• Home
  • »
  • News
  • »
  • national-international
  • »
  • Rahul Gandhi: ‘ನಾನು ವರುಣ್ ಗಾಂಧಿಯನ್ನು ಪ್ರೀತಿಯಿಂದ ತಬ್ಬಿಕೊಳ್ಳಬಲ್ಲೆ, ಆದರೆ..’ ಸೋದರನ ಬಗ್ಗೆ ರಾಹುಲ್ ಹೇಳಿದ್ದೇನು?

Rahul Gandhi: ‘ನಾನು ವರುಣ್ ಗಾಂಧಿಯನ್ನು ಪ್ರೀತಿಯಿಂದ ತಬ್ಬಿಕೊಳ್ಳಬಲ್ಲೆ, ಆದರೆ..’ ಸೋದರನ ಬಗ್ಗೆ ರಾಹುಲ್ ಹೇಳಿದ್ದೇನು?

ರಾಹುಲ್ ಗಾಂಧಿ

ರಾಹುಲ್ ಗಾಂಧಿ

"ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತವಿದೆ. ಒಂದು ಚಿಂತನಾ ವ್ಯವಸ್ಥೆ ಇದೆ. ಆದರೆ ವರುಣ್ ಗಾಂಧಿ ಅವರು ಒಮ್ಮೊಮ್ಮೆ ಈಗಲೂ ಬಿಜೆಪಿಯ ಸಿದ್ಧಾಂತವನ್ನು ಪಾಲಿಸುತ್ತಿರಬಹುದು. ಅವರು ಆ ಸಿದ್ಧಾಂತವನ್ನು ಆಂತರ್ಯದಿಂದ ಒಪ್ಪಿರಬಹುದು. ಆದರೆ ನನಗೆ ಅದು ಸಾಧ್ಯವಿಲ್ಲ. ನಮ್ಮ ಎದುರಾಳಿ ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಸ್ಥೆ ಆರೆಸ್ಸೆಸ್ ಕಚೇರಿಗೆ ಹೋಗುವ ಬದಲು ತಲೆ ಕೊಡುವುದು ಉತ್ತಮ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • New Delhi, India
  • Share this:

ಹೊಸದಿಲ್ಲಿ: ಎಐಸಿಸಿ (AICC)ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸದ್ಯ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಬ್ಯುಸಿಯಾಗಿದ್ದಾರೆ. ದೇಶದ ಉದ್ದಗಲಕ್ಕೂ ಸಾವಿರಾರು ಕಿಲೋ ಮೀಟರ್ ದೂರವನ್ನು ಕೇವಲ ಕಾಲ್ನಡಿಗೆಯ ಮೂಲಕವೇ ಸಂಚರಿಸಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷವನ್ನು (Congress) ದೇಶಾದ್ಯಂತ ಮತ್ತೆ ಬಲಿಷ್ಠಗೊಳಿಸಲು ಪಣ ತೊಟ್ಟಿದ್ದಾರೆ. ಭಾರತ್ ಜೋಡೋ ಪಾದಯಾತ್ರೆಯ (Padayatra) ಉದ್ದಗಲಕ್ಕೂ ರಾಹುಲ್ ಗಾಂಧಿ ಅವರಿಗೆ ಜನರು ತೋರಿರುವ ಪ್ರೀತಿಯಿಂದ ಕಾಂಗ್ರೆಸ್ ನಾಯಕರಲ್ಲಿ ಹೊಸ ಚೈತನ್ಯ ಸೃಷ್ಟಿಯಾಗಿದ್ದು, ಹಲವೆಡೆ ಪುಟಿದೇಳುವ ವಿಶ್ವಾಸವನ್ನು ಆಯಾ ರಾಜ್ಯಗಳ ಕೈ ನಾಯಕರು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ರಾಹುಲ್ ಗಾಂಧಿ ಅವರು ವರುಣ್ ಗಾಂಧಿಯ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.


ತಮ್ಮ ಸೋದರ ಸಂಬಂಧಿ ವರುಣ್ ಗಾಂಧಿಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದ್ದು, ಅಪರೂಪಕ್ಕೆ ರಾಹುಲ್ ಅವರು ವರುಣ್ ಗಾಂಧಿಯ ಕುರಿತು ನೀಡಿರುವ ಹೇಳಿಕೆ ಸಾಕಷ್ಟು ಗಮನ ಸೆಳೆದಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ನನ್ನ ಕಿರಿಯ ಸಹೋದರ, ಬಿಜೆಪಿ ನಾಯಕ ವರುಣ್ ಗಾಂಧಿ ಅವರನ್ನು ಭೇಟಿ ಮಾಡಲು ಅಥವಾ ಅವರಿಗೆ ಅಪ್ಪುಗೆ ನೀಡಲು ನನಗೆ ಯಾವುದೇ ಅಭ್ಯಂತರವಿಲ್ಲ. ಆದರೆ ವರುಣ್ ಗಾಂಧಿ ಪಾಲಿಸುತ್ತಿರುವ ಸಿದ್ಧಾಂತವನ್ನು ನಾನು ಎಂದೆಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.


Rahul Gandhi: ಮದ್ಯದ ಗ್ಲಾಸ್ ಜೊತೆಗೆ ರಾಹುಲ್ ಗಾಂಧಿ ಫೋಟೋ ವೈರಲ್; ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ


ನೀವು ನನ್ನ ಶಿರಚ್ಛೇದ ಮಾಡಬೇಕಾಗುತ್ತದೆ


ವರುಣ್ ಗಾಂಧಿ ಕಾಂಗ್ರೆಸ್‌ಗೆ ಬರುವ ಕುರಿತು ಕೂಡ ಪರೋಕ್ಷವಾಗಿ ಮಾತನಾಡಿರುವ ರಾಹುಲ್ ಗಾಂಧಿ, ‘ ವರುಣ್ ಗಾಂಧಿ ಸದ್ಯ ಬಿಜೆಪಿ ಪಕ್ಷದಲ್ಲಿ ಇದ್ದಾರೆ. ಆದರೆ ಅವರು ಇಲ್ಲಿಗೆ ಬಂದರೆ ಅದರಿಂದ ಅವರಿಗೆ ತೊಂದರೆ ಉಂಟಾಗಬಹುದು. ವರುಣ್ ಗಾಂಧಿ ಅವರ ಸಿದ್ಧಾಂತದ ಜೊತೆಗೆ ನನ್ನ ಸಿದ್ಧಾಂತ ಹೋಲಿಕೆ ಆಗುವುದಿಲ್ಲ. ನಾನು ಎಂದಿಗೂ ಕೂಡ ಆರ್‌ಎಸ್‌ಎಸ್‌ ಕಚೇರಿಗೆ ಹೋಗಲು ಸಾಧ್ಯವಿಲ್ಲ. ಆರೆಸ್ಸೆಸ್‌ ಕಚೇರಿಗೆ ಹೋಗಲೇಬೇಕಿದ್ದರೆ ಅದಕ್ಕೂ ಮುನ್ನ ನೀವು ನನ್ನ ಶಿರಚ್ಛೇದ ಮಾಡಬೇಕಾಗುತ್ತದೆ ಎಂದು ರಾಹುಲ್ ಅಭಿಪ್ರಾಯ ಪಟ್ಟಿದ್ದಾರೆ.


ಮುಂದುವರಿದು ಮಾತನಾಡಿರುವ ರಾಹುಲ್ ಗಾಂಧಿ, ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತವಿದೆ. ಒಂದು ಚಿಂತನಾ ವ್ಯವಸ್ಥೆ ಇದೆ. ಆದರೆ ವರುಣ್ ಗಾಂಧಿ ಅವರು ಒಮ್ಮೊಮ್ಮೆ ಈಗಲೂ ಬಿಜೆಪಿಯ ಸಿದ್ಧಾಂತವನ್ನು ಪಾಲಿಸುತ್ತಿರಬಹುದು. ಅವರು ಆ ಸಿದ್ಧಾಂತವನ್ನು ಆಂತರ್ಯದಿಂದ ಒಪ್ಪಿರಬಹುದು. ಆದರೆ ನನಗೆ ಅದು ಸಾಧ್ಯವಿಲ್ಲ. ನಮ್ಮ ಎದುರಾಳಿ ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಸ್ಥೆ ಆರೆಸ್ಸೆಸ್ ಕಚೇರಿಗೆ ಹೋಗುವ ಬದಲು ತಲೆ ಕೊಡುವುದು ಉತ್ತಮ ಎಂದು ರಾಹುಲ್ ಗಾಂಧಿ ವಾಗ್ದಾಳಿ ಹೇಳಿದ್ದಾರೆ.


Freebies: ಸಂಸದರ ಪಿಂಚಣಿ, ಇತರ ಸೌಲಭ್ಯ ರದ್ದುಗೊಳಿಸಿ: ಮತ್ತೆ ಜನಸಾಮಾನ್ಯರ ಪರ ಧ್ವನಿ ಎತ್ತಿದ ವರುಣ್ ಗಾಂಧಿ


ಆರೆಸ್ಸೆಸ್ ಬಗ್ಗೆ ಮನವರಿಕೆ ಮಾಡಲು ಯತ್ನ


ಇನ್ನು, ಅನೇಕ ವರ್ಷಗಳ ಹಿಂದೆ ವರುಣ್ ಗಾಂಧಿ ಅವರು ನನಗೆ ಆರೆಸ್ಸೆಸ್‌ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಮನವರಿಕೆ ಮಾಡಲು ಪ್ರಯತ್ನ ಮಾಡಿದ್ದರು ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಆಗ ನಾನು ವರುಣ್ ಗಾಂಧಿಗೆ, ನಿಮ್ಮ ಕುಟುಂಬ ಯಾವುದರ ಪರ ನಿಂತಿದೆ ಎಂಬುವುದನ್ನು ನೀವು ಓದಿದ್ದರೆ ಅಥವಾ ನೋಡಿದ್ದರೆ ಖಂಡಿತವಾಗಿಯೂ ಆರೆಸ್ಸೆಸ್‌ ಅನ್ನು ನೀವು ಒಪ್ಪುತ್ತಿರಲಿಲ್ಲ ಎಂದು ಹೇಳಿದ್ದೆ’ ಎಂದು ತಿಳಿಸಿದ್ದಾರೆ.


ಬಿಜೆಪಿಯಿಂದ ಅಂತರ ಕಾಯ್ದುಕೊಂಡ ವರುಣ್


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗಿಂತ 10 ವರ್ಷ ಚಿಕ್ಕವರಾಗಿರುವ ವರುಣ್ ಗಾಂಧಿ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಮುಂಚೂಣಿಯಲ್ಲಿ ನಿಂತು ವಾಗ್ದಾಳಿ ನಡೆಸುತ್ತಿದ್ದರು. ಸದ್ಯ ಬಿಜೆಪಿಯ ಕೆಲ ವರ್ತನೆಗಳ ವಿರುದ್ಧವೂ ಅಸಮಾಧಾನ ಹೊಂದಿರುವ ವರುಣ್ ಗಾಂಧಿ ಸ್ವಪಕ್ಷದ ವಿರುದ್ಧವೂ ಹಲವು ಕಡೆಗಳಲ್ಲಿ ಹರಿಹಾಯ್ದಿದ್ದಾರೆ. ಇನ್ನೊಂದೆಡೆ ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ವರುಣ್ ಗಾಂಧಿ ಬಿಜೆಪಿ ತೊರೆಯುವ ಸಾಧ್ಯತೆ ಇದೆ ಎಂದೂ ಹೇಳಲಾಗ್ತಿದೆ.

Published by:Avinash K
First published: