ಜೈಪುರ: ದೇಶದಲ್ಲಿ ಕೊರೊನಾ (Corona) ಉಲ್ಬಣವಾಗುತ್ತಿದೆ. ಈ ನಡುವೆ ಕೊರೊನಾ ನಿಯಮ ಪಾಲಿಸದಿದ್ದರೆ, ಭಾರತ್ ಜೋಡೋಯಾತ್ರೆಯನ್ನು ನಿಲ್ಲಿಸಿ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Union Health Minister Mansukh Mandaviya) ಅವರು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಗೆ (Rahul Gandhi) ಪತ್ರ ಬರೆದಿದ್ದರು. ಇದೀಗ ಈ ವಿಚಾರವಾಗಿ ಪ್ರತಿಕ್ರಿಯಿಸಿರು ರಾಹುಲ್ ಗಾಂಧಿ ಅವರು, ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatre) ನಿಲ್ಲಿಸಲು ಬಿಜೆಪಿ (BJP) ಹೊಸ ತಂತ್ರ ನಡೆಸುತ್ತಿದೆ. ಯಾತ್ರೆಯನ್ನು ನಿಲ್ಲಿಸಲು ಈಗ ಕಾರಣಗಳನ್ನು ಹೇಳುತ್ತಿದ್ದಾರೆ. ಈ ದೇಶದ ಶಕ್ತಿ ಮತ್ತು ಸತ್ಯಕ್ಕೆ ಅವರು ಹೆದರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
#WATCH | ...It's their (BJP) new idea, they wrote a letter to me saying COVID is coming & stop the Yatra. All these are excuses to stop this Yatra, they are scared of India's truth: Rahul Gandhi on Union Health min's letter pertaining to Covid protocols in Bharat Jodo Yatra pic.twitter.com/BCzziH2n06
— ANI (@ANI) December 22, 2022
ಯಾತ್ರೆಯನ್ನು ನಿಲ್ಲಿಸಲು ಬಿಜೆಪಿ ಈಗ ಕಾರಣಗಳನ್ನು ಹೇಳುತ್ತಿದೆ
ಈ ಯಾತ್ರೆ ಕಾಶ್ಮೀರದವರೆಗೂ ಸಂಚರಿಸುತ್ತಿದೆ. ಆದರೀಗ ಬಿಜೆಪಿಯವರು ಹೊಸ ಐಡಿಯಾ ಮಾಡಿದ್ದಾರೆ. ಕೋವಿಡ್ ಬರುತ್ತಿದೆ ಹಾಗಾಗಿ ಭಾರತ್ ಜೋಡೋ ಯಾತ್ರೆ ನಿಲ್ಲಿಸಿ ಎಂದು ನನಗೆ ಪತ್ರ ಬರೆದಿದ್ದಾರೆ. ಯಾತ್ರೆಯನ್ನು ನಿಲ್ಲಿಸಲು ಈಗ ಕಾರಣಗಳನ್ನು ಹೇಳುತ್ತಿದ್ದಾರೆ. ಮಾಸ್ಕ್ ಧರಿಸಿ, ಯಾತ್ರೆ ನಿಲ್ಲಿಸಿ, ಇವೆಲ್ಲವನ್ನು ಈಗ ಹೇಳುತ್ತಿದ್ದಾರೆ. ಈ ದೇಶದ ಶಕ್ತಿ ಮತ್ತು ಸತ್ಯಕ್ಕೆ ಅವರು ಹೆದರುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ನಿಲ್ಲಿಸುವಂತೆ ಮನ್ಸುಖ್ ಮಾಂಡವಿಯಾ ಪತ್ರ
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ತಮ್ಮ 'ಭಾರತ್ ಜೋಡೋ ಯಾತ್ರೆ'ಯನ್ನು ಮುಂದುವರಿಸುವುದಾದರೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ರಾಹುಲ್ ಗಾಂದಿಗೆ ಪತ್ರ ಬರೆದಿದ್ದರು. ಚೀನಾದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಮಾಂಡವಿಯಾ ಅವರು ಕಳವಳ ವ್ಯಕ್ತಪಡಿಸಿದರು ಮತ್ತು ಮಂಗಳವಾರ ರಾಹುಲ್ಗೆ ಬರೆದ ಪತ್ರದಲ್ಲಿ ಕೊರೊನಾ ನಿಯಮಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ದೇಶದ ಹಿತಾಸಕ್ತಿಯಿಂದ ತಮ್ಮ ಯಾತ್ರೆಯನ್ನು ಇಲ್ಲಿಗೆ ಕೊನೆಗೊಳಿಸುವಂತೆ ರಾಹುಲ್ ಗಾಂಧಿಗೆ ಹೇಳಿದ್ದರು.
ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡ್ಬೇಕು
ಮಾಸ್ಕ್ಗಳು ಮತ್ತು ಸ್ಯಾನಿಟೈಸರ್ಗಳ ಬಳಕೆ ಸೇರಿದಂತೆ ಕೋವಿಡ್ ಪ್ರೋಟೋಕಾಲ್ ಅನ್ನು ಪಾದಯಾತ್ರೆ ವೇಳೆ ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ನಾನು ರಾಹುಲ್ ಗಾಂಧಿ ಅವರನ್ನು ವಿನಂತಿಸುತ್ತೇನೆ.
3 Rajasthan MPs had written to me that a number of
Congress' Bharat Jodo Yatra participants have been detected Covid19 positive. Himachal Pradesh CM also tested positive after attending this yatra: Union Health Minister Dr Mansukh Mandaviya pic.twitter.com/OPaPcQvfGl
— ANI (@ANI) December 21, 2022
ಒಂದು ವೇಳೆ ಕೋವಿಡ್ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ, ಜನರ ಆರೋಗ್ಯ ದೃಷ್ಟಿಯಿಂದ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದ ದೇಶವನ್ನುರಕ್ಷಿಸಲು, ದೇಶದ ಹಿತಾಸಕ್ತಿಗಾಗಿ 'ಭಾರತ್ ಜೋಡೋ ಯಾತ್ರೆ'ಯನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದರು.
ಕೋವಿಡ್ 19 ದೇಶದಲ್ಲಿ ಹರಡದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ
ಇನ್ನೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ, ಕೋವಿಡ್ 19 ದೇಶದಲ್ಲಿ ಹರಡದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಆದರೆ ಒಬ್ಬ ಮಂತ್ರಿಯನ್ನು ಪ್ರಶ್ನಿಸುವುದು ಹೇಗೆ ಎಂಬುವುದನ್ನು ಆಲೋಚಿಸುತ್ತಿದ್ದರೆ, ಅವರಿಗೆ ನಾವೇನು ಮಾಡಬೇಕು? ಈ ರೀತಿ ಪ್ರಶ್ನಿಸುವುದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದಂತೆ ಎಂದು ಮಾಂಡವೀಯ ಅವರು ತಿರುಗೇಟು ನೀಡಿದ್ದರು.
ಇದನ್ನೂ ಓದಿ: Corona Virus: ಕೊರೋನಾ ಇನ್ನೂ ಮುಗಿದಿಲ್ಲ, ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸಿ: ಕೇಂದ್ರದ ಸಲಹೆ
ನಿನ್ನೆ ಮನ್ಸುಖ್ ಮಾಂಡವೀಯ ದೇಶದ ಕೋವಿಡ್ ಪರಿಸ್ಥಿತಿಯ ಕುರಿತು ಉನ್ನತ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆ ನಡೆಸಿದರು. ದೇಶದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ