HOME » NEWS » National-international » RAHUL GANDHI SAYS PM MODI IS USING 8400 CRORES WORTHY FLIGHT BUT ARMY HAVE NO BULLET PROOF TRUCK MAK

ಮೋದಿ ಓಡಾಡಲು 8400 ಕೋಟಿ ಬೆಲೆಯ ವಿಮಾನ, ಸೈನಿಕರಿಗೆ ಬುಲೆಟ್​ ಪ್ರೂಫ್​ ರಹಿತ ಟ್ರಕ್​; ರಾಹುಲ್ ಗಾಂಧಿ ಕಿಡಿ

ಇದು ಕಳಪೆ ವ್ಯವಸ್ಥೆಯಾಗಿದೆ. ನಮಗೆ ಅತ್ಯಂತ ಕೆಟ್ಟ ಟ್ರಕ್ ಅನ್ನು ಒದಗಿಸಲಾಗಿದೆ. ಹಿರಿಯ ಅಧಿಕಾರಿಗಳು ಬುಲ್ಲೆಟ್‌ಪ್ರೂಫ್ ವಾಹನದಲ್ಲಿ ಸಂಚರಿಸುತ್ತಾರೆ. ಆದರೆ ನಮಗೆ ಮಾತ್ರ ಬುಲ್ಲೆಟ್‌ಪ್ರೂಫ್ ರಹಿತ ವಾಹನ ಒದಗಿಸಿದ್ದಾರೆ ಎಂದು ಮತ್ತೊಬ್ಬ ಸೈನಿಕ ಹೇಳಿರುವುದನ್ನು ಈ ವಿಡಿಯೋದಲ್ಲಿ ಕೇಳಬಹುದಾಗಿದೆ. ಇದು ಕಳಪೆ ವ್ಯವಸ್ಥೆಯಾಗಿದೆ. ನಮಗೆ ಅತ್ಯಂತ ಕೆಟ್ಟ ಟ್ರಕ್ ಅನ್ನು ಒದಗಿಸಲಾಗಿದೆ. ಹಿರಿಯ ಅಧಿಕಾರಿಗಳು ಬುಲ್ಲೆಟ್‌ಪ್ರೂಫ್ ವಾಹನದಲ್ಲಿ ಸಂಚರಿಸುತ್ತಾರೆ. ಆದರೆ ನಮಗೆ ಮಾತ್ರ ಬುಲ್ಲೆಟ್‌ಪ್ರೂಫ್ ರಹಿತ ವಾಹನ ಒದಗಿಸಿದ್ದಾರೆ ಎಂದು ಮತ್ತೊಬ್ಬ ಸೈನಿಕ ಹೇಳಿರುವುದನ್ನು ಈ ವಿಡಿಯೋದಲ್ಲಿ ಕೇಳಬಹುದಾಗಿದೆ.

news18-kannada
Updated:October 12, 2020, 7:53 AM IST
ಮೋದಿ ಓಡಾಡಲು 8400 ಕೋಟಿ ಬೆಲೆಯ ವಿಮಾನ, ಸೈನಿಕರಿಗೆ ಬುಲೆಟ್​ ಪ್ರೂಫ್​ ರಹಿತ ಟ್ರಕ್​; ರಾಹುಲ್ ಗಾಂಧಿ ಕಿಡಿ
ರಾಹುಲ್ ಗಾಂಧಿ.
  • Share this:
ನವ ದೆಹಲಿ (ಅಕ್ಟೋಬರ್​ 12); ಕೊರೋನಾ ಸೋಂಕು ನೀಡಿರುವ ಮರ್ಮಾಘಾತಕ್ಕೆ  ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಸಣ್ಣ ಮಧ್ಯಮ ಕೈಗಾರಿಕೆಗಳು ನಷ್ಟ ಬರಿಸಲಾಗದೆ ಬಾಗಿಲು ಎಳೆದುಕೊಂಡಿವೆ. ರಾಜ್ಯಗಳಿಗೆ ಕೇಂದ್ರ ಸರ್ಕಾರ ನ್ಯಾಯಯುತವಾಗಿ ನೀಡಬೇಕಾದ ಜಿಎಸ್​ಟಿ ಪಾಲಿನ ಹಣ ನೀಡಲು ಸಹ ಕೇಂದ್ರದ ಬಳಿ ದುಡ್ಡಿಲ್ಲ ಎಂದು ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಸದ್ದು ಮಾಡಿದ್ದರು. ಈ ನಡುವೆ ಇಷ್ಟೆಲ್ಲಾ ಆರ್ಥಿಕ ಸಮಸ್ಯೆಗಳ ನಡುವೆಯೂ ಸಹ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರಯಾಣಕ್ಕೆ ಕೇಂದ್ರ ಸರ್ಕಾರ 8400 ಕೋಟಿ ರೂ ಖರ್ಚು ಮಾಡಿ ಹೊಸ ವಿಮಾನ ಖರೀದಿ ಮಾಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ನಡುವೆ ಸರ್ಕಾರದ ನಡೆಯನ್ನು ಟ್ವಿಟರ್​ನಲ್ಲಿ ಕಟುವಾಗಿ ವಿಮರ್ಶೆ ಮಾಡಿರುವ ರಾಹುಲ್ ಗಾಂಧಿ, "ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕೆಂದು ಸುಮಾರು 8,400 ಕೋಟಿ ವ್ಯಯಿಸಿ ಐಷಾರಾಮಿ ವಿಮಾನದ ವ್ಯವಸ್ಥೆ ಮಾಡಿರುವ ಸರ್ಕಾರ, ನಮ್ಮ ದೇಶದ ಸೈನಿಕರಿಗೆ ಬುಲ್ಲೆಟ್‌ಪ್ರೂಫ್ ಟ್ರಕ್ ಒದಗಿಸಲು ನಿರಾಕರಿಸಿದೆ" ಎಂದು ಕಿಡಿಕಾರಿದ್ದಾರೆ.ರಾಹುಲ್ ಗಾಂಧಿ ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸೈನಿಕರು ಮಾತನಾಡುತ್ತಿರುವುದ ದಾಖಲಾಗಿದೆ.
ಸಮವಸ್ತ್ರದಲ್ಲಿರುವ ಸೈನಿಕರು, “ಇಂದಿನ ಸಂದರ್ಭದಲ್ಲಿ ಬುಲ್ಲೆಟ್‌ಪ್ರೂಫ್ ವಾಹನದಲ್ಲಿ ಚಲಿಸುವುದೇ ಅಪಾಯವಾಗಿದೆ. ಆದರೆ ನಾವು ಬುಲ್ಲೆಟ್‌ಪ್ರೂಫ್ ರಹಿತ ಟ್ರಕ್‌ನಲ್ಲಿ ಚಲಿಸುತ್ತಿದ್ದೇವೆ. ಅವರು ನಮ್ಮ ಜೀವದೊಂದಿಗೆ ಆಟವಾಡುತ್ತಿದ್ದಾರೆ. ನಾವು ನಮ್ಮ ಜೀವನವನ್ನು ವ್ಯರ್ಥ ಮಾಡುತ್ತಿದ್ದೇವೆ” ಎಂದು ಮಾತನಾಡಿರುವುದು ವೀಡಿಯೋದಲ್ಲಿ ದಾಖಲಾಗಿದೆ.


ಇದು ಕಳಪೆ ವ್ಯವಸ್ಥೆಯಾಗಿದೆ. ನಮಗೆ ಅತ್ಯಂತ ಕೆಟ್ಟ ಟ್ರಕ್ ಅನ್ನು ಒದಗಿಸಲಾಗಿದೆ. ಹಿರಿಯ ಅಧಿಕಾರಿಗಳು ಬುಲ್ಲೆಟ್‌ಪ್ರೂಫ್ ವಾಹನದಲ್ಲಿ ಸಂಚರಿಸುತ್ತಾರೆ. ಆದರೆ ನಮಗೆ ಮಾತ್ರ ಬುಲ್ಲೆಟ್‌ಪ್ರೂಫ್ ರಹಿತ ವಾಹನ ಒದಗಿಸಿದ್ದಾರೆ” ಎಂದು ಮತ್ತೊಬ್ಬ ಸೈನಿಕ ಹೇಳಿರುವುದನ್ನು ಈ ವಿಡಿಯೋದಲ್ಲಿ ಕೇಳಬಹುದಾಗಿದೆ.

ಇದನ್ನೂ ಓದಿ : ಮುಂಬೈ ಮೆಟ್ರೋ ಶೆಡ್​ ಯೋಜನೆ ಸ್ಥಳಾಂತರ; ಆರೆಯ 800 ಏಕರೆ ಭೂಮಿ ಅರಣ್ಯ ಎಂದು ಘೋಷಿಸಿದ ಸಿಎಂ ಠಾಕ್ರೆ

ಮತ್ತೊಂದು ಟ್ವೀಟ್‌ನಲ್ಲಿ, “ಪ್ರಧಾನಮಂತ್ರಿ ತನಗಾಗಿ 8,400 ಕೋಟಿ ಮೌಲ್ಯದ ವಿಮಾನವನ್ನು ಖರೀದಿಸಿದ್ದಾರೆ. ಈ ದುಡ್ಡಿನಲ್ಲಿ ಸಿಯಾಚಿನ್-ಲಡಾಕ್ ಗಡಿಯಲ್ಲಿರುವ ನಮ್ಮ ಸೈನಿಕರಿಗೆ ಏನೆಲ್ಲಾ ಖರೀದಿಸಬಹುದು? ಪ್ರಧಾನಿಯವರು ಕೇವಲ ತನ್ನ ಬಗ್ಗೆ ಮಾತ್ರ ಯೋಚಿಸುತ್ತಾರೆ” ಎಂದು ಬರೆದುಕೊಂಡಿದ್ದಾರೆ.
Youtube Video

ಈ ಹಿಂದೆಯೂ ಮಾಧ್ಯಮಗಳನ್ನು ಗುರಿಯಾಗಿಸಿಕೊಂಡು “ಪ್ರಧಾನಿಗಾಗಿ ಅಷ್ಟು ದೊಡ್ಡ ಮೊತ್ತದ ವಿಮಾನ ಖರೀದಿಸಲಾಗಿದೆ. ಆದರೂ ಯಾವುದೇ ಮಾಧ್ಯಮದವರೂ ಇದನ್ನು ಪ್ರಶ್ನಿಸುವುದಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
Published by: MAshok Kumar
First published: October 12, 2020, 7:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories