110 ನಿಮಿಷಗಳಲ್ಲಿ 11 ಕಿಲೋ ಮೀಟರ್, 3550 ಮೆಟ್ಟಿಲು ಹತ್ತಿ ವೆಂಕಟೇಶ್ವರನ ದರ್ಶನ ಪಡೆದ ರಾಹುಲ್ ಗಾಂಧಿ

ಇನ್ನು ರಾಹುಲ್ ಆಗಮನದ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಭಾರೀ ಬಿಗಿ ಪೋಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ದೇವರ ದರ್ಶನ ಪಡೆದ ರಾಹುಲ್​​, ಅಲ್ಲಿಯೇ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾವೇಶ ಉದ್ದೇಶಿಸಿ ಮಾತನಾಡಿದ್ಧಾರೆ ಎಂದು ತಿಳಿದು ಬಂದಿದೆ.

Ganesh Nachikethu
Updated:February 23, 2019, 8:42 AM IST
110 ನಿಮಿಷಗಳಲ್ಲಿ 11 ಕಿಲೋ ಮೀಟರ್, 3550 ಮೆಟ್ಟಿಲು ಹತ್ತಿ ವೆಂಕಟೇಶ್ವರನ ದರ್ಶನ ಪಡೆದ ರಾಹುಲ್ ಗಾಂಧಿ
ತಿರುಪತಿಯಲ್ಲಿ ರಾಹುಲ್​​ ಗಾಂಧಿ
Ganesh Nachikethu
Updated: February 23, 2019, 8:42 AM IST
ಬೆಂಗಳೂರು(ಫೆ.22): ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿಯವರು ಇಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದು, ಕಾಲ್ನಡಿಗೆ ಮೂಲಕವೇ ತಿರುಪತಿ ಬೆಟ್ಟವನ್ನು ಹತ್ತಿದ್ದಾರೆ. 110 ನಿಮಿಷಗಳಲ್ಲಿ 11 ಕಿಲೋ ಮೀಟರ್, 3550 ಮೆಟ್ಟಿಲು ಹತ್ತಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಇದನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್​​​ ಗುಂಡೂರಾವ್​​ ಟ್ವೀಟ್​​​ ಮುಖೇನ ತಿಳಿಸಿದ್ದು, ಫಿಟ್​​ನೆಸ್​​​ ಚಾಲೆಂಜ್​​ ನೀಡಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದಂತೆಯೇ ಮತ್ತೆ ರಾಹುಲ್​​ ಗಾಂಧೀ ಅವರು ಟೆಂಪಲ್​​ ರನ್​ ಶುರು ಮಾಡಿದ್ದಾರೆ. ಇಂದು ತಿರುಪತಿಗೆ ಭೇಟಿ ನೀಡಿದ್ದ ಕಾಂಗ್ರೆಸ್​​ ಅಧ್ಯಕ್ಷ ಕಾಲ್ನಡಿಗೆ ಮೂಲಕವೇ ಬೆಟ್ಟ ಹತ್ತಿದ್ದರು. ಎಲ್ಲಿಯೂ ನಿಲ್ಲದೇ ಕೇವಲ 110 ನಿಮಿಷಗಳಲ್ಲಿ 11 ಕಿ.ಲೋ ಮೀಟರ್​​​ ದೂರದಲ್ಲಿದ್ದ ದೇವಸ್ಥಾನಕ್ಕೆ ಕ್ರಮಿಸಿದರು.


Loading...

ಮೊದಲಿಗೆ ಆಂಧ್ರಪ್ರದೇಶಕ್ಕೆ ಬಂದಿಳಿದ ರಾಹುಲ್​​ ಗಾಂಧಿ ಅವರಿಗೆ ಟಿಟಿಡಿ (ಟಿರುಮಲ ತಿರುಪತಿ ದೇವಸ್ಥಾನ) ಸದಸ್ಯರು ಭರ್ಜರಿ ಸ್ವಾಗತ ಕೋರಿದ್ದಾರೆ. ಬಳಿಕ ತುಸು ದಣಿದಿದ್ದ ಇವರು, ಟಿಡಿಪಿ ಅತಿಥಿ ಗೃಹದಲ್ಲಿಯೇ ಕೂತು ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದಾರೆ. ನಂತರವೇ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: ಐಎನ್​​ಎಕ್ಸ್​​ ಪ್ರಕರಣ: ಪಿ. ಚಿದಂಬರಂ ವಿರುದ್ಧ ತನಿಖೆಗೆ ಮುಂದಾದ ಸಿಬಿಐ!

ರಾಹುಲ್ ಕೇವಲ 110 ನಿಮಿಷಗಳಲ್ಲಿ ಬೆಟ್ಟವನ್ನು ಏರಿದ್ದಾರೆ. ಅಲಿಪಿರಿಯಲ್ಲಿ ಬೆಟ್ಟವೇರಲು ಶುರು ಮಾಡಿದ ರಾಹುಲ್ ನಡೆದುಕೊಂಡೇ ದೇವಸ್ಥಾನದ ತುದಿ ತಲುಪಿದ್ದಾರೆ. ಬಳಿಕ ಅಲ್ಲಿಮ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರಾಹುಲ್​​ ಗಾಂಧಿಯವರಿಗೆ ಅಲ್ಲಿನ ಅರ್ಚಕರು ಪವಿತ್ರ ರೇಷ್ಮೆ ವಸ್ತ್ರ, ಪ್ರಸಾದ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​​​ ಟಿಕೆಟ್​​​ ಕೊಟ್ರೆ ಪಕ್ಕಾ ಗೆಲ್ತಾರೇ: ಸುಮಲತಾ ಅಂಬರೀಶ್​​​ ಪರ ಗೃಹ ಸಚಿವ ಎಂ.ಬಿ ಪಾಟೀಲ್​​​ ಬ್ಯಾಟಿಂಗ್​​!

ಇನ್ನು ರಾಹುಲ್ ಆಗಮನದ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಭಾರೀ ಬಿಗಿ ಪೋಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ದೇವರ ದರ್ಶನ ಪಡೆದ ರಾಹುಲ್​​, ಅಲ್ಲಿಯೇ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾವೇಶ ಉದ್ದೇಶಿಸಿ ಮಾತನಾಡಿದ್ಧಾರೆ ಎಂದು ತಿಳಿದು ಬಂದಿದೆ.

----------
First published:February 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626