧಿಕಾರಿಗಳು ಇಂದು ವಿಚಾರಣೆ ನಡೆಸಿದರು. ಬೆಳಗ್ಗೆ 11 ಗಂಟೆಗೆ ಇಡಿ ಕಚೇರಿಗೆ ರಾಹುಲ್ ಗಾಂಧಿ ಆಗಮಿಸಿದರು. ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ನಾಯಕರ ಬ್ಯಾಟರಿಯೊಂದಿಗೆ ಮತ್ತು ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಸಿಬ್ಬಂದಿಯ ಬೆಂಗಾವಲು ಪಡೆಯೊಂದಿಗೆ ರಾಹುಲ್ ಗಾಂಧಿ ಬಂದಿದ್ದರು.


8 ಗಂಟೆಗೂ ಹೆಚ್ಚು ಕಾಲ ರಾಹುಲ್ ಗಾಂಧಿ ವಿಚಾರಣೆ


ರಾಹುಲ್ ಗಾಂಧಿ ಸತತ 8 ಗಂಟೆಗಳ ಕಾಲ ಅಧಿಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಗೆ ವರಗೆ ವಿಚಾರಣೆ ಎದುರಿಸಿದ ರಾಹುಲ್ ಗಾಂಧಿಗೆ ಒಂದೂವರೆ ಗಂಟೆಗಳ ಕಾಲ ಊಟದ ವಿರಾಮ ನೀಡಲಾಗಿತ್ತು. ಬಳಿಕ ಮಧ್ಯಾಹ್ನ 3.30ಕ್ಕೆ ಮತ್ತೆ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ ರಾತ್ರಿ 9 ಗಂಟೆ ವರೆಗೆ ವಿಚಾರಣೆ ಎದುರಿಸಿದ್ದಾರೆ.


ಇದನ್ನೂ ಓದಿ: Youth Congress Protest: ಪೊಲೀಸರನ್ನು ನೋಡಿ ಎದ್ದೂ ಬಿದ್ದು ಓಡಿದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ! ಫುಲ್ ಟ್ರೋಲ್ ಆಯ್ತು ವಿಡಿಯೋ


ಹಲವು ಮಹತ್ವದ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರ


ನ್ಯಾಷನಲ್ ಹೆರಾಲ್ಡ್‌ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ. ಒಟ್ಟು 8 ಗಂಟೆಗಳ ವಿಚಾರಣೆಯಲ್ಲಿ ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.


ನಾಳೆಯೂ ವಿಚಾರಣೆಗೆ ಹಾಜರಾಗಲಿದ್ದಾರೆ ರಾಹುಲ್ ಗಾಂಧಿ


ಇನ್ನು ಇಂದಿಗೇ ರಾಹುಲ್ ಗಾಂಧಿ ವಿಚಾರಣೆ ಮುಗಿದಿಲ್ಲ. ಹೀಗಾಗಿ ನಾಳೆಯೂ ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ನಾಳೆ ಕೂಡ ರಾಹುಲ್ ಗಾಂಧಿ ವಿಚಾರಣೆಗಾಗಿ ಇಡಿ ಕಚೇರಿಗೆ ಆಗಮಿಸಲಿದ್ದಾರೆ ಅಂತ ಹೇಳಲಾಗ್ತಿದೆ.


ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ


ನ್ಯಾಷನಲ್ ಹೆರಾಲ್ಡ್‌ ಕೇಸ್‌ನಲ್ಲಿ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ನೋಟಿಸ್ ಕೊಟ್ಟಿದ್ದಕ್ಕೆ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.


ಇದನ್ನೂ ಓದಿ: Smriti Irani: ಗಾಂಧಿ ಫ್ಯಾಮಿಲಿಯ ಆಸ್ತಿ ಉಳಿಸಲು ಕಾಂಗ್ರೆಸ್‌ ಹೋರಾಟ! ಕೇಂದ್ರ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯ


ಬೆಂಗಳೂರಲ್ಲಿ ಇಡಿ ಕಚೇರಿ ಮುತ್ತಿಗೆ ಯತ್ನ


ಬೆಂಗಳೂರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಹೋರಾಟ ಮಾಡಿದರು. ಬೆಂಗಳೂರಿನ ಇಡಿ ಕಚೇರಿ ಮುಂದೆ ನಡೆದ ಹೋರಾಟದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು, ಕೆಪಿಸಿಸಿ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

top videos
    First published: