LPG Price Hike: ಬೆಲೆ ಏರಿಕೆ ಅನ್ಯಾಯದ ವಿರುದ್ಧ ದೇಶವು ಒಗ್ಗೂಡುತ್ತಿದೆ; ಕೇಂದ್ರದ ವಿರುದ್ಧ ರಾಹುಲ್ ಕಿಡಿ

ಆಗಸ್ಟ್‌ 1 ರಂದು ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಆಗಸ್ಟ್‌ 17ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ 25ರೂ ಏರಿಕೆ ಮಾಡಲಾಗಿತ್ತು. ಅದಾದ ನಂತರ ಮತ್ತೆ ಸೆಪ್ಟೆಂಬರ್‌ 1ರಿಂದ ಜಾರಿಗೆ ಬರುವಂತೆ ಮತ್ತೆ 25 ರೂ ಹೆಚ್ಚಿಸಲಾಗಿದೆ.

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

 • Share this:
  ನವದೆಹಲಿ (ಸೆಪ್ಟೆಂಬರ್​ 01); ಒಂದೆಡೆ ಪೆಟ್ರೋಲ್ ಮತ್ತು ಡೀಸೆಲ್​​​​ ಬೆಲೆ (Petrol-Diesel Price) ಗಗನಕ್ಕೆ ಏರುತ್ತಿದ್ದರೆ, ಮತ್ತೊಂದೆಡೆ ಅಡಿಗೆ ಅನಿಲದ (LPG) ಬೆಲೆಯೂ ದಿನೇ ದಿನೇ ಏರುತ್ತಲೇ ಇದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಒಟ್ಟು ಎರಡು ಬಾರಿ ಅಡಿಗೆ ಅನಿಲದ ಬೆಲೆಯನ್ನು ಏರಿಸಿದೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ಬಡ ಜನರ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತಿರುವುದು ಸುಳ್ಳಲ್ಲ. ಇಂದೂ ಸಹ ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಂದಿನಿಂದ ಪ್ರತಿ ಸಿಲಿಂಡರ್‌ಗೆ 25 ರೂಪಾಯಿಯಂತೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ಕುರಿತು ಕಿಡಿಕಾರಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, "ಬೆಲೆ ಏರಿಕೆ ಅನ್ಯಾಯದ ವಿರುದ್ಧ ದೇಶವು ಒಗ್ಗೂಡುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  ಆಗಸ್ಟ್‌ 1 ರಂದು ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಆಗಸ್ಟ್‌ 17ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ 25ರೂ ಏರಿಕೆ ಮಾಡಲಾಗಿತ್ತು. ಅದಾದ ನಂತರ ಮತ್ತೆ ಸೆಪ್ಟೆಂಬರ್‌ 1ರಿಂದ ಜಾರಿಗೆ ಬರುವಂತೆ ಮತ್ತೆ 25 ರೂ ಹೆಚ್ಚಿಸಲಾಗಿದೆ.

  ಕಾಂಗ್ರೆಸ್ ಪಕ್ಷವು ಪೆಟ್ರೋಲ್, ಡೀಸೆಲ್ ಮತ್ತು LPG ಬೆಲೆಗಳ ಏರಿಕೆಯ ವಿರುದ್ದ ಒಕ್ಕೂಟ ಸರ್ಕಾರದ ದಾಳಿ ಮಾಡುತ್ತಿದೆ. ಸರ್ಕಾರ ವಿಧಿಸಿರುವ ಕೆಲವು ತೆರಿಗೆಗಳನ್ನು ತೆಗೆದುಹಾಕುವ ಮೂಲಕ ಅವುಗಳನ್ನು ಕಡಿಮೆ ಮಾಡುವಂತೆ ಪಕ್ಷವು ಒತ್ತಾಯಿಸುತ್ತಿದೆ.

  "ಸಾರ್ವಜನಿಕರನ್ನು ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಒತ್ತಾಯಿಸುವವನು, ತಾನು ಸ್ನೇಹಿತರ ನೆರಳಿನ ಅಡಿಯಲ್ಲಿ ಮಲಗುತ್ತಿದ್ದಾನೆ. ಆದರೆ ದೇಶವು ಅನ್ಯಾಯದ ವಿರುದ್ಧ ಒಂದಾಗುತ್ತಿದೆ" ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.  ಅಲ್ಲದೆ, ‘ಬಿಜೆಪಿಯ ಲೂಟಿಯ ವಿರುದ್ದ ಭಾರತ’ ಹ್ಯಾಶ್ ಟ್ಯಾಗ್‌‌ನೊಂದಿಗೆ ಈ ವರ್ಷದ ಜನವರಿಯಿಂದ ದೇಶದ ನಾಲ್ಕು ಮಹಾನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯ ಹೆಚ್ಚಳದ ಚಾರ್ಟ್ ಅನ್ನು ರಾಹುಲ್ ಗಾಂಧಿ ತನ್ನ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

  ಇಂದಿನ ಬೆಲೆ ಏರಿಕೆಗೂ ಮೊದಲು, ಬೆಂಗಳೂರಿನಲ್ಲಿ 14.2 ಕೆ.ಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗೆ 862 ರೂ ನೀಡಲಾಗುತ್ತಿತ್ತು. ಇನ್ನು ಮುಂದೆ ಗ್ರಾಹಕರು ಪ್ರತಿ ಸಿಲಿಂಡರ್‌ಗೆ 887ರೂ ಬೆಲೆ ತೆರಬೇಕಾಗಿದೆ. ಹದಿನೈದು ದಿನಗಳ ಅಂತದಲ್ಲಿ 50 ರೂ ಏರಿಕೆಯಾಗಿರುವುದು ಜನಸಾಮಾನ್ಯರ ಹೊರೆ ಹೆಚ್ಚಿಸಿದೆ. 2021ರ ಜನವರಿಯಿಂದ ಸೆಪ್ಟೆಂಬರ್‌ 1ರವರೆಗೆ ಅಡುಗೆ ಸಿಲಿಂಡರ್‌ ಬೆಲೆ ಒಟ್ಟು 190 ರೂ ಹೆಚ್ಚಳವಾಗಿದೆ.

  ಇದನ್ನೂ ಓದಿ: LPG Gas Price Hike: ಗ್ರಾಹಕರಿಗೆ ಶಾಕಿಂಗ್ ನ್ಯೂಸ್; ಮತ್ತೆ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆ

  ಕೇಂದ್ರ ಸರ್ಕಾರದ ಈ ಬೆಲೆ ಏರಿಕೆ ನಿರ್ಧಾರ ಖಂಡಿಸಿ ಮಹಿಳಾ ಕಾಂಗ್ರೆಸ್ ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದೆ. ಸಿಲಿಂಡರ್‌, ಅಡುಗೆ ಎಣ್ಣೆ, ದಿನಸಿ, ಪೆಟ್ರೋಲ್‌, ವಿದ್ಯುತ್‌… ಹೀಗೆ ದಿನನಿತ್ಯದ ಬದುಕಿನ ಅಗತ್ಯಗಳ ಬೆಲೆ ಏರಿಕೆಯಿಂದಾಗಿ ಜನರು ಹೈರಾಣರಾಗಿದ್ದಾರೆ. ಒಂದು ಕಡೆ ಕೋವಿಡ್‌ನಿಂದಾಗಿ ಸರಿಯಾಗಿ ಸಂಬಳ, ದಿನಗೂಲಿ ಇಲ್ಲದೇ ಮನೆಯಲ್ಲಿ ಇದ್ದದ್ದರಲ್ಲೇ ಒಂದೊತ್ತಿನ ಹೊಟ್ಟೆ ತುಂಬಿಸಿಕೊಂಡಿದ್ದ ಜನರ ಬದುಕಲ್ಲಂತೂ ಈ ಬೆಲೆ ಏರಿಕೆ ಸಾವು ನೋವಿನ ಪ್ರಶ್ನೆಯಾಗಿ ಮಾರ್ಪಟ್ಟಿದೆ.

  ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಶ್ವಾನಗಳು; ನಮ್ಮ ಮಿಲಿಟರಿ ಪಡೆಯದ್ದಲ್ಲ ಎಂದ ಅಮೆರಿಕ!

  ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: