• Home
  • »
  • News
  • »
  • national-international
  • »
  • Bharat Jodo Yatra: ರಾಹುಲ್ ಗಾಂಧಿಯನ್ನು ಭೇಟಿಯಾದ ಈ ಯುವತಿಯ ಅಳುವೇ ನಿಲ್ಲಲಿಲ್ಲ!

Bharat Jodo Yatra: ರಾಹುಲ್ ಗಾಂಧಿಯನ್ನು ಭೇಟಿಯಾದ ಈ ಯುವತಿಯ ಅಳುವೇ ನಿಲ್ಲಲಿಲ್ಲ!

ರಾಹುಲ್ ಗಾಂಧಿ ಹಂಚಿಕೊಂಡ ಫೋಟೋ

ರಾಹುಲ್ ಗಾಂಧಿ ಹಂಚಿಕೊಂಡ ಫೋಟೋ

Rahul Gandhi: ರಾಹುಲ್ ಗಾಂಧಿ ಅವರೇ ಸ್ವತಃ ತಮ್ಮನ್ನು ಭೇಟಿಯಾದ ಯುವತಿಯೋರ್ವಳ ಕಥೆಯನ್ನು ಹಂಚಿಕೊಂಡಿದ್ದಾರೆ. 

  • News18 Kannada
  • Last Updated :
  • Bangalore, India
  • Share this:

ಬೆಂಗಳೂರು:  ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ'ಯಲ್ಲಿ  (Congress Bharat Jodo Yatra) ಸದ್ಯ ಕರ್ನಾಟಕದಲ್ಲಿ ಸಂಚರಿಸುತ್ತಿದೆ. ಸದ್ಯ ರಾಹುಲ್ ಗಾಂಧಿ ಅವರ ಜೊತೆ ಕರ್ನಾಟಕದ ಹಲವು ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಭಾರತ್ ಜೋಡೋ ಯಾತ್ರೆಯಲ್ಲಿ ಯುವತಿಯೋರ್ವಳು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಈ ಭೆಟಿಯ ನಂತರ ಆಕೆಯ ಕಣ್ಣೀರೇ ನಿಲ್ಲಲಿಲ್ಲವಂತೆ. ರಾಹುಲ್ ಗಾಂಧಿ ಅವರೇ ಸ್ವತಃ ತಮ್ಮನ್ನು ಭೇಟಿಯಾದ ಯುವತಿಯೋರ್ವಳ ಕಥೆಯನ್ನು ಹಂಚಿಕೊಂಡಿದ್ದಾರೆ. 


ಈ ಯುವತಿ ಮತ್ತು ಆಕೆಯ ಸಹೋದರ ನಮ್ಮ ರಾಷ್ಟ್ರದ ಮೂಲಭೂತ ಮೌಲ್ಯಗಳ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದಾರೆ. ಈ ಯುವಕರು, ನಮ್ಮ ದೇಶದ ಇತರ ಲಕ್ಷಾಂತರ ಯುವಕರಂತೆ ತಮ್ಮ ಕನಸುಗಳ ಭಾರತವನ್ನು ತಮ್ಮ ಕಣ್ಣುಗಳ ಮುಂದೆ ಪುಡಿಪುಡಿಯಾಗುತ್ತಿರುವುದನ್ನು ವೀಕ್ಷಿಸಲು ತೀವ್ರ ದುಃಖಿತರಾಗಿದ್ದಾರೆ. ಅವರು ಸ್ವಾತಂತ್ರ್ಯ ಮತ್ತು ಸಮಾನತೆಯ ಬಗ್ಗೆ ಕಲಿಯುತ್ತಾ ಬೆಳೆದಿದ್ದಾರೆ. ಜೊತೆಗೆ ಪ್ರೀತಿ, ಸಾಮರಸ್ಯ ಮತ್ತು ಸಹೋದರತ್ವದ ಸಂದೇಶದೊಂದಿಗೆ ಬೆಳೆದಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


ಭಾರತ್ ಜೋಡೋ ಯಾತ್ರೆ ಅಭಿಯಾನದಡಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಸ್ತುತ ಪಾದಯಾತ್ರೆ ನಡೆಸುತ್ತಿದ್ದಾರೆ. ಈ 150 ದಿನಗಳ ಸುದೀರ್ಘ ಕಾಂಗ್ರೆಸ್ ಅಭಿಯಾನವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ.


ಈ ವೇಳೆ ರಾಹುಲ್ ಗಾಂಧಿ (Rahul Gandhi) ಮತ್ತು ಅವರ ಸಹ ಪ್ರಯಾಣಿಕರ ಜೊತೆ ಸುಮಾರು 3,500 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯೂಸ್ 18 ಭಾರತ್ ಜೋಡೋ ಯಾತ್ರೆಯೊಂದಿಗೆ ಒಂದು ದಿನ ಕಳೆದಿದ್ದು, ರಾಹುಲ್ ಗಾಂಧಿ ಅವರ ಸಹ-ಪ್ರಯಾಣಿಕರು ಮತ್ತು ಸಾಮಾನ್ಯ ಜನರೊಂದಿಗೆ ಮಾತನಾಡಿ ಅವರ ಮನಸ್ಥಿತಿಯನ್ನು ತಿಳಿಯಲು ಪ್ರಯತ್ನಿಸಿದೆ. ಭಾರತ ಜೋಡೋ ಯಾತ್ರೆಯಡಿ ತಮಿಳುನಾಡು ಮತ್ತು ಕೇರಳದ (Kerala) ಮೂಲಕ ರಾಹುಲ್ ಗಾಂಧಿ ಕರ್ನಾಟಕ ತಲುಪಿದ್ದಾರೆ ಎಂಬುವುದು ಉಲ್ಲೇಖನೀಯ.ಪಾದಯಾತ್ರೆ ನಡೆಯುತ್ತಿರುವ ಬಿಜೆಪಿ ಆಡಳಿತವಿರುವ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಇಲ್ಲಿ ಕಾಂಗ್ರೆಸ್‌ನ ಈ ಪ್ರಚಾರ ನಡೆಯುತ್ತಿದೆ.


ಬೆಳಿಗ್ಗೆ 5 ಗಂಟೆಗೆ ದಿನದ ಆರಂಭ
ಭಾರತ್ ಜೋಡೋ ಯಾತ್ರೆಯ ಅಡಿಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ದಿನ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತದೆ. ನಿತ್ಯ ಕೆಲಸಗಳನ್ನು ಮುಗಿಸಿ, ಅವರು ತನ್ನ ಮೊಣಕಾಲುಗಳ ಫಿಸಿಯೋಥೆರಪಿ ಮಾಡುತ್ತಾರೆ. ಬೆಳಗ್ಗೆ 6 ಗಂಟೆಗೆ ಧ್ವಜಾರೋಹಣಕ್ಕೆ ಆಗಮಿಸುವ ಮೊದಲಿಗರಲ್ಲಿ ರಾಹುಲ್ ಗಾಂಧಿ ಒಬ್ಬರು. ಇದಾದ ಬಳಿಕ ರಾಹುಲ್ ಗಾಂಧಿ ಪಾದಯಾತ್ರೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಾರೆ.


ಇದನ್ನೂ ಓದಿ: Shocking: ಇಬ್ಬರು ಮಹಿಳೆಯರ ನರಬಲಿ; ಭೀಕರ ಕೃತ್ಯ ಎಸಗಿದ ದಂಪತಿ ಅರೆಸ್ಟ್


ಸಾಮಾನ್ಯವಾಗಿ ಭಾರತದ ಜೋಡೋ ಯಾತ್ರೆಯ ತಂಡವು ರಾತ್ರಿ ತಲುಪಿದ ಸ್ಥಳದಿಂದ ಪಾದಯಾತ್ರೆ ಪ್ರಾರಂಭವಾಗುತ್ತದೆ. ಸದಸ್ಯರ ಜಮಾವಣೆಯೊಂದಿಗೆ ರಾಹುಲ್ ಗಾಂಧಿಯವರ ರಥಯಾತ್ರೆ ಆರಂಭವಾಗುತ್ತದೆ. ರಾಹುಲ್ ಗಾಂಧಿ ತುಂಬಾ ವೇಗವಾಗಿ ನಡೆಯುತ್ತಾರೆ ಎಂದು ತಂಡದ ಜನರು ಹೇಳುತ್ತಾರೆ, ಇದು ಅವರ ದೈಹಿಕ ಸಾಮರ್ಥ್ಯವನ್ನು ತೋರಿಸುತ್ತದೆ.


ಇದನ್ನೂ ಓದಿ: UNGA: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾದ ಬೇಡಿಕೆ ವಿರುದ್ಧ ಮತ ಚಲಾಯಿಸಿದ ಭಾರತ!


ಆತ್ಮೀಯತೆ, ತನ್ನವರೆಂಬ ಭಾವ ಹಾಗೂ ಭಾವನಾತ್ಮಕ ಸಂಬಂಧ
ಒಗ್ಗೂಡಿದ ಜನರಲ್ಲಿ ರಾಹುಲ್ ತಾನ್ಯಾರನ್ನು ಭೇಟಿಯಾಗಬೇಕೆಂದು ಹೇಗೆ ನಿರ್ಧರಿಸುತ್ತಾರೆ ಎಂಬ ಪ್ರಶ್ನೆ ಸಹಜವಾಗೇ ಉದ್ಭವಿಸುತ್ತದೆ. ಭಾರತ್ ಜೋಡೋ ಯಾತ್ರೆಯಲ್ಲಿ ನಿರಂತರವಾಗಿ ಅವರ ಜೊತೆಗಿರುವ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ನಾಯಕನಿಗೆ ವಿಶೇಷವಾದ ನಂಟು, ಜಾದೂ ಇದೆ ಎನ್ನುತ್ತಾರೆ. ರಾಹುಲ್ ಗಾಂಧಿ ಇಲ್ಲಿಯವರೆಗೆ ಯಾರನ್ನು ಭೇಟಿಯಾಗಲು ಕರೆದಿದ್ದಾರೋ ಅವರೆಲ್ಲರೂ ಅದಕ್ಕೆ ಅರ್ಹರು ಎಂದು ಅವರು ಹೇಳುತ್ತಾರೆ.

Published by:ಗುರುಗಣೇಶ ಡಬ್ಗುಳಿ
First published: