ಹುಬ್ಬಳ್ಳಿಯಲ್ಲಿ ಮಾಡಿಕೊಂಡ ಹರಕೆ ತೀರಿಸಲು ಮಾನಸ ಸರೋವರ ಯಾತ್ರೆಗೆ ಸಿದ್ಧರಾದ ರಾಹುಲ್​ ಗಾಂಧಿ

news18
Updated:August 29, 2018, 2:18 PM IST
ಹುಬ್ಬಳ್ಳಿಯಲ್ಲಿ ಮಾಡಿಕೊಂಡ ಹರಕೆ ತೀರಿಸಲು ಮಾನಸ ಸರೋವರ ಯಾತ್ರೆಗೆ ಸಿದ್ಧರಾದ ರಾಹುಲ್​ ಗಾಂಧಿ
news18
Updated: August 29, 2018, 2:18 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಆ.28): ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಇದೇ ಆಗಸ್ಟ್​ 31ರಂದು ಕೈಲಾಸ ಮಾನಸಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಕಾರ್ಯಕ್ರಮದಲ್ಲಿ ತಾವು ಕೈಲಾಸ ಮಾನಸಸರೋವರ ಯಾತ್ರೆ ಕೈಗೊಳ್ಳುವ ಬಗ್ಗೆ ಅವರು ಇಚ್ಛೆ ವ್ಯಕ್ತಪಡಿಸಿದ್ದರು. ಈಗ ಆ ಇಚ್ಛೆಯಂತೆ ಅವರು ಮಾನಸ ಸರೋವರ ಯಾತ್ರೆಯನ್ನು ಎರಡುದಿನಗಳ ಕಾಲ ಕೈಗೊಳ್ಳಲಿದ್ದಾರೆ.



ಸದ್ಯ ಪ್ರವಾಹದಿಂದ ತತ್ತರಿಸಿರುವ ಕೇರಳ ನಿರಾಶ್ರಿತರ ಸಮಸ್ಯೆ ಆಲಿಸುತ್ತಿರುವ ರಾಹುಲ್​ ಅಲ್ಲಿಂದ ಮರಳಿದ ಬಳಿಕ ಈ ಯಾತ್ರೆ ಕೈಗೊಳ್ಳಲಿದ್ದಾರೆ. ಮಾನಸ ಸರೋವರಕ್ಕೆ ಅವರು ನೇಪಾಳ ಮಾರ್ಗ ಬದಲು ಚೀನಾದ ಮೂಲಕ ಯಾತ್ರೆ ನಡೆಸಲಿದ್ದಾರೆ.

ಕರ್ನಾಟಕ ಚುನಾವಣೆ ಪ್ರಚಾರ ವೇಳೆ ಹುಬ್ಬಳಿಯಲ್ಲಿ ವಿಮಾನ ಲ್ಯಾಂಡಿಂಗ್​ ವೇಳೆ ವಿಮಾನ ಹಠಾತ್ತನೆ 8 ಸಾವಿರ ಅಡಿ ಕೆಳಗೆ ಕುಸಿದಿತ್ತು. ಅಲ್ಲದೇ ವಿಮಾನ ಎಡಭಾಗಕ್ಕೆ ವಾಲಿತ್ತು. ಈ ವೇಳೆ ಎಲ್ಲವೂ ಮುಗಿಯಿತು ಎಂದು ಕೊಂಡಿದ್ದೆ ಎಂದು ರಾಹುಲ್ ಆತಂಕ ವ್ಯಕ್ತಪಡಿಸಿದ್ದರು.  ಈ ವೇಳೆ​ ಶಿವನನ್ನು ನೆನೆದು ಕೈಲಾಸ ಮಾನಸ ಸರೋವರ ಯಾತ್ರೆಗೆ ನಿರ್ಧರಿಸಿದ್ದು , ಚುನಾವಣೆ ಮುಗಿದ ಮೇಲೆ ಇದಕ್ಕೆ ಅನುಮತಿ ಕೊಡು ಎಂದು ಕೇಳಿಕೊಂಡಿದ್ದರು.
First published:August 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ