ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಶುಭಾಶಯ ಕೋರಲು ಅಣ್ಣ- ತಂಗಿಯ ಹಳೆಯ ಸುಂದರ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಕ್ಷಾ ಬಂಧನಕ್ಕೆ ಶುಭ ಕೋರಿದ್ದಾರೆ.
ನಂತರ, ಪ್ರಿಯಾಂಕಾ ಗಾಂಧಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಹೃದಯದ ಇಮೋಜಿಯೊಂದಿಗೆ ಹಂಚಿಕೊಂಡಿದ್ದಾರೆ.
https://www.instagram.com/p/CS3NIxFBiJi/?utm_source=ig_web_copy_link
ರಾಜಕೀಯ ರ್ಯಾಲಿಗಳಿಂದ ಹಿಡಿದು ವಿವಿಧ ಹಬ್ಬದ ಸಂದರ್ಭಗಳಲ್ಲಿ, ಇಬ್ಬರು ಕಾಂಗ್ರೆಸ್ ನಾಯಕರು ಆಗಾಗ್ಗೆ ವೇದಿಕೆ ಹಂಚಿಕೊಳ್ಳುವುದನ್ನು ನಾವು ನೋಡಬಹುದು. ಪ್ರಸ್ತುತ ರಾಹುಲ್ ಗಾಂಧಿ ವಯನಾಡ್ ಸಂಸದರಾಗಿದ್ದು, ಪಕ್ಷವನ್ನು ಬೇರೆಯದೆ ರೀತಿಯಲ್ಲಿ ಮುನ್ನಡೆಸುವಲ್ಲಿ ಸಕ್ರಿಯರಾಗಿದ್ದಾರೆ, ಉತ್ತರ ಪ್ರದೇಶದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿಯನ್ನು ಪ್ರಿಯಾಂಕಾ ಗಾಂಧಿ ಹೊತ್ತಿದ್ದಾರೆ.
ಈ ಒಡಹುಟ್ಟಿದವರು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರಿಗೂ ವಿವಿಧ ಸಂದರ್ಭಗಳಲ್ಲಿ ಶುಭ ಹಾರೈಸುತ್ತಾರೆ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. "ನಾನು ನನ್ನ ಸಹೋದರನಿಂದ ಪ್ರೀತಿ, ಸತ್ಯ ಮತ್ತು ತಾಳ್ಮೆಯನ್ನು ಕಲಿತಿದ್ದೇನೆ ಮತ್ತು ಸಂತೋಷ ಮತ್ತು ದುಃಖವನ್ನು ಸಮನಾಗಿ ಆತನೊಂದಿಗೆ ಹಂಚಿಕೊಂಡು ಬದುಕುತ್ತಿದ್ದೇನೆ. ಇಂತಹ ಅದ್ಬುತ ಸಹೋದರನನ್ನು ಹೊಂದಿದ್ದಕ್ಕೆ ನನಗೆ ಹೆಮ್ಮೆ ಇದೆ "ಎಂದು ಪ್ರಿಯಾಂಕಾ ಗಾಂಧಿ ಕಳೆದ ವರ್ಷ ಇದೇ ಸಂದರ್ಭದಲ್ಲಿ ಮಾಡಿದ್ದ ಟ್ವೀಟ್ ನಲ್ಲಿ ಹೇಳಿದ್ದರು. ಒಂದೇ ಪಾರ್ಟಿಯಲ್ಲಿ ಕೆಲಸ ಮಾಡುವುದರ ಹೊರತಾಗಿ ಇಬ್ಬರು ಒಡಹುಟ್ಟಿದವರು ಆತ್ಮೀಯ ಸಂಬಂಧವನ್ನು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಮಕ್ಕಳಾಗಿದ್ದು. ರಾಹುಲ್ 1970 ರಲ್ಲಿ ಜನಿಸಿದರು 1972 ರಲ್ಲಿ ಪ್ರಿಯಾಂಕಾ ಹುಟ್ಟಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ