• Home
  • »
  • News
  • »
  • national-international
  • »
  • Rahul Gandhi: ಭಾರತ್ ಜೋಡೋ ಯಾತ್ರೆಯಲ್ಲಿ ಡಬಲ್ ರಾಹುಲ್! ತದ್ರೂಪಿ 'ಕೈ' ಯುವರಾಜನ ನೋಡಿ ಕಾರ್ಯಕರ್ತರೇ ಶಾಕ್!

Rahul Gandhi: ಭಾರತ್ ಜೋಡೋ ಯಾತ್ರೆಯಲ್ಲಿ ಡಬಲ್ ರಾಹುಲ್! ತದ್ರೂಪಿ 'ಕೈ' ಯುವರಾಜನ ನೋಡಿ ಕಾರ್ಯಕರ್ತರೇ ಶಾಕ್!

ರಾಹುಲ್​ ಗಾಂಧಿ ಅಲ್ಲ! ಯಾರಿವರು?

ರಾಹುಲ್​ ಗಾಂಧಿ ಅಲ್ಲ! ಯಾರಿವರು?

ಭಾರತ್ ಜೋಡೋ ಪಾದಯಾತ್ರೆ ವೇಳೆ ಥೇಟ್ ರಾಹುಲ್​ ಗಾಂಧಿ ಅವರಂತೆ ಬಿಳಿ ಟೀ-ಶರ್ಟ್​ ಧರಿಸಿ ವ್ಯಕ್ತಿಯೋರ್ವ ಕಾಣಿಸಿಕೊಂಡಿದ್ದಾನೆ. ಇನ್ನೂ ಈ ವ್ಯಕ್ತಿಯನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಮೀರತ್ ಮೂಲದ ಅಲೈಕ್ ಫೈಸಲ್ ಚೌಧರಿ ಎಂಬ ಕಾಂಗ್ರೆಸ್​ ಕಾರ್ಯಕರ್ತ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು

ಮುಂದೆ ಓದಿ ...
  • Share this:

ಲಕ್ನೋ: ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿಯವರಂತೆ (Rahul Gandhi) ವ್ಯಕ್ತಿಯೋರ್ವ ಭಾರತ್​ ಜೋಡೋ ಯಾತ್ರೆಯಲ್ಲಿ (Bharat Jodo Yathra) ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿದ್ದಾರೆ. ಬುಧವಾರ ಪಶ್ಚಿಮ ಉತ್ತರ ಪ್ರದೇಶದ  (UttarPradesh) ಬಾಗಪತ್ ಜಿಲ್ಲೆಯ ಮಾವಿಲ್ಕಾದಿಂದ ಭಾರತ್ ಜೋಡೋ ಯಾತ್ರೆಯನ್ನು ಪುನಾರಂಭಿಸಲಾಗಿತ್ತು. ಈ ವೇಳೆ ಮೀರತ್ (Meerat) ಮೂಲದ ಅಲೈಕ್ ಫೈಸಲ್ ಚೌಧರಿ ಎಂಬ ಕಾಂಗ್ರೆಸ್​ ಕಾರ್ಯಕರ್ತ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ನೋಡಲು ಥೇಟ್​ ರಾಹುಲ್​ ಗಾಂಧಿಯಂತೆ ಕಾಣಿಸುತ್ತಿದ್ದ ಕಾರ್ಯಕರ್ತ(Congress Worker) , ಪಕ್ಷದ ಇತರ ಬೆಂಬಲಿಗರೊಂದಿಗೆ ಬಿಳಿ ಟೀ-ಶರ್ಟ್ (White T-Shirt)​​ ಧರಿಸಿ ಯಾತ್ರೆ ನಡೆಸಿದರು. ಇವರನ್ನು ಕಂಡು ಅನೇಕ ಮಂದಿ ರಾಹುಲ್​ ಗಾಂಧಿಯೇ ಅಂದುಕೊಂಡಿದ್ದರು.


ಭಾರತ್ ಜೋಡೋ ಯಾತ್ರೆ ಮಂಗಳವಾರ ಮಧ್ಯಾಹ್ನ ದೆಹಲಿಯ ಮಾರ್ಗಾಟ್ ಹನುಮಾನ್ ದೇವಸ್ಥಾನದಿಂದ ಪ್ರಾರಂಭವಾಗಿ ನಂತರ ಉತ್ತರ ಪ್ರದೇಶವನ್ನು ಪ್ರವೇಶಿಸಿತು. ಜನವರಿ 6 ರಂದು ಹರಿಯಾಣವನ್ನು ಮರುಪ್ರವೇಶಿಸುವ ಮುನ್ನ ಮೂರು ದಿನಗಳಲ್ಲಿ ಭಾರತ್​ ಜೋಡೋ ಪಾದಯಾತ್ರೆ ಉತ್ತರ ಪ್ರದೇಶವನ್ನು ದಾಟುವ ನಿರೀಕ್ಷೆಯಿದೆ. ಯಾತ್ರೆಯು ದೆಹಲಿಯಿಂದ ಲೋನಿ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಿತು.ನನ್ನ ಅಣ್ಣ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಅಂದ ಪ್ರಿಯಾಂಕ ಗಾಂಧಿ


ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಶಿವಸೇನೆ (ಉದ್ಧವ್) ನಾಯಕಿ ಪ್ರಿಯಾಂಕಾ ಚತುರ್ವೇದಿಯಂತರ ವಿರೋಧ ಪಕ್ಷದ ನಾಯಕರು ಮಂಗಳವಾರ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯುಪಿ ಲೆಗ್ ಆಫ್ ದಿ ಯಾತ್ರೆಯ ಉದ್ದಕ್ಕೂ ಪ್ರಿಯಾಂಕಾ ಗಾಂಧಿ ರಾಹುಲ್ ಜೊತೆಯಲ್ಲಿದ್ದರು. ಅಲ್ಲದೇ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನ್ನ ಅಣ್ಣ, ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಬಲವಂತದ ಆಡಳಿತವನ್ನು ಪ್ರಯೋಗಿಸಲಾಗುತ್ತಿದೆ. ಸರ್ಕಾರವು ಅವನ ಹೆಸರನ್ನು ಹಾಳುಮಾಡಲು ಸಾವಿರಾರು ಕೋಟಿ ಖರ್ಚು ಮಾಡಿದೆ ಮತ್ತು ಅವನ ಹಿಂದೆ ಏಜೆನ್ಸಿಗಳನ್ನುಬಿಟ್ಟಿದೆ. ಆದರೆ ಅವನು ಪಾದಯಾತ್ರೆಯನ್ನು ನಿಲ್ಲಿಸಲಿಲ್ಲ. ಯಾತ್ರೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಭಾರತೀಯನ ಬಗ್ಗೆ ನನಗೆ ಹೆಮ್ಮೆ ಇದೆ ಎಂದು  ಹೇಳಿದ್ದಾರೆ.


ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾದ ಬಾರತ್ ಜೋಡೋ ಯಾತ್ರೆ


ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆಯು ಇಲ್ಲಿಯವರೆಗೂ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣದ ಕೆಲವು ಭಾಗಗಳನ್ನುಪೂರ್ಣಗೊಳಿಸಿದೆ.  ಕೊನೆಯದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.


Rahul Gandhi, Asked About Life Partner, Says "Would Prefer Woman Who
ರಾಹುಲ್ ಗಾಂಧಿ


ನನ್ನ ಟೀ ಶರ್ಟ್​ ಬಗ್ಗೆ ಯಾಕೆ ಇಷ್ಟೊಂದು ಚರ್ಚೆ?


ಇತ್ತೀಚೆಗಷ್ಟೇ ಭಾರತ್​ ಜೋಡೋ ಯಾತ್ರೆಯಲ್ಲಿ ಸ್ವೆಟರ್ ಧರಿಸಿದೇ ಚಳಿಯ ಮಧ್ಯೆ ಟೀ ಶರ್ಟ್​​ನಲ್ಲಿಯೇ ಯಾತ್ರೆಯಲ್ಲಿ ರಾಹುಲ್​ ಗಾಂಧಿ ನಡೆದಿದ್ದರು. ಈ ಬಗ್ಗೆ ರಾಜಕೀಯದಲ್ಲಿ ಭಾರೀ ಚರ್ಚೆಯಾಗಿತ್ತು. ಈ ಕುರಿತಂತೆ ಸುದ್ದಿಗೋಷ್ಠಿವೊಂದರಲ್ಲಿ ಪ್ರತಿಕ್ರಿಯಿಸಿದ ರಾಹುಲ್, ನನ್ನ ಟೀ ಶರ್ಟ್​ ಬಗ್ಗೆ ಯಾಕೆ ಇಷ್ಟೊಂದು ಚರ್ಚೆ? ನನಗೆ ಚಳಿ ಎಂದರೆ ಭಯವಿಲ್ಲ, ಹೀಗಾಗಿ ಸ್ವೆಟರ್ ಧರಿಸುವುದಿಲ್ಲ. ನನಗೆ ಚಳಿ ಅನಿಸಿದಾಗ ಸ್ವೆಟರ್ ಧರಿಸುತ್ತೇನೆ. ಭಾರತ್ ಜೋಡೋ ಯಾತ್ರೆ ಮುಗಿದ ನಂತರ ವಿಡಿಯೋ ಮಾಡಿ ಅದರಲ್ಲಿ ಸ್ವೆಟರ್ ಧರಿಸದಿದ್ದರ ಬಗ್ಗೆ ಗುಟ್ಟು ಹೇಳುತ್ತೇನೆ ಎಂದು ವ್ಯಂಗ್ಯವಾಡಿದ್ದರು.


ಇದನ್ನೂ ಓದಿ: Rahul Gandhi: ನನ್ನ ಟೀ ಶರ್ಟ್​ ಬಗ್ಗೆ ಚರ್ಚೆ ಯಾಕೆ?; ಯಾತ್ರೆ ನಂತ್ರ ಸ್ವೆಟರ್ ಧರಿಸದಿದ್ದರ ಗುಟ್ಟನ್ನು ವಿಡಿಯೋ ಮಾಡಿ ಹೇಳ್ತೀನಿ!  


ಟೀ ಶರ್ಟ್​ ವಿಚಾರವಾಗಿ ಕೇವಲ ಸೋಶಿಯಲ್ ಮೀಡಿಯಾ ಚರ್ಚೆಯಾಗುತ್ತಿಲ್ಲ. ಸ್ವತಃ ರಾಹುಲ್ ಗಾಂಧಿ ತಾಯಿ ಮತ್ತು ಮಾಜಿ ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರೇ ಚಳಿಗಾಲದಲ್ಲಿ ವಾರ್ಡ್ರೋಬ್​ನಲ್ಲಿರುವ ಸ್ವೆಟರ್​ನನ್ನು ಯಾಕೆ ಬಳಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದರ ಕೆಲವು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

Published by:Monika N
First published: