ತಂದೆ ಅಸ್ಥಿ ವಿಸರ್ಜಿಸಿದ ಸ್ಥಳಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿ

ತಮಿಳು ನಾಡಿನಲ್ಲಿ ಎಲ್​ಟಿಟಿಇ ಉಗ್ರರು ನಡೆಸಿದ ಬಾಂಬ್​ ಸ್ಪೋಟದಲ್ಲಿ ಅಸುನೀಗಿದ ರಾಜೀವ್​ ಗಾಂಧಿ ಅವರ ಅಸ್ಥಿಯನ್ನು 1991ರಲ್ಲಿ ವೈಯನಾಡಿನ ಪಾಪನಾಶಿನಿಯಲ್ಲಿ ವಿಸರ್ಜಿಸಲಾಗಿತ್ತು.

Seema.R | news18
Updated:April 17, 2019, 5:32 PM IST
ತಂದೆ ಅಸ್ಥಿ ವಿಸರ್ಜಿಸಿದ ಸ್ಥಳಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿ
ರಾಹುಲ್​ ಗಾಂಧಿ
Seema.R | news18
Updated: April 17, 2019, 5:32 PM IST
ವಯಾನಾಡು (ಏ.17): ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಿಂದ ಚುನಾವಣಾ ಕಣಕ್ಕೆ ಇಳಿದಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನಿನ್ನೆಯಿಂದ ವಯನಾಡು ಕ್ಷೇತ್ರದಲ್ಲಿ ಅಧಿಕೃತ ಪ್ರಚಾರ ಆರಂಭಿಸಿದ್ದಾರೆ.

ರಾಹುಲ್​ ಗಾಂಧಿ ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಒಂದು ರೀತಿಯ ಭಾವಾನಾತ್ಮಕ ಸಂಬಂಧವೂ ಇದೆ. ಕಾರಣ ಇದೇ ಕ್ಷೇತ್ರದಲ್ಲಿ ರಾಹುಲ್​ ಗಾಂಧಿ ಅಪ್ಪ ರಾಜೀವ್​ ಗಾಂಧಿ ಅಸ್ಥಿ ವಿಸರ್ಜನೆಯಾಗಿರುವುದು.

ತಮಿಳು ನಾಡಿನಲ್ಲಿ ಎಲ್​ಟಿಟಿಇ ಉಗ್ರರು ನಡೆಸಿದ ಬಾಂಬ್​ ಸ್ಪೋಟದಲ್ಲಿ ಅಸುನೀಗಿದ ರಾಜೀವ್​ ಗಾಂಧಿ ಅವರ ಅಸ್ಥಿಯನ್ನು 1991ರಲ್ಲಿ ವೈಯನಾಡಿನ ಪಾಪನಾಶಿನಿಯಲ್ಲಿ ವಿಸರ್ಜಿಸಲಾಗಿತ್ತು. ಇಲ್ಲಿನ ತಿರುನೆಲ್ಲಿ ಗ್ರಾಮದ ವಿಷ್ಣು ದೇವಾಲಯದ ಪಾಪನಾಶಿನಿ ನದಿಯಲ್ಲಿ ರಾಜೀವ್​ ಗಾಂಧಿ ಅಸ್ಥಿ ವಿಸರ್ಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಊರಿನೊಂದಿಗೆ ರಾಹುಲ್​ಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.

ಇನ್ನು  ನಿನ್ನೆಯಿಂದ ವಯನಾಡುವಿನಲ್ಲಿ ಪ್ರಚಾರ ಆರಂಭಿಸಿರುವ ರಾಹುಲ್​ ಗಾಂಧಿ ಇಂದು ಈ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಇಲ್ಲಿನ ಅರ್ಚಕರ ಮಾರ್ಗದರ್ಶನದಂತೆ ಅವರು ತಮ್ಮ ಅಜ್ಜಿ(ಇಂದಿರಾಗಾಂಧಿ)., ತಂದೆ, ಮುತ್ತಾತಾ, ಹಾಗೂ ಪುಲ್ವಾಮ ದಾಳಿ ಸಂತ್ರಸ್ತರಿಗೆ ಧಾರ್ಮಿಕ ಕಾರ್ಯ ನಡೆಸಿದರು ಎಂದು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್​ ತಿಳಿಸಿದ್ದಾರೆ.ಬಿಳಿ ದೋತಿ, ಅಂಗವಸ್ತ್ರ ಧರಿಸಿದ ಅವರು ದೇವಾಸ್ಥಾನಕ್ಕೆ ಭೇಟಿ ನೀಡಿ ಧಾರ್ಮಿಕ ವಿಧಿ ವಿಧಾನದಲ್ಲಿ ಭಾಗಿಯಾದರು. ಇದಾದ ಬಳಿಕ ದೇವಾಲಯದಿಂದ 700 ಮೀ ದೂರವಿರುವ  ತಂದೆ ಅಸ್ಥಿ ವಿಸರ್ಜಿಸಿದ ಸ್ಥಳಕ್ಕೆ ಅವರು ಭೇಟಿ ನೀಡಿದರು.

ಇದನ್ನು ಓದಿ: ಅದೃಷ್ಟದ ರೇಂಜ್​ ರೋವರ್ ಕಾರನ್ನು​ ರಿಪೇರಿಗೆ ಬಿಟ್ಟ ಎಚ್​ಡಿಕೆ; ಭಾರತಕ್ಕೆ ಬಂದ ಮೊದಲ ಲೆಕ್ಸೆಸ್ ದುಬಾರಿ​ ಕಾರಿ​ನಲ್ಲಿ ಸಿಎಂ ಓಡಾಟ!

ಕಳೆದ ಬಾರಿ ವಯನಾಡುವಿಗೆ ಬಂದಾಗ  ಅವರು ಈ ಸ್ಥಳಕ್ಕೆ ಭೇಟಿ ನೀಡಲು ಇಚ್ಛಿಸಿದಾದರೂ, ರಕ್ಷಣಾ ದೃಷ್ಠಿಯಿಂದ ಅದು ಸಾಧ್ಯವಾಗಿರಲಿಲ್ಲ.

28 ವರ್ಷದ ಹಿಂದೆ ರಾಜೀವ್​ ಗಾಂಧಿ ಅಸ್ಥಿ ವಿಸರ್ಜನೆ ಮಾಡುವ ವೇಳೆ ಕೇರಳ ಸಿಎಂ ಕೆ ಕರುಣಾಕರನ್​, ಮುಲ್ಲಪಲ್ಲಿ ರಾಮಚಂದ್ರನ್​, ಕೆಸಿ ವೇಣುಗೋಪಾಲ್​ ಮತ್ತು ರಮೇಶ್​ ಚೆನ್ನಿಥಾಲ್​ ಭಾಗಿಯಾಗಿದ್ದರು.

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626