• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Rahul Gandhi: ಭಾರತ್ ಜೋಡೋ ಯಾತ್ರೆ ನನಗೂ ಅಲ್ಲ ಕಾಂಗ್ರೆಸ್‌ಗೂ ಅಲ್ಲ, ಭಾರತದ ಜನರಿಗಾಗಿ: ರಾಹುಲ್ ಗಾಂಧಿ

Rahul Gandhi: ಭಾರತ್ ಜೋಡೋ ಯಾತ್ರೆ ನನಗೂ ಅಲ್ಲ ಕಾಂಗ್ರೆಸ್‌ಗೂ ಅಲ್ಲ, ಭಾರತದ ಜನರಿಗಾಗಿ: ರಾಹುಲ್ ಗಾಂಧಿ

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ವಿರೋಧಿಗಳು ನಾನು ಧರಿಸಿದ ಬಿಳಿ ಬಣ್ಣದ ಟೀ ಶರ್ಟ್‌ಅನ್ನು ಕೆಂಪು ಟೀ ಶರ್ಟ್‌ ಆಗಿ ಮಾಡೋದಾದರೆ ಮಾಡಲಿ, ಅದು ಅವರಿಚ್ಛೆ ಅಂದುಕೊಂಡೆ. ಆದರೆ ಹಾಗಾಗಲಿಲ್ಲ, ಕಾಶ್ಮೀರಿಗರು ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡರು. ಯಾಕಂದ್ರೆ ಅವರೆಲ್ಲ ಹುಟ್ಟಿದಾಗಿನಿಂದ ಭಾರತೀಯರು. 2014ರ ನಂತರ ಹುಟ್ಟಿಕೊಂಡ ಭಾರತೀಯರು ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Jammu and Kashmir, India
  • Share this:

ಶ್ರೀನಗರ: ಪ್ರತಿಕೂಲ ಹವಾಮಾನದ ನಡುವೆಯೂ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಕಾಂಗ್ರೆಸ್‌ (Congress) ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆ (Bharat Jodo Yatra) ಸೋಮವಾರ ಜಮ್ಮು ಕಾಶ್ಮೀರದಲ್ಲಿ (Jammu and Kashmir) ಸಮಾಪನಗೊಂಡಿದೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಇರುವ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಧ್ವಜಾರೋಹಣ ಮಾಡುವ ಮೂಲಕ ಯಾತ್ರೆಯ ಸಮಾರೋಪ ಕಾರ್ಯಕ್ರಮ ಆರಂಭಿಸಿದರು. ಬಳಿಕ ಕ್ರೀಡಾಂಗಣದಲ್ಲಿ ಜಾಥಾ ನಡೆದು ಬಿಡದೇ ಸುರಿಯುತ್ತಿದ್ದ ಹಿಮಮಳೆಯ ಮಧ್ಯೆಯೂ ಕಾಂಗ್ರೆಸ್ ನಾಯಕರು ಭಾಷಣ ಮಾಡಿದರು.


ಈ ವೇಳೆ ಭಾರತ್ ಜೋಡೋ ಯಾತ್ರೆಯ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾನು ಈ ಯಾತ್ರೆಯನ್ನು ನನಗಾಗಿ ಅಥವಾ ಕಾಂಗ್ರೆಸ್‌ ಪಕ್ಷಕ್ಕಾಗಿ ಮಾಡಿಲ್ಲ. ಈ ದೇಶದ ಜನರಿಗಾಗಿ ಮಾಡಿದ್ದೇನೆ. ಈ ದೇಶದ ಅಡಿಪಾಯವನ್ನು ನಾಶ ಮಾಡಲು ಬಯಸುವ ಸಿದ್ಧಾಂತದ ವಿರುದ್ಧ ನಿಲ್ಲುವುದು ನಮ್ಮ ಗುರಿ ಎಂದರು.


ಇದನ್ನೂ ಓದಿ: Rahul Gandhi: ಭಾರತ್​ ಜೋಡೋ; ಯಶಸ್ಸಿನಿಂದ ಬಿಜೆಪಿಗೆ ಭಯ, ಯಾತ್ರೆ ನಿಲ್ಲಿಸಲು ಕೊರೊನಾ ತಂತ್ರ! ರಾಹುಲ್ ಗಾಂಧಿ ಗಂಭೀರ ಆರೋಪ


'ನೋವು ಏನೆಂದು ನನಗೆ ಗೊತ್ತಿದೆ'


ಮುಂದುವರಿದು ಮಾತನಾಡಿದ ಅವರು, ನನಗೆ ಹಿಂಸೆ ಎಂದರೆ ಏನೆಂದು ಅರ್ಥವಾಗಿದೆ. ನಾನು ಹಿಂಸೆಯನ್ನು ಅನುಭವಿಸಿದ್ದೇನೆ. ನಾನು 14 ವರ್ಷದವನಿದ್ದಾಗ ಶಾಲೆಯಲ್ಲಿದ್ದೆ. ಒಂದು ಬೆಳಿಗ್ಗೆ ಟೀಚರ್ ಬಂದು ಕರೆದಾಗ ನನಗೆ ಏನೋ ಆಗಿದೆ ಅನಿಸಿತು. ಪ್ರಿನ್ಸಿಪಾಲ್ ಕಚೇರಿಗೆ ಹೋದಾಗ ರಾಹುಲ್ ನಿನಗೆ ಫೋನ್ ಬಂದಿದೆ ಎಂದರು. ನಾನು ಫೋನ್ ಅನ್ನು ಕಿವಿಗಿಟ್ಟಾಗ ನನ್ನ ಅಮ್ಮನ ಜೊತೆ ಕೆಲಸ ಮಾಡುವ ಹೆಂಗಸು ಜೋರಾಗಿ ಅಳುತ್ತಿದ್ದರು. 'ರಾಹುಲ್, ಅಜ್ಜಿಗೆ ಗುಂಡು ಹೊಡೆದಿದ್ದಾರೆ' ಎಂದರು ಎಂದು ತನ್ನ ಹಳೆಯ ಕಹಿ ನೆನಪುಗಳನ್ನು ಮೆಲುಕು ಹಾಕಿದರು.


ಇದನ್ನೂ ಓದಿ: Bharat Jodo Yatra: ಭಾರತ ಜೋಡೋ ಯಾತ್ರೆ ಸಮಾರೋಪ; ಕಾಶ್ಮೀರದ ಹಿಮ ಸೌಂದರ್ಯಕ್ಕೆ ಮಾರುಹೋದ ಡಿಕೆಶಿ


ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆಯ ಸಂದರ್ಭದ ಘಟನೆಯನ್ನೂ ನೆನಪು ಮಾಡಿದ ರಾಹುಲ್ ಗಾಂಧಿ, ‘ಆರು ವರ್ಷದ ನಂತರ ನಾನು ಅಮೆರಿಕದಲ್ಲಿದ್ದೆ. ಆಗ ಪುನಃ ನನಗೆ ಫೋನ್ ಬಂತು. ನನ್ನ ತಂದೆಗೆ  ಸ್ನೇಹಿತರೊಬ್ಬರಿದ್ದರು. ಅವರು ಫೋನ್ ಮಾಡಿದ್ದರು. ರಾಹುಲ್ ಕೆಟ್ಟ ಸುದ್ದಿ ಎಂದರು. 'ನನಗೆ ಗೊತ್ತು ಅಪ್ಪ ತೀರಿ ಹೋಗಿದ್ದಾರೆ' ಎಂದು ಅವರಿಗೆ ಹೇಳಿದೆ. ಆಗ ಅವರು ಫೋನ್ ಇಟ್ಟರು ಎಂದು ಹೇಳಿದ ರಾಹುಲ್ ಗಾಂಧಿ, ಹಿಂಸೆ ಮಾಡುವವರಿಗೆ, ಹಿಂಸೆಗೆ ಪ್ರಚೋದನೆ ನೀಡುವವರಿಗೆ ಅಂದರೆ ನರೇಂದ್ರ ಮೋದಿಜಿಯಂತವರಿಗೆ, ಅಮಿತ್ ಶಾ ಅಂತಹವರಿಗೆ, ಅಜಿತ್ ದೋವಲ್ ಅಂತಹವರಿಗೆ, ಆರೆಸ್ಸೆಸ್‌ನಲ್ಲಿ ಇರುವ ಜನರಿಗೆ ಈ ನೋವುಗಳು ಅರ್ಥವಾಗುವುದಿಲ್ಲ. ಆದರೆ ನನಗೆ ಅರ್ಥವಾಗುತ್ತದೆ. ನನ್ನ ಆದ್ಯತೆ ಆ ಫೋನ್ ಕರೆಗಳನ್ನು ನಿಲ್ಲಿಸುವುದಾಗಿದೆ ಎಂದು ಹೇಳಿದರು.


'ಪುಲ್ವಾಮ ಸೈನಿಕರಿಗೂ ಮಕ್ಕಳಿದ್ದಾರೆ'


ಮುಂದುವರಿದು ಪುಲ್ವಾಮ ಘಟನೆಯ ಕುರಿತೂ ಮಾತನಾಡಿದ ರಾಹುಲ್ ಗಾಂಧಿ. ‘ಪುಲ್ವಾಮದಲ್ಲಿ ನಮ್ಮ ಸೈನಿಕರು ಮಡಿದರು. ಅವರ ಮನೆಗಳಿಗೂ ಟೆಲಿಫೋನ್ ಕರೆಗಳು ಹೋಗಿರುತ್ತವೆ. ಸಾವಿರಾರು ಕಾಶ್ಮೀರಿ ಜನರ ಮನೆಗಳಿಗೆ ಟೆಲಿಫೋನ್ ಹೋಗಿರುತ್ತವೆ. ಸೇನೆಯ ಕುಟುಂಬಗಳಿಗೆ ಫೋನ್ ಕರೆಗಳು ಹೋಗುತ್ತಿರುತ್ತವೆ. ಇದು ನಿಮಗೆಲ್ಲರಿಗೂ ಕೇವಲ ಒಂದು ಟೆಲಿಫೋನ್ ಅನಿಸುತ್ತದೆ. ಆದರೆ ನಮಗೆ ಅದು ಕೇವಲ ಟೆಲಿಫೋನ್ ಅಲ್ಲ. ಪುಲ್ವಾಮ ಸೈನಿಕರಿಗೆ ಮಕ್ಕಳಿದ್ದಾರೆ. ಅವರ ಹೃದಯದಲ್ಲಿ ಏನಾಗುತ್ತಿದೆ ಎಂಬುದು ನನಗೆ ಗೊತ್ತಿದೆ. ಏಕೆಂದರೆ ನನ್ನ ಹೃದಯದಲ್ಲಿಯೂ ಅದೇ ಆಗುತ್ತಿದೆ ಎಂದು ಭಾವುಕರಾದರು.




ಅಲ್ಲದೇ, ಕಾಶ್ಮೀರದಲ್ಲಿ ನಾನು ಕಾಲ್ನಡಿಗೆಯಲ್ಲಿ ಹೋಗೋದು ಬೇಡ, ವಾಹನದಲ್ಲಿ ಯಾತ್ರೆ ನಡೆಸಿ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದರು. ಒಂದು ವೇಳೆ ನಾನು ಕಾಲ್ನಡಿಗೆಯಲ್ಲಿ ಹೋದರೆ ನನ್ನ ಮೇಲೆ ಗ್ರೇನೇಡ್ ಎಸೆಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ನಾನು ಅದಕ್ಕೆ ತಯಾರಿರಲಿಲ್ಲ. ಯಾಕೆಂದರೆ ಕಾಶ್ಮೀರ ನನಗೆ ಸ್ವಂತ ಮನೆ ಇದ್ದಂತೆ. ನನ್ನ ಮನೆಯಲ್ಲಿ ನನಗೆಂತಹ ಬೆದರಿಕೆ ಎಂದ ರಾಹುಲ್ ಗಾಂಧಿ, ಆದರೂ ವಿರೋಧಿಗಳು ಒಂದು ವೇಳೆ ನಾನು ಧರಿಸಿದ ಬಿಳಿ ಬಣ್ಣದ ಟೀ ಶರ್ಟ್‌ಅನ್ನು ಕೆಂಪು ಬಣ್ಣದ ಟೀ ಶರ್ಟ್‌ ಆಗಿ ಬದಲಾಯಿಸುವುದಾದರೆ ಮಾಡಲಿ, ಅದು ಅವರಿಚ್ಛೆ. ಆದರೆ ಹಾಗಾಗಲಿಲ್ಲ, ನಾನು ಅಂದುಕೊಂಡಂತೆಯೇ ಕಾಶ್ಮೀರಿಗರು ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡರು. ಯಾಕಂದ್ರೆ ಅವರೆಲ್ಲ ಹುಟ್ಟಿದಾಗಿನಿಂದ ಭಾರತೀಯರು. 2014ರ ನಂತರ ಹುಟ್ಟಿಕೊಂಡ ಭಾರತೀಯರು ಅಲ್ಲ ಎಂದು ಹೇಳಿದರು.


'ಯಾತ್ರೆಯಿಂದ ಬಹಳಷ್ಟು ಕಲಿತಿದ್ದೇನೆ'


ಯಾತ್ರೆಯ ಅನುಭವಗಳ ಬಗ್ಗೆಯೂ ಮಾತನಾಡಿದ ರಾಹುಲ್ ಗಾಂಧಿ, ಈ ಯಾತ್ರೆಯಿಂದ ನಾನು ಸಾಕಷ್ಟು ಕಲಿತಿದ್ದೇನೆ. ಒಂದು ದಿನ ನಡೆಯೋವಾಗ ನಾನಿನ್ನೂ 6-7 ಗಂಟೆ ನಡೆಯಲು ಬಾಕಿ ಇತ್ತು. ಇನ್ನು ನನ್ನಿಂದ ಆಗಲ್ಲ. ಬಹಳಷ್ಟು ದಣಿದಿದ್ದೇನೆ ಎಂದುಕೊಂಡೆ. ಆಗ ಒಂದು ಪುಟ್ಟ ಹುಡುಗಿ ನನ್ನ ಬಳಿ ಓಡಿ ಬಂದು ತಬ್ಬಿಕೊಂಡು ನಿಮಗಾಗಿ ಏನೋ ಬರೆದಿದ್ದೇನೆ ಎಂದು ಕೊಟ್ಟು ಓಡಿ ಹೋದಳು. ನಾನು ಅದನ್ನು ಓದಿದಾಗ ನನ್ನ ದಣಿವು ಮಾಯವಾಗಿತ್ತು ಎಂದರು. ವಿಶೇಷ ಅಂದ್ರೆ ಆ ಹುಡುಗಿ ಆ ಪತ್ರದಲ್ಲಿ ‘ನಿಮ್ಮ ಮೊಣಕಾಲು ನೋಯುತ್ತಿರುವುದು ನಿಮ್ಮ ಮುಖದಲ್ಲಿ ಕಾಣುತ್ತಿದೆ. ಅದು ನನ್ನ ಗಮನಕ್ಕೆ ಬಂದಿದೆ. ನಾನು ನಿಮ್ಮೊಂದಿಗೆ ನಡೆಯಲು ಸಾಧ್ಯವಿಲ್ಲ. ಆದರೆ ನನಗಾಗಿ ಮತ್ತು ನನ್ನ ಭವಿಷ್ಯಕ್ಕಾಗಿ ನೀವು ನಡೆಯುತ್ತಿರುವುದರಿಂದ ನಾನು ನಿಮ್ಮ ಹೃದಯದ ಜೊತೆ ನಡೆಯುತ್ತೇನೆ ಎಂದು ಬರೆದಿದ್ದಳು. ಅದನ್ನು ಓದಿದ ಕ್ಷಣವೇ ನನ್ನ ನೋವು ಮಾಯವಾಗಿತ್ತು ಎಂದು ಯಾತ್ರೆಯ ಸವಿ ನೆನಪುಗಳನ್ನು ಹೇಳಿದರು.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು