Rahul Gandhi: ಬೆಲೆ ಏರಿಕೆ ಬಿಸಿ ಮತ್ತಷ್ಟು ಹೆಚ್ಚಲಿದೆ! ಕೂಡಲೇ ಕ್ರಮ ಕೈಗೊಳ್ಳಿ ಎಂದ ರಾಹುಲ್ ಗಾಂಧಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಬ್ಯಾರಲ್ ಒಂದಕ್ಕೆ 100 ಡಾಲರ್ ಆಗಲಿದೆ. ಆಹಾರದ ಬೆಲೆಗಳಲ್ಲಿ ಶೇಕಡಾ  22ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದಲ್ಲದೆ ಕೋವಿಡ್-19 ಮಹಾಮಾರಿ ಜಾಗತಿಕ ಪೂರೈಕೆ ಸರಪಳಿಗೆ ತಡೆಯೊಡ್ಡಲಿದೆ. ಈ‌‌ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಬೆಲೆ ಏರಿಕೆಯ ಬಿಸಿಯಿಂದ ಜನರನ್ನು ರಕ್ಷಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ರಾಹುಲ್​ ಗಾಂಧಿ

ರಾಹುಲ್​ ಗಾಂಧಿ

  • Share this:
ನವದೆಹಲಿ, ಮಾ.‌ 19: ದೇಶದಲ್ಲಿ ನಿರಂತರವಾಗಿ ಹೆಚ್ಚಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ (Praise Hike) ಮತ್ತು ಹಣದುಬ್ಬರ (Inflation) ಹಾಗೂ ಪಾತಾಳಮುಖಿಯಾಗಿರುವ ದೇಶದ ಆರ್ಥಿಕತೆ (Declining Economy) ಬಗ್ಗೆ ಸದಾ ಖಚಿತವಾಗಿ ಮಾತನಾಡುವ ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ಅವರು ಮತ್ತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ (Crude Oil) ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದ ದೇಶದ ಜನರಿಗೆ ಹೊರೆಯಾಗುವ ಸಾಧ್ಯತೆ ಇದೆ. ಕೂಡಲೇ ಕೇಂದ್ರ ಸರ್ಕಾರ (Union Government) ಅಗತ್ಯ ಕ್ರಮ‌ ಕೈಗೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

“ಕಚ್ಛಾ ತೈಲದ ಬೆಲೆ ಬ್ಯಾರಲ್ ಒಂದಕ್ಕೆ 100 ಡಾಲರ್ ಆಗಲಿದೆ”

“ಹಣದುಬ್ಬರದ ಭಾರ ಎಲ್ಲಾ ಭಾರತೀಯರಿಗೂ‌‌ ಹೊರೆಯಾಗಿ ಪರಿಣಮಿಸಿದೆ” ಅಂತ ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಅಶಕ್ತ ರಾಷ್ಟ್ರ ಉಕ್ರೇನ್ ಮೇಲೆ ಬಲಾಢ್ಯ ರಷ್ಯಾ ಯುದ್ಧ ಘೋಷಿಸುವ ಮುನ್ನವೇ ದಾಖಲೆಯ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿತ್ತು. ಇದರಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಹೊರೆಯಾಗಿತ್ತು. ಬೆಲೆ ಏರಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ” ಅಂತ ಆತಂಕ ವ್ಯಕ್ತಪಡಿಸಿದ್ದಾರೆ.“ಕೂಡಲೇ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು”

“ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಬ್ಯಾರಲ್ ಒಂದಕ್ಕೆ 100 ಡಾಲರ್ ಆಗಲಿದೆ. ಆಹಾರದ ಬೆಲೆಗಳಲ್ಲಿ ಶೇಕಡಾ  22ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದಲ್ಲದೆ ಕೋವಿಡ್-19 ಮಹಾಮಾರಿ ಜಾಗತಿಕ ಪೂರೈಕೆ ಸರಪಳಿಗೆ ತಡೆಯೊಡ್ಡಲಿದೆ.

ಈ‌‌ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಬೆಲೆ ಏರಿಕೆಯ ಬಿಸಿಯಿಂದ ಜನರನ್ನು ರಕ್ಷಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Rahul Gandhi​ ಮೇಲೆ ನಂಬಿಕೆ ಇಲ್ಲ. ಆದರೆ, ಕಾಂಗ್ರೆಸ್​ ಮೇಲಿದೆ; ನಾಯಕತ್ವ ಬದಲಾವಣೆಗೆ G23 ನಾಯಕರ ಆಗ್ರಹ

ಚಿಲ್ಲರೆ ಹಣದುಬ್ಬರದಲ್ಲಿ ಏರಿಕೆ

ಸೋಮವಾರ ಬಿಡುಗಡೆಯಾದ ಸರ್ಕಾರದ ಅಂಕಿಅಂಶಗಳ ಪ್ರಕಾರ, ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರವು ಎಂಟು ತಿಂಗಳ ಗರಿಷ್ಠ ಮಟ್ಟವಾದ 6.07 ಶೇಕಡಾವನ್ನು ತಲುಪಿದೆ ಮತ್ತು ಕಚ್ಚಾ ತೈಲ ಮತ್ತು ಆಹಾರೇತರ ವಸ್ತುಗಳ ಬೆಲೆಗಳು ಗಟ್ಟಿಯಾಗುತ್ತಿರುವ ಕಾರಣದಿಂದಾಗಿ ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇಕಡಾ 13.11 ಕ್ಕೆ ಏರಿದೆ.

ಕಚ್ಚಾ ತೈಲ ಬೆಲೆಯಲ್ಲಿಯೂ ಏರಿಕೆ

ಫೆಬ್ರವರಿ 24 ರಂದು ಪ್ರಾರಂಭವಾದ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಬೆಲೆ ಏರಿಕೆಯು ಸಗಟು ಬೆಲೆ ಸೂಚ್ಯಂಕದ ಮೇಲೆ ಒತ್ತಡವನ್ನು ಉಂಟುಮಾಡಿದೆ.

“ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿರಬೇಕು”

ಜಿ-23 ಗುಂಪಿನ ನಾಯಕ ಎಂದೇ ಹೇಳಲಾಗುವ ಗುಲಾಂ ನಬಿ ಆಜಾದ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನಿನ್ನೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ‌ ಮಾಧ್ಯಮಗಳ‌ ಜೊತೆ ಮಾತನಾಡಿರುವ ಗುಲಾಂ ನ ಆಜಾದ್, 'ಮುಂಬರುವ ವಿಧಾನಸಭಾ ಚುನಾವಣೆ ಕುರಿತು  ಚರ್ಚಿಸಲು ಭೇಟಿ ಮಾಡಿದ್ದೆ ಎಂದಿದ್ದಾರೆ.

ಪಕ್ಷದ ಅಧ್ಯಕ್ಷರ ಜೊತೆ ನಡೆದ ಮಾತುಕತೆ ಉತ್ತಮವಾಗಿತ್ತು. ನಾವು ಕಾಂಗ್ರೆಸ್ ಮುಖ್ಯಸ್ಥರನ್ನು ಭೇಟಿಯಾಗುತ್ತೇವೆ, ಅವರು ನಿಯಮಿತವಾಗಿ ನಾಯಕರನ್ನು ಭೇಟಿಯಾಗುತ್ತಾರೆ ಇದರಲ್ಲಿ ವಿಶೇಷ ಏನಿಲ್ಲ ಅಂತ ಹೇಳಿದ್ದಾರೆ.

ಇದನ್ನೂ ಓದಿ: Congress Crisis: ಸೋನಿಯಾ ಗಾಂಧಿ ಭೇಟಿ ಮಾಡಿದ ಜಿ-23 ಗುಂಪಿನ ನಾಯಕ ಗುಲಾಂ ನಬಿ ಆಜಾದ್

ಇತ್ತೀಚೆಗೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಸಲಹೆಗಳನ್ನು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ಸಲಹೆಗಳನ್ನೂ ನೀಡಿದ್ದೇನೆ. ಒಟ್ಟಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆದಿದೆ. ಪಕ್ಷವನ್ನು ಸುಧಾರಿಸುವ ಸಲಹೆಗಳನ್ನು ಸಾರ್ವಜನಿಕವಾಗಿ ನೀಡಲಾಗುವುದಿಲ್ಲ.

ಈಗ ಪಕ್ಷದ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ಸೋನಿಯಾ ಗಾಂಧಿ ಅವರು ರಾಜೀನಾಮೆಯನ್ನು ನೀಡಿದ್ದರು. ಆದರೆ ನಾವು ಅದನ್ನು ತಿರಸ್ಕರಿಸಿದ್ದೇವೆ. ಅವರೇ ಮುಂದುವರೆಯಬೇಕು ಎಂದು ನಿರ್ಧರಿಸಲಾಗಿದೆ' ಎಂದರು.
Published by:Annappa Achari
First published: