Rahul Gandhi: ಎಐಸಿಸಿ ಅಧಿಕಾರ ರಾಹುಲ್ 'ಕೈ' ಸೇರುವುದು ಇನ್ನು ಸುಲಭವಲ್ಲವಾ? ಹಿರಿಯ ನಾಯಕರಿಂದಲೇ ಅಪಸ್ವರ, ಸಚಿನ್ ಪೈಲಟ್ ಮೇಲೆ ಒಲವು

ಸೋನಿಯಾ ಗಾಂಧಿ ಅವರ ತೀವ್ರ ಅನಾರೋಗ್ಯದ ಕಾರಣದಿಂದ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿಗೆ ನೀಡಲಾಗಿತ್ತು. ಲೋಕಸಭಾ ಚುನಾವಣೆ ಸೋಲಿನ ಬಳಿಕ 2019ರಲ್ಲಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಬಾರದು ಎಂಬ ಮಾತು ಕಾಂಗ್ರೆಸ್‌ ವಲಯದಲ್ಲೇ ಕೇಳಿ ಬಂದಿದೆ.

ರಾಹುಲ್ ಗಾಂಧಿ ಸಂಗ್ರಹ ಚಿತ್ರ

ರಾಹುಲ್ ಗಾಂಧಿ ಸಂಗ್ರಹ ಚಿತ್ರ

  • Share this:
Election Results 2022: ಪಂಚ ರಾಜ್ಯಗಳ (5 States) ವಿಧಾನಸಭಾ ಚುನಾವಣಾ ಫಲಿತಾಂಶ (Assembly Election Result) ಹೊರ ಬಿದ್ದಿದೆ. ಉತ್ತರ ಪ್ರದೇಶ (Uttara Pradesh), ಉತ್ತರಾಖಂಡ್ (Uttarakhand), ಗೋವಾ (Goa), ಮಣಿಪುರ (Manipura) ಹಾಗೂ ಪಂಜಾಬ್ (Punjab) ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ (BJP) ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ (AAP) ಭರ್ಜರಿ ವಿಜಯ ಸಾಧಿಸಿದೆ. ಇನ್ನು ಕಾಂಗ್ರೆಸ್ (Congress) ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದೆ. ಉಳಿದ ನಾಲ್ಕು ರಾಜ್ಯಗಳಿಗಿಂತ ಪಂಜಾಬ್‌ನಲ್ಲಿ ಕಾಂಗ್ರೆಸ್ ಈಗಾಗಲೇ ಅಧಿಕಾರದಲ್ಲಿತ್ತು. ಆದರೂ ಒಂದು ರಾಜ್ಯವನ್ನೂ ಸಹ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರು ಸೋತಿದ್ದಾರೆ. ಉತ್ತರ ಪ್ರದೇಶದಲ್ಲೂ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ. ಖುದ್ದು ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ (Priyanka Gandhi) ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರೇ ಪ್ರಚಾರಕ್ಕೆ ಧುಮುಕಿದ್ದರು. ಆದರೂ ಮೋದಿ (Modi) ಹಾಗೂ ಯೋಗಿ (Yogi) ಅಲೆಯಲ್ಲಿ (Wave) ಕಾಂಗ್ರೆಸ್ ಕೊಚ್ಚಿ ಹೋಗಿದೆ. ಈ ಫಲಿತಾಂಶ ರಾಹುಲ್‌ ಗಾಂಧಿಯವರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ (AICC President) ಹಾದಿಗೆ ಕುತ್ತು ತರಲಿದೆಯಾ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

 ರಾಹುಲ್ ಗಾಂಧಿ ವಿರುದ್ಧ ಹಿರಿಯ ನಾಯಕರ ಬೇಸರ

ಈ ಹಿಂದೆ ರಾಹುಲ್‌ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದಾಗ ಕಾಂಗ್ರೆಸ್‌ನ ಹಿರಿಯ ನಾಯಕರೇ ಬೇಸರ ಹೊರಹಾಕಿದ್ದರು. ಚುನಾವಣೆಗಳಲ್ಲಿ ಸತತ ಸೋಲಿನ ಬಳಿಕವಂತೂ ರಾಹುಲ್ ನಾಯಕತ್ವದ ವಿರುದ್ಧ ಅಪಸ್ವರ ಕೇಳಿ ಬಂದಿತ್ತು. ಬಳಿಕ ರಾಹುಲ್ ಗಾಂಧಿ ಅಧಿಕಾರ ಬಿಟ್ಟುಕೊಟ್ಟು, ಸೋನಿಯಾ ಗಾಂಧಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಆಗಿದ್ದರು.

ಇದೀಗ ಮತ್ತೆ ಪಂಚರಾಜ್ಯಗಳ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರ ಬದಲಾವಣೆ ಕೂಗು ಕೇಳಿ ಬಂದಿದೆ. ಕಾಂಗ್ರೆಸ್‌ನ ಪುನರುಜ್ಜೀವನಕ್ಕಾಗಿ ಹೊಸ ನಾಯಕನ ಅವಶ್ಯಕತೆ ಇದೆ ಎಂಬುದು ಕಾಂಗ್ರೆಸ್‌ನ ಒಂದು ಬಣದ ವಾದವಾಗಿದೆ.

ಇದನ್ನೂ ಓದಿ: ಸೋತರೂ ಭಾರತೀಯರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ ಎಂದ Rahul Gandhi

 ಸಚಿನ್ ಪೈಲಟ್ ಮೇಲೆ ಕೈ ನಾಯಕರ ಒಲವು

ಪಂಜಾಬ್‌ನಲ್ಲಿ ಹೀನಾಯ ಸೋಲು ಕಾಣುವುದರೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ನ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಸ್ವತಂತ್ರವಾಗಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಮೂರು ರಾಜ್ಯಗಳ ಪೈಕಿ ಒಂದನ್ನು ಎಎಪಿ ಕೈಗೆ ಕಾಂಗ್ರೆಸ್‌ ನಾಯಕರು ಒಪ್ಪಿಸಿದ್ದಾಗಿದೆ.

ಈ ಕಾರಣದಿಂದ ರಾಹುಲ್ ಗಾಂಧಿ ಅವರ ಸ್ಥಾನಕ್ಕೆ ಮತ್ತೋರ್ವ ಯುವ ನಾಯಕ ಸಚಿನ್ ಪೈಲಟ್ ಅವರನ್ನು ತರಬೇಕು ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿದೆ.

ಕಾಂಗ್ರೆಸ್ ಮಾಜಿ ವಕ್ತಾರ ಸಂಜಯ್ ಝಾ ಟ್ವೀಟ್

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ನ ಮಾಜಿ ವಕ್ತಾರ ಸಂಜಯ್‌ ಝಾ, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಅಧ್ಯಕ್ಷರಾಗಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಲು ಸಚಿನ್‌ ಪೈಲಟ್‌ಗೆ ಅವಕಾಶ ನೀಡುವ ಸಮಯ ಇದು. ಅವರು ಶ್ರಮ ಜೀವಿ, 24x7 ಕೆಲಸ ಮಾಡುವ ನಾಯಕ, ಗೆಲುವಿನ ಹಸಿವಿದೆ ಹಾಗೂ ಅತ್ಯಂತ ಉತ್ತಮ ಸಂವಹನಕಾರ. ಅವರಿಗೆ ಅಧಿಕಾರ ನೀಡಿದರೆ ಕಾಂಗ್ರೆಸ್ ಗೆಲುವು ಸುಲಭ ಎಂದು ಹೇಳಿದ್ದಾರೆ.



ಇದನ್ನೂ ಓದಿ: Evening Digest: ಪಂಚರಾಜ್ಯಗಳ ಚುನಾವಣೆ ಫಲಿತಾಂಶ, ಗೆದ್ದು ಬೀಗಿದ ಯೋಗಿ, 'ಕೈ' ಸುಟ್ಟುಕೊಂಡ ಕಾಂಗ್ರೆಸ್

ಲೋಕಸಭಾ ಚುನಾವಣೆ ಸೋಲಿನ ಬಳಿಕ ರಾಹುಲ್ ರಾಜೀನಾಮೆ

ಸೋನಿಯಾ ಗಾಂಧಿ ಅವರ ತೀವ್ರ ಅನಾರೋಗ್ಯದ ಕಾರಣದಿಂದ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿಗೆ ನೀಡಲಾಗಿತ್ತು. ಲೋಕಸಭಾ ಚುನಾವಣೆ ಸೋಲಿನ ಬಳಿಕ 2019ರಲ್ಲಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಬಾರದು ಎಂಬ ಮಾತು ಕಾಂಗ್ರೆಸ್‌ ವಲಯದಲ್ಲೇ ಕೇಳಿ ಬಂದಿದೆ.
Published by:Annappa Achari
First published: