ರಾಹುಲ್ ಗಾಂಧಿ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು; ಇನ್ಮುಂದೆಯೂ ಅಧ್ಯಕ್ಷರಾಗಿಯೇ ಇರಲಿದ್ದಾರೆ- ರಣದೀಪ್ ಸುರ್ಜೇವಾಲಾ

ಹಾಗೆಯೇ ರಾಹುಲ್​​ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಪಕ್ಷ ಸಂಘಟನೆ ಮಾಡಲು ರಾಹುಲ್‌ ಒತ್ತು ನೀಡಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಹೇಳಿದರು.

Ganesh Nachikethu | news18
Updated:June 12, 2019, 5:42 PM IST
ರಾಹುಲ್ ಗಾಂಧಿ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು; ಇನ್ಮುಂದೆಯೂ ಅಧ್ಯಕ್ಷರಾಗಿಯೇ ಇರಲಿದ್ದಾರೆ- ರಣದೀಪ್ ಸುರ್ಜೇವಾಲಾ
ರಾಹುಲ್ ಗಾಂಧಿ.
  • News18
  • Last Updated: June 12, 2019, 5:42 PM IST
  • Share this:
ನವದೆಹಲಿ(ಜೂನ್​​.12): ಕಾಂಗ್ರೆಸ್​​ ಅಧ್ಯಕ್ಷ ಸ್ಥಾನದಲ್ಲಿ ರಾಹುಲ್​​ ಗಾಂಧಿಯವರೇ ಮುಂದುವರೆಯಲಿದ್ದಾರೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ಧಾರೆ. ಅಲ್ಲದೇ ರಾಹುಲ್​​ ಜೀ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ಅಧ್ಯಕ್ಷರಾಗಿದ್ದಾರೆ, ಇನ್ಮುಂದೆಯೂ ಅಧ್ಯಕ್ಷರಾಗಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗಾರರ ಜತೆ ಮಾತಾಡಿದ ಸುರ್ಜೆವಾಲ,  ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಸ್ತಾಪ ಮಾಡಿದ್ದರು. ಈ ಪ್ರಸ್ತಾಪ ಕಾಂಗ್ರೆಸ್​ ನಾಯಕರು ತಿರಸ್ಕರಿಸಿದ್ದಾರೆ. ರಾಹುಲ್​​ ಅವರಿಗೆ ಅಧ್ಯಕ್ಷ ಸ್ಥಾನ ತ್ಯಜಿಸಬೇಡಿ ಎಂದು ಒತ್ತಾಯಿಸಿದ್ದಾರೆ ಎಂದರು.

'ಪಕ್ಷದ ಅಧ್ಯಕ್ಷ ಸ್ಥಾನ ನೆಹರೂ ಕುಟುಂಬದ ಹೊರತಾಗಿರಬೇಕು. ಈ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಅವರ ಹೆಸರೂ ಪ್ರಸ್ತಾಪ ಮಾಡಬೇಡಿ ಎಂದು ರಾಹುಲ್​​ ಮನವಿ ಮಾಡಿದ್ದರು. ಈ ಬಗ್ಗೆ ಹಿರಿಯ ಕಾಂಗ್ರೆಸ್​ ನಾಯರು ಇಂದು ಸಭೆ ನಡೆಸಿದ್ದೇವೆ. ಸಭೆಯಲ್ಲಿ ರಾಹುಲ್‌ ಗಾಂಧಿಯವರ ಪ್ರಸ್ತಾಪವನ್ನು ಸರ್ವಾನುಮತದಿಂದ ತಿರಸ್ಕರಿಸಿದ್ದೇವೆ. ಪಕ್ಷಕ್ಕೆ ರಾಹುಲ್ ಜೀ ಮಾರ್ಗದರ್ಶನದ ಅಗತ್ಯವಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಇಮ್ರಾನ್​​ ಖಾನ್​​ಗೆ ಮೋದಿ ಸೆಡ್ಡು: ಎಸ್‌ಸಿಓ ಶೃಂಗಸಭೆಗೆ ಪಾಕ್ ವಾಯುಮಾರ್ಗ ಬಳಸದಿರಲು ನಿರ್ಧಾರ

ಹಾಗೆಯೇ ರಾಹುಲ್​​ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಪಕ್ಷ ಸಂಘಟನೆ ಮಾಡಲು ರಾಹುಲ್‌ ಒತ್ತು ನೀಡಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕರಾದ ಅಹಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಪಿ. ಚಿದಂಬರಂ, ಕೆ.ಸಿ. ವೇಣುಗೋಪಾಲ್, ಸುರ್ಜೇವಾಲ, ಜೈರಾಂ ರಮೇಶ್ ಮತ್ತು ಆನಂದ ಶರ್ಮಾ ಉಪಸ್ಥಿತರಿದ್ದರು.
---------
First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading