HOME » NEWS » National-international » RAHUL GANDHI TAKES A DIG AT CENTRE OVER LPG PRICE HIKE WITH THROWBACK PIC OF SMIRTI IRANI SESR

ಎಲ್​ಪಿಜಿ ಬೆಲೆ ಹೆಚ್ಚಳ: ಸ್ಮೃತಿ ಇರಾನಿ ಪ್ರತಿಭಟಿಸುತ್ತಿರುವ ಹಳೆಯ ಫೋಟೋ ಹಾಕಿ ರಾಹುಲ್ ವ್ಯಂಗ್ಯ

ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಬರೋಬ್ಬರಿ 154 ರೂಪಾಯಿಯಷ್ಟು ಹೆಚ್ಚಳವಾಗಿರುವುದಕ್ಕೆ ಬಿಜೆಪಿಯ ಈ ಸದಸ್ಯರು ನಡೆಸುತ್ತಿರುವ ಈ ಪ್ರತಿಭಟನೆಗೆ ನನ್ನ ಸಹಮತ ಇದೆ ಎಂದು ವ್ಯಂಗ್ಯಾರ್ಥದಲ್ಲಿ ರಾಹುಲ್ ಗಾಂಧಿ ಝಾಡಿಸಿದ್ದಾರೆ.

Seema.R | news18-kannada
Updated:February 13, 2020, 5:15 PM IST
ಎಲ್​ಪಿಜಿ ಬೆಲೆ ಹೆಚ್ಚಳ: ಸ್ಮೃತಿ ಇರಾನಿ ಪ್ರತಿಭಟಿಸುತ್ತಿರುವ ಹಳೆಯ ಫೋಟೋ ಹಾಕಿ ರಾಹುಲ್ ವ್ಯಂಗ್ಯ
ರಾಹುಲ್​ ಗಾಂಧಿ
  • Share this:
ನವದೆಹಲಿ(ಫೆ. 13): ಎಲ್​ಪಿಜಿ ದರವನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಂಸದೆ ಸ್ಮೃತಿ ಇರಾನಿಯವರ ಹಳೆಯ ಫೋಟೋವನ್ನು ಟ್ವೀಟ್​ ಮಾಡಿ ಕೆಣಕಿದ್ದಾರೆ.

ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಎಲ್​ಪಿಜಿ ದರ ಹೆಚ್ಚಳವಾದಾಗ ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ್ದ ಸ್ಮೃತಿ ಅವರು ಈಗ ಎಲ್ಲಿ ಹೋದರು ಎಂಬರ್ಥದಲ್ಲಿ ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ಧಾರೆ.
ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಬರೋಬ್ಬರಿ 154 ರೂಪಾಯಿಯಷ್ಟು ಹೆಚ್ಚಳವಾಗಿರುವುದಕ್ಕೆ ಬಿಜೆಪಿಯ ಈ ಸದಸ್ಯರು ನಡೆಸುತ್ತಿರುವ ಈ ಪ್ರತಿಭಟನೆಗೆ ನನ್ನ ಸಹಮತ ಇದೆ ಎಂದು ವ್ಯಂಗ್ಯಾರ್ಥದಲ್ಲಿ ರಾಹುಲ್ ಗಾಂಧಿ ಝಾಡಿಸಿದ್ದಾರೆ.

ಯುಪಿಎ ಸರ್ಕಾರ ಅವಧಿಯಲ್ಲಿ ಎಲ್​ಪಿಜಿ ದರ ಹೆಚ್ಚಳವಾದಾಗ ರಸ್ತೆಯಲ್ಲಿ ಸಿಲಿಂಡರ್​ ತಂದು ಸ್ಮೃತಿ ಇರಾನಿ ಪ್ರತಿಭಟನೆ ಮಾಡಿದ್ದರು. ಅದೇ ಈಗ ಅವರ ಸರ್ಕಾರವೇ ಅಧಿಕಾರದಲ್ಲಿದ್ದಾಗ ಈ ಬಗ್ಗೆ ಅವರು ತುಟಿ ಬಿಚ್ಚುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಟ್ರೋಲ್​ ಆಗುತ್ತಿವೆ.

First published: February 13, 2020, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories