• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Rahul Gandhi: ತೆರಿಗೆ ಕೇಂದ್ರ ಸರ್ಕಾರಕ್ಕೆ, ಜವಾಬ್ದಾರಿ ರಾಜ್ಯಗಳಿಗೆ! ಇದು 'ಮೋದಿ ಒಕ್ಕೂಟ ವ್ಯವಸ್ಥೆ' ಎಂದ ರಾಹುಲ್ ಗಾಂಧಿ!

Rahul Gandhi: ತೆರಿಗೆ ಕೇಂದ್ರ ಸರ್ಕಾರಕ್ಕೆ, ಜವಾಬ್ದಾರಿ ರಾಜ್ಯಗಳಿಗೆ! ಇದು 'ಮೋದಿ ಒಕ್ಕೂಟ ವ್ಯವಸ್ಥೆ' ಎಂದ ರಾಹುಲ್ ಗಾಂಧಿ!

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ಪಾಲಿನ ತೆರಿಗೆಯನ್ನು ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಸಿಲಿಂಡರ್ ಗಳ ಬೆಲೆ ಇಳಿಸಬಹುದು. ಅದನ್ನು ಬಿಟ್ಟು ರಾಜ್ಯ ಸರ್ಕಾರಗಳು ವ್ಯಾಟ್ ಕಡಿಮೆ ಮಾಡಲು ಸಲಹೆ ನೀಡಿದ್ದಾರೆ ಎಂದು ಚರ್ಚೆ ಆಗುತ್ತಿದೆ. ಇದೇ ವಿಚಾರಕ್ಕೆ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಗುಡುಗಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ, ಏ. 28: ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಕೇಂದ್ರ ಸರ್ಕಾರ(Union Government)ದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ (Petrol), ಡೀಸೆಲ್ (Diesel) ಮತ್ತು ಅಡುಗೆ ಅನಿಲ ಸಿಲಿಂಡರ್ (Gas Cylinder) ಬೆಲೆಗಳನ್ನು ಏರಿಸಿ ನಿರುದ್ಯೋಗ, ಹಣದುಬ್ಬರ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಜನಸಾಮಾನ್ಯರನ್ನು ಇನ್ನಷ್ಟು ಕಷ್ಟಕ್ಕೆ ದೂಡುತ್ತಿರುವ ಬಗ್ಗೆ ಕಟುವಾಗಿ ಟೀಕೆ ಮಾಡುವ ರಾಹುಲ್ ಗಾಂಧಿ, ಈಗ ಮೋದಿ ಅವರ ಒಕ್ಕೂಟ ವ್ಯವಸ್ಥೆ (Federalism) ಕಲ್ಪನೆ ಕುರಿತಾಗಿ ಕಿಡಿ ಕಾರಿದ್ದಾರೆ. 'ಇದು ಸಹಕಾರಿ ಅಲ್ಲ, ಬಲವಂತವಾದುದಾಗಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.


ಮೋದಿಗೆ ರಾಹುಲ್ ಗಾಂಧಿ ತಿರುಗೇಟು


ದೇಶದಲ್ಲಿ ಕೊರೋನಾ 4ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅನಾವಶ್ಯಕವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದರು.  'ಪ್ರತಿಪಕ್ಷದ ಆಡಳಿತವಿರುವ ಹಲವು ರಾಜ್ಯಗಳಲ್ಲಿ ವ್ಯಾಟ್ ಇಳಿಸದ ಕಾರಣ ಇಂಧನ ದರ ಹೆಚ್ಚಾಗಿದೆ' ಎಂದಿದ್ದರು.


'ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಮತ್ತು ಸಹಕಾರಿ ಫೆಡರಲಿಸಂಗೆ ಪೂರಕವಾಗಿ ಕೆಲಸ ಮಾಡಲು ರಾಜ್ಯ ಸರ್ಕಾರಗಳು ರಾಷ್ಟ್ರೀಯ ಹಿತಾಸಕ್ತಿಗಾಗಿ ವ್ಯಾಟ್ ಅನ್ನು ಕಡಿಮೆ ಮಾಡಬೇಕು' ಎಂದು ಹೇಳಿದ್ದರು. ಒಂದು ದಿನದ ಬಳಿಕ ಪ್ರಧಾನಿ ಮಂದಿಗೆ ತಿರುಗೇಟು ನೀಡಿರುವ ರಾಹುಲ್ ಗಾಂಧಿ 'ಮೋದಿ ಅವರದು ಸಹಕಾರಿ ತತ್ವ ಅಲ್ಲ, ಬಲವಂತಕಾರಿ ತತ್ವ' ಎಂದು ಹೇಳಿದ್ದಾರೆ.


ಇದನ್ನೂ ಓದಿ: PM Modi: ಇಂಧನ ಮೇಲಿನ ವ್ಯಾಟ್ ಅನ್ನು ರಾಜ್ಯಗಳು ಕಡಿತಗೊಳಿಸಿ, ಜನರ ಹೊರೆ ಇಳಿಸಿ: ಪ್ರಧಾನಿ ಮೋದಿ ಸೂಚನೆ


ರಾಹುಲ್ ಗಾಂಧಿ ತೀಕ್ಷ್ಣ ಟ್ವೀಟ್


ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ಪಾಲಿನ ತೆರಿಗೆಯನ್ನು ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಸಿಲಿಂಡರ್ ಗಳ ಬೆಲೆ ಇಳಿಸಬಹುದು. ಅದನ್ನು ಬಿಟ್ಟು ರಾಜ್ಯ ಸರ್ಕಾರಗಳು ವ್ಯಾಟ್ ಕಡಿಮೆ ಮಾಡಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಬಹಳಷ್ಟು ಚರ್ಚೆ ಆಗುತ್ತಿತ್ತು.


ಇದೇ ವಿಷಯಕ್ಕೆ ಸಂಬಂಧಿಸಿದಂತೆ, 'ಹೆಚ್ಚಿರುವ ಇಂಧನ ಬೆಲೆಗಳು - ರಾಜ್ಯಗಳನ್ನು ದೂಷಿಸಿಕಲ್ಲಿದ್ದಲು ಕೊರತೆ - ರಾಜ್ಯಗಳನ್ನು ದೂರುವುದು ಆಮ್ಲಜನಕದ ಕೊರತೆ - ರಾಜ್ಯಗಳನ್ನು ದೂರುವುದು ಎಲ್ಲಾ ಇಂಧನ ತೆರಿಗೆಗಳಲ್ಲಿ ಶೇಕಡಾ 68ರಷ್ಟು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತದೆ. ಆದರೆ ಪ್ರಧಾನಿ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಾರೆ. ಮೋದಿಯವರ ಫೆಡರಲಿಸಂ ಸಹಕಾರಿಯಲ್ಲ. ಇದು ಬಲವಂತವಾದುದಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.ಕೇಂದ್ರಕ್ಕೆ ಹೆಚ್ಚು ತೆರಿಗೆ, ರಾಜ್ಯಕ್ಕೆ ಹೆಚ್ಚು ಜವಾಬ್ದಾರಿ


ಇಂಧನಗಳ ಮೇಲೆ ವಿಧಿಸುವ ಶೇಕಡಾ 68ರಷ್ಟು ತೆರಿಗೆ ಕೇಂದ್ರ ಸರ್ಕಾರದ ಖಜಾನೆ ಸೇರುತ್ತದೆ. ಆದರೆ ಬೆಲೆ ಏರಿಕೆಗೆ ರಾಜ್ಯಗಳ ವ್ಯಾಟ್ ಕಾರಣ ಎಂದು ಮೋದಿ ರಾಜ್ಯಗಳನ್ನು ದೂಷಿಸಿದ್ದಾರೆ. ಈ ಮೂಲಕ ಪ್ರಧಾನಿಯಾಗಿರುವವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ.


ಇದನ್ನೂ ಓದಿ: Rahul Gandhi: ದ್ವೇಷದ ಬುಲ್ಡೋಜರ್​​ಗಳನ್ನು ಆಫ್ ಮಾಡಿ: PM Modi ವಿರುದ್ಧ ರಾಹುಲ್ ವಾಗ್ದಾಳಿ


ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಅನ್ನು ಕಡಿಮೆ ಮಾಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ತಿಳಿಸಿತ್ತು. ಇದಕ್ಕೆ ಬಿಜೆಪಿಯೇತರ ಸರ್ಕಾರಗಳು ಸ್ಪಂದನೆ ನೀಡಿ ವ್ಯಾಟ್ ಕಡಿಮೆ ಮಾಡಿವೆ. ಆ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಆಗಿದೆ. ಯಾವ ರಾಜ್ಯಗಳಲ್ಲಿ ಸ್ಟೇಟ್ ವ್ಯಾಟ್ ಕಡಿಮೆ ಆಗಿಲ್ಲವೋ ಅಲ್ಲಿ ಬೆಲೆ ಹೆಚ್ಚಾಗಿದೆ ಎಂದು ಕೊರೋನಾ ಕುರಿತಾದ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಇದಕ್ಕೆ ಈಗ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

First published: