ಮಹಾರಾಷ್ಟ್ರದಲ್ಲಿ ಶಿವಸೇನಾ ಜೊತೆ ಮೈತ್ರಿಗೆ ರಾಹುಲ್ ಗಾಂಧಿ ಅಸಮಾಧಾನ? ಪ್ರಮಾಣವಚನ ಸಮಾರಂಭಕ್ಕೆ ಗೈರು ಸಾಧ್ಯತೆ

ಇಂದು ಮಹಾರಾಷ್ಟ್ರದ ಸರ್ವ ಪಕ್ಷ ಶಾಸಕರು ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸರ್ಕಾರ ರಚಿಸಲಿರುವ ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟ ನಾಳೆ ಅಧಿಕಾರಕ್ಕೇರಲಿದೆ. ಉದ್ಧವ್ ಠಾಕ್ರೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Vijayasarthy SN | news18
Updated:November 27, 2019, 11:55 AM IST
ಮಹಾರಾಷ್ಟ್ರದಲ್ಲಿ ಶಿವಸೇನಾ ಜೊತೆ ಮೈತ್ರಿಗೆ ರಾಹುಲ್ ಗಾಂಧಿ ಅಸಮಾಧಾನ? ಪ್ರಮಾಣವಚನ ಸಮಾರಂಭಕ್ಕೆ ಗೈರು ಸಾಧ್ಯತೆ
ರಾಹುಲ್ ಗಾಂಧಿ.
  • News18
  • Last Updated: November 27, 2019, 11:55 AM IST
  • Share this:
ಮುಂಬೈ(ನ. 27): ಮಹಾರಾಷ್ಟ್ರದಲ್ಲಿ ಎನ್​ಸಿಪಿ-ಕಾಂಗ್ರೆಸ್-ಶಿವಸೇನಾ ನೇತೃತ್ವದ ಮಹಾ ವಿಕಾಸ್ ಆಘಾಡಿಯ ರಥ ನಿರ್ಮಾಣದಲ್ಲಿ ಸೋನಿಯಾ ಗಾಂಧಿ ತೊಡಗಿಸಿಕೊಳ್ಳುತ್ತಿರುವ ಹೊತ್ತಲ್ಲೇ ಅವರ ಮಗ ಹಾಗೂ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೌನಕ್ಕೆ ಶರಣಾಗಿದ್ಧಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿದ್ಯಮಾನಕ್ಕೂ ತನಗೂ ಸಂಬಂಧವಿಲ್ಲವೆಂದು ಕೈಚೆಲ್ಲಿ ಕೂತಿರುವಂತಿದೆ. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ನಾಳೆ ಪ್ರಮಾಣ ವಚನ ಸಮಾರಂಭಕ್ಕೂ ಅವರು ಹಾಜರಾಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಶಿವಸೇನಾ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದು ರಾಹುಲ್ ಗಾಂಧಿಗೆ ಇರಿಸುಮುರುಸು ತಂದಿದೆ ಎನ್ನುತ್ತವೆ ಈ ಮೂಲಗಳು. ಶಿವಸೇನಾ ಜೊತೆ ಕಾಂಗ್ರೆಸ್ ಮತ್ತು ಎನ್​ಸಿಪಿ ಪಕ್ಷಗಳು ಮಾತುಕತೆ ಪ್ರಾರಂಭಿಸಿದಾಗಿನಿಂದಲೂ ರಾಹುಲ್ ಗಾಂಧಿ ಮಹಾರಾಷ್ಟ್ರ ವಿಚಾರದಲ್ಲಿ ಬಹುತೇಕ ಮೌನಕ್ಕೆ ಜಾರಿದ್ಧಾರೆ. ಲೋಕಸಭೆಯಲ್ಲಿ ಒಮ್ಮೆ ಮಾತ್ರ ಅವರು ಮಹಾರಾಷ್ಟ್ರದ ಬಗ್ಗೆ ಮಾತನಾಡಿದ್ದು.

ಇದನ್ನೂ ಓದಿ: ಪ್ರಮಾಣವಚನ ಸ್ವೀಕರಿಸಿದ ಮಹಾರಾಷ್ಟ್ರ ಶಾಸಕರು; ಅಜಿತ್ ಪವಾರ್​ಗೆ ಭಾರೀ ಸ್ವಾಗತ

ಇದೇ ವೇಳೆ, ಇಂದು ಮಹಾರಾಷ್ಟ್ರದ ಸರ್ವ ಪಕ್ಷ ಶಾಸಕರು ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸರ್ಕಾರ ರಚಿಸಲಿರುವ ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟ ನಾಳೆ ಅಧಿಕಾರಕ್ಕೇರಲಿದೆ. ಉದ್ಧವ್ ಠಾಕ್ರೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರ ಜೊತೆಗೆ ಉಪಮುಖ್ಯಮಂತ್ರಿ ಮತ್ತು ಸಚಿವರಾಗಿ ಕೆಲವರು ಪ್ರಮಾಣ ಸ್ವೀಕರಿಸುವ ಸಾಧ್ಯತೆ ಇದೆ.

ಇನ್ನು, ಶಿವಸೇನಾ ಪಕ್ಷವು ಬಿಜೆಪಿಯನ್ನು ಅಧಿಕಾರದಾಹಿ ಎಂದು ಟೀಕಿಸಿದೆ. ಬಹುಮತಕ್ಕೆ ಅಗತ್ಯವಿರುವಷ್ಟು ಶಾಸಕರ ಬೆಂಬಲ ಇಲ್ಲದಿದ್ದರೂ ಬಿಜೆಪಿ ಸರ್ಕಾರ ಮಾಡಿ ಕೈಸುಟ್ಟುಕೊಂಡಿದೆ. ವಿಶ್ವಾಸ ಮತ ಯಾಚನೆಗೆ ಮುನ್ನವೇ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿ ಸೋಲೊಪ್ಪಿಕೊಂಡಿದ್ಧಾರೆ. ಮಹಾರಾಷ್ಟ್ರ ಇತಿಹಾಸದಲ್ಲಿ ಯಾವ ಪಕ್ಷವೂ ಇಂಥ ಅಪಮಾನ ಕಂಡಿದ್ದಿರಲಿಲ್ಲ ಎಂದು ಬಿಜೆಪಿಯನ್ನು ಶಿವಸೇನಾ ಮೂದಲಿಸಿದೆ.

ಇತ್ತ, ಸಿಎಂ ಆಗಲಿರುವ ಉದ್ಧವ್ ಠಾಕ್ರೆ ಅವರು ಶಿವಸೇನಾ ಅಧ್ಯಕ್ಷರಾಗಿ ಮುಂದುವರಿಯಲಿದ್ಧಾರೆ ಎಂದು ಆ ಪಕ್ಷ ಸ್ಪಷ್ಟಪಡಿಸಿದೆ. ಉದ್ಧವ್ ಅವರು ಎರಡೂ ಜವಾಬ್ದಾರಿಯನ್ನು ನಿಭಾಯಿಸುವಷ್ಟು ಸಮರ್ಥರಿದ್ದಾರೆ. ಅವರು ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಶಿವಸೇನಾ ಮುಖಂಡ ದೀಪಕ್ ಕೇಸರ್​ಕರ್ ಹೇಳಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 27, 2019, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading