Politicians Cooking: ಭಾರತದ ರಾಜಕಾರಣಿಗಳಲ್ಲಿ ಇವ್ರೇ ಚೆನ್ನಾಗಿ ಅಡುಗೆ ಮಾಡ್ತಾರಂತೆ!

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಏನಪ್ಪಾ ಇದು ಆಶ್ಚರ್ಯ! ರಾಜಕಾರಿಣಿಗಳು ಅಡುಗೆ ಸಹ ಮಾಡ್ತಾರಾ ಅಂತ ನೀವು ಒಂದು ಕ್ಷಣ ಶಾಕ್ ಆಗಬಹುದು.

  • Share this:

ಸಾಮಾನ್ಯವಾಗಿ ನಾವು ಈ ಸಿನೆಮಾ ನಟ-ನಟಿಯರು ಮತ್ತು ಕ್ರಿಕೆಟ್ ಆಟಗಾರರು ತಮ್ಮ ಬಿಡುವಿನ ಸಮಯದಲ್ಲಿ ಏನಾದರೊಂದು ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಉದಾಹರಣೆಗೆ ಕೆಲವು ಸೆಲೆಬ್ರಿಟಿಗಳು ಚೆನ್ನಾಗಿ ಅಡುಗೆ ಮಾಡಿದರೆ, ಇನ್ನೂ ಕೆಲವರು ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವ ಹವ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ಈಗ ನಮ್ಮ ದೇಶದಲ್ಲಿ ರಾಜಕಾರಿಣಿಗಳನ್ನು ಸಹ ಸೆಲೆಬ್ರಿಟಿಗಳಂತೆಯೇ ನೋಡುತ್ತಾರೆ. ಅವರಿಗೂ ಸಹ ಸೆಲೆಬ್ರಿಟಿಗಳಿಗೆ ಇರುವ ಹಾಗೆ ದೊಡ್ಡ ಅಭಿಮಾನಿಗಳ ಬಳಗವೇ ಇರುತ್ತದೆ ಮತ್ತು ಅವರನ್ನು ಫಾಲೋ ಮಾಡುವ ಜನರು ಸಹ ಇರುತ್ತಾರೆ. ಇನ್ನೂ ಹವ್ಯಾಸಗಳ (Habit) ವಿಷಯಕ್ಕೆ ಬಂದರೆ ಕೆಲವು ರಾಜಕಾರಣಿಗಳಿಗೂ (Politicians) ಸಹ ಅಡುಗೆ ಮಾಡುವ (Cooking) ಹವ್ಯಾಸ ಇರುತ್ತದೆ.


ಏನಪ್ಪಾ ಇದು ಆಶ್ಚರ್ಯ! ರಾಜಕಾರಿಣಿಗಳು ಅಡುಗೆ ಸಹ ಮಾಡ್ತಾರಾ ಅಂತ ನೀವು ಒಂದು ಕ್ಷಣ ಶಾಕ್ ಆಗಬಹುದು. ಇಲ್ಲೊಬ್ಬ ರಾಜಕಾರಿಣಿಗೆ ಸಂದರ್ಶನದಲ್ಲಿ ಯಾರು ಒಳ್ಳೆಯ ರಾಜಕಾರಿಣಿ ಚೆಫ್ ಅಂತ ಕೇಳಿದ್ದಕ್ಕೆ ಅವರು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಹೆಸರನ್ನು ಹೇಳಿದ್ದಾರೆ ನೋಡಿ.


ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಚೆನ್ನಾಗಿ ಅಡುಗೆ ಮಾಡ್ತಾರಂತೆ!
ಇತ್ತೀಚೆಗೆ ಈ ಆಹಾರದ ರುಚಿಗಳ ಬಗ್ಗೆ ಕಾರ್ಯಕ್ರಮಗಳನ್ನು ಮಾಡುವಂತಹ ಪತ್ರಕರ್ತರೊಬ್ಬರಿಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ ತಮಗೆ ಏನೇನೆಲ್ಲಾ ಇಷ್ಟ ಅಂತ ಮನಬಿಚ್ಚಿ ಹೇಳಿ ಕೊಂಡಿದ್ದಾರೆ ನೋಡಿ. ಹಾಗೆಯೇ ಅವರನ್ನು ಭಾರತದ ರಾಜಕಾರಣಿಗಳಲ್ಲಿ ಯಾರು ಅತ್ಯುತ್ತಮವಾಗಿ ಅಡುಗೆ ಮಾಡ್ತಾರೆ ಅಂತ ಕೇಳಿದ್ದಕ್ಕೆ ಅವರು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅತ್ಯುತ್ತಮವಾಗಿ ಅಡುಗೆ ಮಾಡ್ತಾರೆ ಎಂದಿದ್ದಾರೆ.


ತಮ್ಮ ತಾಯಿಯನ್ನು ಬಿಟ್ಟುಕೊಡದ ರಾಹುಲ್!
ಆದರೆ  ನಮ್ಮ ಕುಟುಂಬದಲ್ಲಿ ತಾಯಿ ಸೋನಿಯಾ ಗಾಂಧಿ ಅಡುಗೆ ಮಾಡೋದರಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಕುನಾಲ್ ವಿಜಯಕರ್ ಅವರೊಂದಿಗಿನ ಸಂಪೂರ್ಣ ಸಂವಾದದ ವೀಡಿಯೋ ತುಣುಕುಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.


ಪ್ರಿಯಾಂಕಾ ಗಾಂಧಿ ವಾದ್ರಾ ಅಡುಗೆ ಮಾಡ್ತಾರಾ?
ಯೂಟ್ಯೂಬ್ ಚಾನೆಲ್ 'ಖಾನೆ ಮೇ ಕ್ಯಾ ಹೈ' ಗೆ ನೀಡಿದ ಸಂದರ್ಶನದಲ್ಲಿ, ಅಡುಗೆ ಕೌಶಲ್ಯದಲ್ಲಿ ಎರಡನೇ ಸ್ಥಾನದಲ್ಲಿರುವ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಇದು ಇಷ್ಟವಾಗದಿದ್ದರೂ, "ನನ್ನ ತಾಯಿ ಸೋನಿಯಾ ಅವರು ತುಂಬಾನೇ ಚೆನ್ನಾಗಿ ಅಡುಗೆ ಮಾಡ್ತಾರೆ" ಎಂದು ರಾಹುಲ್ ಗಾಂಧಿ ಹೇಳಿದರು.


ರಾಹುಲ್ ಗಾಂಧೀಗೆ ಈ ಆಹಾರ ಇಷ್ಟವಂತೆ
ವಯನಾಡ್‌ನ ಮಾಜಿ ಸಂಸದ ರಾಹುಲ್ ಗಾಂಧಿ ತಮ್ಮ ಗಾಂಧಿ ಕುಟುಂಬದಲ್ಲಿ ಪಾಕಶಾಲೆಯ ಕೌಶಲ್ಯದ ವಿಷಯದಲ್ಲಿ ತಾವು ಮೂರನೇ ಸ್ಥಾನದಲ್ಲಿದ್ದಾರೆ ಅಂತ ಸಹ ಸಂದರ್ಶನದಲ್ಲಿ ಹೇಳಿದರು.


ಇದನ್ನೂ ಓದಿ: IPL 2023: ಆನ್​ಲೈನ್​ ಗೇಮ್​ನಲ್ಲಿ 1 ಕೋಟಿ ಗೆದ್ದ ಧೋನಿ ಅಭಿಮಾನಿ! ಐಪಿಎಲ್​ನಿಂದ ಮಿಲಿಯನೇರ್ ಆದ ರೈತನ ಮಗ!


ತಮ್ಮ ಆಹಾರ ಆದ್ಯತೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡ ರಾಹುಲ್ ಗಾಂಧಿ ಅವರು 'ಬೆಳಿಗ್ಗೆ ಕಾಫಿ' ಮತ್ತು 'ಸಂಜೆ ಚಹಾ' ಕುಡಿಯುವ ವ್ಯಕ್ತಿ ತಾವು ಅಂತ ಹೇಳಿಕೊಂಡರು. ಭಾರತದ ಸಿಹಿ ತಿಂಡಿಗಳು ಮತ್ತು ಫ್ರೆಂಚ್ ಸಿಹಿ ತಿಂಡಿಗಳಿಗಿಂತ ಚೆನ್ನಾಗಿರುತ್ತವೆ ಅಂತ ಸಹ ರಾಹುಲ್ ಹೇಳಿದರು.




ಹಳೆಯ ದೆಹಲಿಯಲ್ಲಿ ನಡೆದ ‘ಫುಡ್ ವಾಕ್’ ಸಮಯದಲ್ಲಿ ಈ ಸಂದರ್ಶನವನ್ನು ರೆಕಾರ್ಡ್ ಮಾಡಲಾಯಿತು, ಅಲ್ಲಿ ಅವರು ಮತಿಯಾ ಮಹಲ್ ಮಾರ್ಕೆಟ್ ಮತ್ತು ಬಂಗಾಳಿ ಮಾರ್ಕೆಟ್ ನ ಜನಪ್ರಿಯ ಭಕ್ಷ್ಯಗಳನ್ನು ಆನಂದಿಸಿದರು. ಅವರು ಈ ಪ್ರದೇಶಗಳಲ್ಲಿನ ನಾಥು ಸ್ವೀಟ್ಸ್ ಅಂಗಡಿಯಿಂದ ಇಲ್ಲಿನ ಪ್ರಸಿದ್ಧವಾದ 'ಶರ್ಬತ್' ಮತ್ತು 'ಗೋಲ್‌ಗಪ್ಪಾ' ಗಳನ್ನು ಸಹ ರಾಹುಲ್ ರುಚಿ ನೋಡಿದರು.


ಇದನ್ನೂ ಓದಿ: SBI: ವರ್ಷದಲ್ಲಿ 4 ರಿಂದ 5 ತಿಂಗಳು ಮಾತ್ರ ತೆರೆದಿರುತ್ತೆ ಈ ಬ್ಯಾಂಕ್ ಶಾಖೆ!

top videos


    ಸೂರತ್ ನ್ಯಾಯಾಲಯವು 'ಮೋದಿ ಉಪನಾಮ' ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ನಂತರ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ, ರಾಹುಲ್ ಗಾಂಧಿ ಅವರು ದೆಹಲಿಯ ಲುಟಿಯನ್ಸ್ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿ ಶನಿವಾರ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಸ್ಥಳಾಂತರಗೊಂಡರು. 2005 ರಿಂದ ಸುಮಾರು ಎರಡು ದಶಕಗಳ ಕಾಲ ತುಘಲಕ್ ಲೇನ್ ಬಂಗಲೆಯಲ್ಲಿ ರಾಹುಲ್ ಗಾಂಧಿ ನೆಲೆಸಿದ್ದರು.

    First published: