• Home
 • »
 • News
 • »
 • national-international
 • »
 • Mann ki Baat: 2021ರ ಪ್ರಧಾನಿಯ ಮೊದಲ ಮನ್​ ಕೀ ಬಾತ್​ನಲ್ಲಿ ಚೀನಾ ವಿಷಯ ಪ್ರಸ್ತಾಪಿಸಲು ರಾಹುಲ್ ಗಾಂಧಿ ಸಲಹೆ

Mann ki Baat: 2021ರ ಪ್ರಧಾನಿಯ ಮೊದಲ ಮನ್​ ಕೀ ಬಾತ್​ನಲ್ಲಿ ಚೀನಾ ವಿಷಯ ಪ್ರಸ್ತಾಪಿಸಲು ರಾಹುಲ್ ಗಾಂಧಿ ಸಲಹೆ

ನರೇಂದ್ರ ಮೋದಿ

ನರೇಂದ್ರ ಮೋದಿ

'ಮನ್ ಕಿ ಬಾತ್' ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಅವರು ಮಧ್ಯಾಹ್ನ 3 ಗಂಟೆಗೆ ಸ್ವಾಮಿ ವಿವೇಕಾನಂದ ಅವರೊಡನೆ ನಿಕಟ ಸಂಬಂಧ ಹೊಂದಿದ್ದ ಪ್ರಬುದ್ಧ ಭಾರತ ಪತ್ರಿಕೆಯ 125ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 • Share this:

  ನವದೆಹಲಿ; 2021 ರ ಮೊದಲ 'ಮನ್ ಕಿ ಬಾತ್'ಗೆ ಕೆಲವು ಗಂಟೆಗಳ ಮುನ್ನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಚೀನಾ ವಿಷಯವಾಗಿ ಸಲಹೆ ನೀಡಿ ಟ್ವೀಟ್ ಮಾಡಿದ್ದಾರೆ. "ಹೆದರದಿರಿ, ಇಂದು ಚೀನಾ ಬಗ್ಗೆ ಮಾತನಾಡಲು ಪ್ರಯತ್ನಿಸಿ" ಎಂದು ಗಾಂಧಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಮಾಸಿಕ ರೇಡಿಯೊ ಕಾರ್ಯಕ್ರಮದ 73 ನೇ ಸಂಚಿಕೆಯು ರಾಷ್ಟ್ರವ್ಯಾಪಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡುವ ದಿನವೇ ನಡೆದಿದೆ. ಜೊತೆಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2021-22ರ ಕೇಂದ್ರ ಬಜೆಟ್ ಮಂಡಿಸುವ ಒಂದು ದಿನ ಮುಂಚೆ,  ಮತ್ತು ಹೊಸ ಕೃಷಿ ಸುಧಾರಣೆಗಳ ವಿರುದ್ಧ ರೈತರು ನಡೆಸುತ್ತಿರುವ ಆಂದೋಲನದಲ್ಲಿ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆಗೆ ನುಗ್ಗಿ ದೆಹಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಕೆಲವು ದಿನಗಳ ನಂತರ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.


  ಪ್ರತಿಭಟನಾ ನಿರತ ರೈತರಿಗೆ ಕೃಷಿ ಕಾನೂನುಗಳ ಕುರಿತು ತಮ್ಮ ಸರ್ಕಾರದ ನಿಲುವನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ನೆನ್ನೆ ಪ್ರಧಾನಿ ಮೋದಿ ತಿಳಿಸಿದ್ದರು. ಅದೇ ರೀತಿ ಬಜೆಟ್ ಅಧಿವೇಶನವನ್ನು ಸುಗಮವಾಗಿ ನಡೆಸಲು ಸಹಕರಿಸುವಂತೆ ರಾಜ್ಯಸಭೆಯ ಸದಸ್ಯರೊಂದಿಗೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಸಭೆ ನಡೆಸಿ ಮನವಿ ಮಾಡಿದ್ದರು.  ಇದನ್ನು ಓದಿ: ಪಶ್ಚಿಮಬಂಗಾಳ ಚುನಾವಣೆಗೂ ಮುನ್ನ ಟಿಎಂಸಿಯ ರಜಿಬ್ ಬ್ಯಾನರ್ಜಿ ಸೇರಿ ಐವರು ಮುಖಂಡರು ಬಿಜೆಪಿ ತೆಕ್ಕೆಗೆ


  'ಮನ್ ಕಿ ಬಾತ್' ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಅವರು ಮಧ್ಯಾಹ್ನ 3 ಗಂಟೆಗೆ ಸ್ವಾಮಿ ವಿವೇಕಾನಂದ ಅವರೊಡನೆ ನಿಕಟ ಸಂಬಂಧ ಹೊಂದಿದ್ದ ಪ್ರಬುದ್ಧ ಭಾರತ ಪತ್ರಿಕೆಯ 125ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

  Published by:HR Ramesh
  First published: