ಸೋತರೂ ಭಾರತೀಯರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ ಎಂದ Rahul Gandhi

ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ವಯಂಸೇವಕರಿಗೆ ಅವರ ಶ್ರಮ ಮತ್ತು ಸಮರ್ಪಣೆಗಾಗಿ ನನ್ನ ಕೃತಜ್ಞತೆಗಳು ಎಂದು ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ಪಂಚರಾಜ್ಯಗಳ ವಿಧಾಸಭಾ ಚುನಾವಣೆಯಲ್ಲಿ (Assembly Election Results 2022) ಕಾಂಗ್ರೆಸ್ ಮಕಾಡೆ ಮಲಗಿದೆ. ಚುನಾವಣಾ ಫಲಿತಾಂಶದ ಕುರಿತು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಟ್ವೀಟ್ (Rahul Gandhi) ಮಾಡಿ ಚುನಾವಣಾ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಜನಾದೇಶವನ್ನು ಗೆದ್ದವರಿಗೆ ಶುಭಾಶಯಗಳು. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು (Congress Workers) ಮತ್ತು ಸ್ವಯಂಸೇವಕರಿಗೆ ಅವರ ಶ್ರಮ ಮತ್ತು ಸಮರ್ಪಣೆಗಾಗಿ ನನ್ನ ಕೃತಜ್ಞತೆಗಳು. ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಟ್ವಿಟರ್​ನಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ಟ್ರೋಲ್ ಮಾಡಿ ನೆಟ್ಟಿಗರು ಹಲವು ಮೀಮ್​ಗಳನ್ನು ಸಹ ಹರಿಬಿಡುತ್ತಿದ್ದಾರೆ.

ನಾವು ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ನಾವು ಕಲಿಯುತ್ತೇವೆ. ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ.ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಸಂದೇಶ ತಿಳಿಸಿದ್ದಾರೆ.ರಾಹುಲ್, ಪ್ರಿಯಾಂಕಾ ಕಣಕ್ಕಿಳಿದರೂ ಆಗಲಿಲ್ಲ ಮ್ಯಾಜಿಕ್
ರಾಜಕೀಯ ವೀಕ್ಷಕರು ಕಾಂಗ್ರೆಸ್ ಪಕ್ಷದ ಸೋಲನ್ನು ದೇಶದ ಅತಿ ಹಳೆಯ ಪಕ್ಷಕ್ಕೆ ಉಂಟಾದ ದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಿದ್ದಾರೆ. ಇದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ "ಬ್ರಾಂಡ್ ಮೌಲ್ಯವನ್ನು ಕಡಿಮೆಗೊಳಿಸಬಹುದು ಎಂದು ಸಹ ಹೇಳಲಾಗಿದೆ. ಏಕೆಂದರೆ ಉತ್ತರ ಪ್ರದೇಶದಲ್ಲಿ ಸ್ವತಃ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕಣಕ್ಕಿಳಿದು ಭರ್ಜರಿ ಪ್ರಚಾರ ನಡೆಸಿದ್ದರು.

ನವಜೋತ್​ ಸಿಂಗ್​ ಸಿಧುಗೂ ಸೋಲು

ಅಮೃತ್​ಸರ ಪೂರ್ವದಿಂದ ಕಣಕ್ಕೆ ಇಳಿದಿದ್ದ ಪಂಜಾಬ್​​ ಕಾಂಗ್ರೆಸ್​ ಅಧ್ಯಕ್ಷರಾಗಿರುವ ನವಜೋತ್​ ಸಿಂಗ್​ ಸಿಧು ಕೂಡ ಎಎಪಿ ಅಭ್ಯರ್ಥಿ ಜೀವನ್​ ಜ್ಯೊತ್​​ ಕೌರ್​ ವಿರುದ್ಧ 5000 ಮತಗಳ ಅಂತರದಿಂದ ಸೋತಿದ್ದು, ಜನರ ತೀರ್ಪಿಗೆ ತಲೆ ಬಾಗುವುದಾಗಿ ತಿಳಿಸಿದ್ದಾರೆ. ಜನರ ಧ್ವನಿ, ದೇವರ ಧ್ವನಿಯಂತೆ ನಾನು ಪಂಜಾಬ್​ ಜನರ ತೀರ್ಪು ಒಪ್ಪುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: N Biren Singh: BSF ಯೋಧ, ಫುಟ್​ಬಾಲ್ ಆಟಗಾರ ಬಿರೇನ್ ಸಿಂಗ್​ಗೆ 2ನೇ ಬಾರಿ ಮಣಿಪುರ ಸಿಎಂ ಆಗೋ ಯೋಗ

ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಎರಡನೇ ಗೆಲುವನ್ನು ತೆಕ್ಕೆಗೆ ಹಾಕಿಕೊಂಡಿದೆ.  ಉತ್ತರಾಖಂಡ, ಮಣಿಪುರಗಳಲ್ಲೂ ಭರ್ಜರಿ ಪ್ರಾಬಲ್ಯ ಸಾಧಿಸಿ ಗೆಲುವಿನತ್ತ ಮುಖ ಹಾಕಿದೆ.

ಆಮ್​ ಆದ್ಮಿಯ ಮುಂದೂ ಕೈಚೆಲ್ಲಿದ ಕಾಂಗ್ರೆಸ್
ಪಂಜಾಬ್‌ನ್​ಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ. ಗೋವಾದಲ್ಲೂ ಕಾಂಗ್ರೆಸ್ ಕೈಚೆಲ್ಲಿದೆ. ಈಮೂಲಕ ಐದೂ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲಿನತ್ತ ಸಾಗಿದೆ.

ಇದನ್ನೂ ಓದಿ: Bhagwant Mann Profile: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮಾನ್‌ ಪಂಜಾಬ್ ಸಿಎಂ ಆಗುವ ಮಟ್ಟಕ್ಕೆ ಬೆಳೆದಿದ್ದು ಹೇಗೆ?

ಮಣಿಪುರದಲ್ಲಿ 2017 ರ ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್, ಪ್ರಸ್ತುತ ತೌಬಲ್ ಕ್ಷೇತ್ರ ಸೇರಿದಂತೆ ಕೇವಲ ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
Published by:guruganesh bhat
First published: