ನನಗೆ, ನನ್ನ ಕುಟುಂಬಕ್ಕೆ ಭದ್ರತೆ ನೀಡಿದ ಎಸ್​ಪಿಜಿಗೆ ಧನ್ಯವಾದ; ರಾಹುಲ್​ ಗಾಂಧಿ ಭಾವನಾತ್ಮಕ ಟ್ವೀಟ್​

ಗಾಂಧಿ ಕುಟುಂಬದ ರಕ್ಷಣೆಗೆ ಯಾವುದೇ ಧಕ್ಕೆ ಇಲ್ಲ. ಇತ್ತೀಚಿನ ದಿನಗಲ್ಲಿ ಗಾಂಧಿ ಕುಟುಂಬಕ್ಕೆ ನೇರ ಬೆದರಿಕೆ ಇಲ್ಲದ ಕಾರಣಕ್ಕೆ ಅವರಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಹಿಂಪಡೆದಿದೆ ಎನ್ನಲಾಗಿದೆ. ಈ ವಿಚಾರವಾಗಿ ರಾಹುಲ್​ ಭಾವನಾತ್ಮಕ ಟ್ವೀಟ್​ ಮಾಡಿದ್ದಾರೆ.

Rajesh Duggumane | news18-kannada
Updated:November 8, 2019, 8:52 PM IST
ನನಗೆ, ನನ್ನ ಕುಟುಂಬಕ್ಕೆ ಭದ್ರತೆ ನೀಡಿದ ಎಸ್​ಪಿಜಿಗೆ ಧನ್ಯವಾದ; ರಾಹುಲ್​ ಗಾಂಧಿ ಭಾವನಾತ್ಮಕ ಟ್ವೀಟ್​
ರಾಹುಲ್ ಗಾಂಧಿ.
Rajesh Duggumane | news18-kannada
Updated: November 8, 2019, 8:52 PM IST
ನವದೆಹಲಿ (ನ.8): ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್​ ಪಡೆದಿದೆ. ಈ ವಿಚಾರವಾಗಿ ರಾಹುಲ್​ ಗಾಂಧಿ ಭಾವನಾತ್ಮಕ ಟ್ವೀಟ್​ ಮಾಡಿದ್ದು, ನನಗೆ, ನನ್ನ ಕುಟುಂಬಕ್ಕೆ ಭದ್ರತೆ ನೀಡಿದ ಎಸ್​ಪಿಜಿ ಸಹೋದರ-ಸಹೋದರಿಯರಿಗೆ ಧನ್ಯವಾದ ಎಂದಿದ್ದಾರೆ.

ಗಾಂಧಿ ಕುಟುಂಬದ ರಕ್ಷಣೆಗೆ ಯಾವುದೇ ಧಕ್ಕೆ ಇಲ್ಲ. ಇತ್ತೀಚಿನ ದಿನಗಲ್ಲಿ ಗಾಂಧಿ ಕುಟುಂಬಕ್ಕೆ ನೇರ ಬೆದರಿಕೆ ಇಲ್ಲದ ಕಾರಣಕ್ಕೆ ಅವರಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಹಿಂಪಡೆದಿದೆ ಎನ್ನಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್​ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಇದೊಂದು ಸೇಡಿನ ರಾಜಕಾರಣ ಎಂದಿದ್ದಾರೆ.

ಆದರೆ, ಈ ಬಗ್ಗೆ ರಾಹುಲ್​ ಗಾಂಧಿ ಯಾವುದೇ ಅಪಸ್ವರ ಎತ್ತಿಲ್ಲ. ಬದಲಿಗೆ ಭಾವನಾತ್ಮಕ ಟ್ವೀಟ್​ ಮಾಡಿದ್ದಾರೆ. "ಕಳೆದ ಹಲವು ವರ್ಷಗಳಿಂದ ನನ್ನ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಲು ಶ್ರಮಿಸಿದ ಎಸ್​ಪಿಜಿ ಸಹೋದರ ಹಾಗೂ ಸಹೋದರಿಯರಿಗೆ ಧನ್ಯವಾದ. ನಿಮ್ಮ ಬದ್ಧತೆಗೆ ನನ್ನ ಧನ್ಯವಾದ. ಉತ್ತಮ ಭವಿಷ್ಯಕ್ಕೆ ಆಲ್​ ದ ಬೆಸ್ಟ್​," ಎಂದಿದ್ದಾರೆ ರಾಹುಲ್​ ಗಾಂಧಿ.

ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಮತ್ತೆ ಎಸ್​ಪಿಜಿ ಭದ್ರತೆ ನೀಡಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ; ಸಿದ್ದರಾಮಯ್ಯ ಎಚ್ಚರಿಕೆ

1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ಬಳಿಕ ಮಾಜಿ ಪ್ರಧಾನಿಗಳು ಸೇರಿದಂತೆ ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ಒದಗಿಸಲಾಗಿತ್ತು. ಎಲ್ಲಾ ಮಾಜಿ ಪ್ರಧಾನಿಗಳ ಭದ್ರತೆಯನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುತ್ತದೆ ಮತ್ತು ಅಗತ್ಯವಿದ್ದಾಗ ಅದನ್ನು ಇಳಿಕೆ ಮಾಡಲಾಗುತ್ತದೆ. ಇತ್ತೀಚೆಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿತ್ತು.

First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...