ನವದೆಹಲಿ: ಕಾಂಗ್ರೆಸ್ (Congress) ಭಾರತ್ ಜೋಡೋ ಯಾತ್ರೆ (Bharat Jodo Yatra) ಕೊನೆಯ ಹಂತದತ್ತ ಸಾಗುತ್ತಿದೆ. ಈ ಮೈ ಕೊರೆಯುವಂತಹ ಚಳಿಯಲ್ಲೂ ರಾಹುಲ್ ಗಾಂಧಿ (Rahul Gndhi) ಬೆಚ್ಚನೆಯ ಬಟ್ಟೆಯಿಂದ ದೂರ ಉಳಿದಿದ್ದಾರೆ. ಈ ಕಾರಣಕ್ಕೆ ರಾಹುಲ್ ಗಾಂಧಿ ಟೀ ಶರ್ಟ್ (T-Shirt) ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ದೆಹಲಿಯ (New Delhi) ಚುಮುಗುಡುವ ಚಳಿಯಲ್ಲೂ (Cold) ರಾಹುಲ್ ಗಾಂಧಿ ಟೀ ಶರ್ಟ್ನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ರಾಹುಲ್ ಅವರ ಈ ಟೀ ಶರ್ಟ್ ಒಗೆಯಲು ತಂಡವೊಂದು ಅವ ರ ಜೊತೆ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಬಗ್ಗೆ ಮಾತ್ರ ಯಾರಿಗೂ ಗೊತ್ತಿಲ್ಲ. ಹೌದು, ನಂಬಲು ಸ್ವಲ್ಪ ಕಷ್ಟವಾದರೂ ಕೂಡ ಮುಂಬೈನಿಂದ (Mumbai) ಬಂದ ತಂಡವೊಂದು ಭಾರತ್ ಜೋಡೋ ಯಾತ್ರೆಯ ಬೆಂಗಾವಲು ಪಡೆಯಲ್ಲಿ ರಾಹುಲ್ ಗಾಂಧಿಯವರ ಟೀ ಶರ್ಟ್ ಮತ್ತು ಬಟ್ಟೆಗಳನ್ನು ಒಗೆಯಲು ತೆರಳುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ರಾಹುಲ್ ಟೀ ಶರ್ಟ್ ತೊಳೆಯಲು ಪ್ರತ್ಯೇಕ ವಾಹದಲ್ಲಿ ತೆರಳುತ್ತಿರೋ ತಂಡ
'ದೈನಿಕ್ ಜಾಗರಣ್' ಹಿಂದಿ ಪತ್ರಿಕೆಯಲ್ಲಿ, ಮುಂಬೈನಿಂದ ಬಂದ ತಂಡ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ ಟೀ ಶರ್ಟ್ ತೊಳೆಯಲು ಪ್ರತ್ಯೇಕ ವಾಹದಲ್ಲಿ ತೆರಳುತ್ತಿದೆ. ರಾಹುಲ್ ಗಾಂಧಿಯವರ ಟೀ ಶರ್ಟ್ಗಳು ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ ಬಟ್ಟೆಗಳನ್ನು ಸಹ ಈ ತಂಡ ತೊಳೆಯುತ್ತಿದೆ. ಇಷ್ಟೇ ಅಲ್ಲದೇ ಕೆಲಸ ಮಾಡುವ ವಾಹನದಲ್ಲಿ ಮತ್ತೊಂದು ವಾಹನದಲ್ಲಿ ಪ್ರತ್ಯೇಕ ಜನರೇಟರ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ರಾಹುಲ್ ಬಟ್ಟೆ ತೊಳೆಯುತ್ತಿರುವ ವಿವೇಕ್ ಇಂಡಸ್ಟ್ರೀಸ್ ತಂಡ
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರ ಬಟ್ಟೆ ಒಗೆಯಲು ನೇಮಕಗೊಂಡಿರುವ ತಂಡದ ಹೆಸರು ವಿವೇಕ್ ಇಂಡಸ್ಟ್ರೀಸ್. ವಿವೇಕ್ ಇಂಡಸ್ಟ್ರೀಸ್ ತಂಡವು ರಾಹುಲ್ ಗಾಂಧಿಯವರ ಟೀ ಶರ್ಟ್ಗಳನ್ನು ಹೊರತುಪಡಿಸಿ ಕಾಂಗ್ರೆಸ್ ನಾಯಕರ ಸುಮಾರು 200 ಬಟ್ಟೆಗಳನ್ನು ಪ್ರತಿದಿನ ತೊಳೆಯುತ್ತಿದೆ.
ರಾಹುಲ್ ಟೀ ಶರ್ಟ್ ಜೊತೆ ಪ್ಯಾಂಟ್ ಕೂಡ ತೊಳೆಯುತ್ತಿರುವ ತಂಡ
ಈ ತಂಡವು ಕಂಟೇನರ್ನಲ್ಲಿದೆ, ಅಲ್ಲಿ ಬಟ್ಟೆಗಳನ್ನು ತೊಳೆಯುವ ಯಂತ್ರದ ಮೂಲಕ ತೊಳೆಯಲಾಗುತ್ತಿದೆ. ರಾಹುಲ್ ಗಾಂಧಿ ಅವರ ಬಟ್ಟೆಗಳು ಅಂದರೆ ಕೇವಲ ಟೀ ಶರ್ಟ್ ಮತ್ತು ಪ್ಯಾಂಟ್ಗಳನ್ನು ಸೇರಿಸಿ ಒಗೆಯುತ್ತಿದೆ. ಈ ತಂಡದಲ್ಲಿ ನಾಲ್ಕು ಜನರಿದ್ದು, ಭಾರತ್ ಜೋಡೋ ಯಾತ್ರೆ ಆರಂಭವಾದಾಗಿನಿಂದಲೂ ರಾಹುಲ್ ಜೊತೆಗೆ ಒಟ್ಟಿಗೆ ಓಡುತ್ತಿದ್ದಾರೆ.
ರಾಹುಲ್ ಗಾಂಧಿ ಇರುವ ಟೆಂಟ್ನಲ್ಲಿಯೇ ಉಳಿದುಕೊಂಡಿರೋ ತಂಡ
ರಾಹುಲ್ ಗಾಂಧಿ ಇರುವ ಟೆಂಟ್ನಲ್ಲಿಯೇ ಈ ತಂಡ ಉಳಿದುಕೊಂಡಿದೆ. ಟೆಂಟ್ಗಳ ವ್ಯವಸ್ಥೆಗಾಗಿ ಮುಂಬೈನ ಓಂಕಾರ ಇಂಡಸ್ಟ್ರೀಸ್ ಸೇವೆಯನ್ನು ತೆಗೆದುಕೊಂಡಿದೆ. ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿದ್ದು, ಜನವರಿ 30ರಷ್ಟೋತ್ತಿಗೆ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ದಕ್ಷಿಣ ಭಾರತದಲ್ಲಿ ಭಾರತ್ ಜೋಡೋ ಯಾತ್ರೆ ಮುಕ್ತಾಯ
ಈಗಾಗಲೇ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಯುಪಿ ಮೂಲಕ ಭಾರತ್ ಜೋಡೋ ಯಾತ್ರೆ ಶ್ರೀನಗರವನ್ನು ತಲುಪಲಿದೆ. ಪ್ರಸ್ತುತ ಭಾರತ್ ಜೋಡೋ ಯಾತ್ರೆ ಪಂಜಾಬ್ನಲ್ಲಿ ಸಾಗುತ್ತಿದೆ.
ಇತ್ತೀಚೆಗಷ್ಟೇ ಟೀ ಶರ್ಟ್ ರಹಸ್ಯ ಬಿಚ್ಚಿಟ್ಟಿದ್ದ ರಾಹುಲ್
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರು ತಾವು ಟೀ ಶರ್ಟ್ ಧರಿಸುತ್ತಿರುವ ಹಿಂದಿನ ಸತ್ಯವನ್ನು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಹರಿದ ಬಟ್ಟೆ ಧರಿಸಿ ಚಳಿಯಲ್ಲಿ ನಡುಗುತ್ತಿದ್ದ ಮೂವರು ಬಡ ಹುಡುಗಿಯರನ್ನು ಭೇಟಿಯಾದ ನಂತರ ತಾವು ಯಾತ್ರೆಯುದ್ದಕ್ಕೂ ಕೇವಲ ಟೀ ಶರ್ಟ್ ಧರಿಸಲು ನಿರ್ಧರಿಸಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ