‘ಬಡವರನ್ನು ಅಭಿವೃದ್ದಿಯಿಂದ ಹೊರಗಿಟ್ಟರೆ, ಐಸಿಸ್​​ ಸಂಘಟನೆ ಸೇರುತ್ತಾರೆ’: ರಾಹುಲ್​ ಗಾಂಧಿ

news18
Updated:August 23, 2018, 12:18 PM IST
‘ಬಡವರನ್ನು ಅಭಿವೃದ್ದಿಯಿಂದ ಹೊರಗಿಟ್ಟರೆ, ಐಸಿಸ್​​ ಸಂಘಟನೆ ಸೇರುತ್ತಾರೆ’: ರಾಹುಲ್​ ಗಾಂಧಿ
news18
Updated: August 23, 2018, 12:18 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಆ.23): ದೇಶವನ್ನು ಅಭಿವೃದ್ಧಿಗೊಳಿಸದೇ ಜನರನ್ನು ಈ ಪ್ರಕ್ರಿಯೆಯಿಂದ ದೂರವಿಟ್ಟಾಗ ಐಸ್ಸಿಸ್​ ತರಹದ ಬಂಡಾಯಗೋರ ಸಂಘಟನೆಗಳು ದೇಶದಲ್ಲಿ ಹುಟ್ಟಿಕೊಳ್ಳುತ್ತದೆ ಎಂದು  ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.

ಜರ್ಮನಿಯ ಹ್ಯಾಮ್​ಬರ್ಗ್​ನಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಪರಿಶಿಷ್ಟ ಪಂಗಡ, ದಲಿತ ಮತ್ತು ಅಲ್ಪ ಸಂಖ್ಯಾತಸಮುದಾಯವನ್ನು ಅಭಿವೃದ್ಧಿಯಿಂದ ಹೊರಗಿಡುತ್ತಿದ್ದು, ಇದು ಅಪಾಯಕಾರಿ ಸಂಗತಿಯಾಗಿದೆ ಎಂದರು

21ನೇ ಶತಮಾನದಲ್ಲಿ ಜನರನ್ನು ಈ ರೀತಿಯ ಪ್ರಕ್ರಿಯೆಯಿಂದ ದೂರವಿಡುವುದು ಕೇಡುಗಾಲದ ಮುನ್ಸೂಚನೆಯಾಗಿದೆ.  21ನೇ ಶತಮಾನದಲ್ಲಿ ಜನರಿಗೆ  ​ನಿರ್ದಿಷ್ಟ ದೃಷ್ಟಿಕೋನ ನೀಡದಿದ್ದರೆ ಬೇರೆಯಾರಾದರೂ ಬಂದು ಅವರಿಗೆ ಮಾರ್ಗ ತೋರಿಸುತ್ತಾರೆ ಎಂದು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಜನಸಮೂಹ ಹೆಚ್ಚಲು ಕಾರಣ ನಿರುದ್ಯೋಗವಾಗಿದೆ. ನಿರುದ್ಯೋಗದ ಹತಾಶೆಯ  ಮನಸ್ಥಿತಿ ಜನರು  ಗುಂಪು ಸಮೂಹ ಹತ್ಯೆಯಂತಹ ಘಟನೆಗೆ ಕಾರಣವಾಗುತ್ತಿದ್ದಾರೆ. ಸಮಾಜದ ಎಲ್ಲರಿಗೂ ಸರಿಸಮಾನ ಅವಕಾಶ ನೀಡದೇ ಬಡ ಜನರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ನೋಟು ಅಮಾನ್ಯೀಕರಣ ಹಾಗೂ ಜಿಎಸ್​ಟಿಯನ್ನು ಸರಿಯಾಗಿ ಜಾರಿಗೆತರದ ಹಿನ್ನೆಲೆಯಲ್ಲಿ ಸಣ್ಣ ಉದ್ಯಮಿಗಳು ನಷ್ಟ ಅನುಭಿಸುವಂತೆ ಆಗಿದೆ ಎಂದರು.
Loading...

ಜಗತ್ತಿನಲ್ಲಿ ನಡೆಯುವ ಬದಲಾವಣೆಗಳಿಂದ ಜನಸಾಮಾನ್ಯ  ನಿರ್ದಿಷ್ಟ ರಕ್ಷಣೆ ಬೇಕೆಂದು ಬಯಸುತ್ತಾರೆ. ಆದರೆ, ನೋಟು ಅಮಾನ್ಯೀಕರಣ ಮತ್ತು ಜಿಎಸ್​ಟಿಯಿಂದ ಆದ ಆರ್ಥಿಕ ಬದಲಾವಣೆಗಳಿಂದ ಬಿಜೆಪಿ ಜನಸಾಮಾನ್ಯರಿಗೆ ಯಾವುದೇ ರಕ್ಷಣೆ ನೀಡಲಿಲ್ಲ ಎಂದು ಆರೋಪಿಸಿದೆ.

ಮೇಲ್ವರ್ಗದ ಜನರು ಪಡೆಯುವಂತೆ ಪರಿಶಿಷ್ಟ ಪಂಗಡ, ಬಡ, ಕೃಷಿಕ, ಕೆಳವರ್ಗದ ಅಲ್ಪಸಂಖ್ಯಾತ ಸಮುದಾಯದ ಜನರು ಕೂಡ ಪ್ರಯೋಜನವನ್ನು ಪಡೆಯಬೇಕು. ಅವರು ಕೆಲವೊಂದು ನಿರ್ದಿಷ್ಟ ಗುಂಪುಗಳ ಜನರಿಗೆ ಮಾತ್ರ ಸಹಾಯ ಮಾಡುತ್ತಿದ್ದಾರೆ ಎಂದರು

ಸಂಸತ್​ನಲ್ಲಿ ಮೋದಿಯನ್ನು ಅಪ್ಪಿಕೊಂಡಿದ್ದನ್ನು ತಮ್ಮ ಪಕ್ಷದವರೇ ಇಷ್ಟಪಡಲಿಲ್ಲ ಎಂದು ಕೂಡ ಒಪ್ಪಿಕೊಂಡರು.

ಭಾರತದಲ್ಲಿರುವ ದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ. ಆದರೆ ಇದನ್ನು ಪ್ರಧಾನಿ ಒಪ್ಪಿಕೊಳ್ಳುತ್ತಿಲ್ಲ. ಮೊದಲು  ಸಮಸ್ಯೆಯನ್ನು ನಾವು ಒಪ್ಪಿಕೊಳ್ಳಬೇಕು ಎಂದರು.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...