ಮೋದಿ ಉಪನಾಮೆಗಳೆಲ್ಲಾ ಕಳ್ಳರು ಎಂದಿದ್ದ ರಾಹುಲ್ ಗಾಂಧಿ; ಮಾನಹಾನಿ ಪ್ರಕರಣ ಸಂಬಂಧ ಇಂದು ನ್ಯಾಯಾಲಯಕ್ಕೆ ಹಾಜರಿ

ಏಪ್ರಿಲ್ 13ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ..ಈ ಎಲ್ಲಾ ಕಳ್ಳರೂ ಹೇಗೆ ಮೋದಿ ಎಂಬ ಉಪನಾಮೆಯನ್ನು ಸಾಮಾನ್ಯವಾಗಿ ಹೊಂದಿದ್ದಾರೆ? ಎಂದು ಅಪಹಾಸ್ಯ ಮಾಡಿದ್ದರು.

MAshok Kumar | news18-kannada
Updated:October 10, 2019, 12:00 PM IST
ಮೋದಿ ಉಪನಾಮೆಗಳೆಲ್ಲಾ ಕಳ್ಳರು ಎಂದಿದ್ದ ರಾಹುಲ್ ಗಾಂಧಿ; ಮಾನಹಾನಿ ಪ್ರಕರಣ ಸಂಬಂಧ ಇಂದು ನ್ಯಾಯಾಲಯಕ್ಕೆ ಹಾಜರಿ
ರಾಹುಲ್ ಗಾಂಧಿ.
  • Share this:
ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಇಂದು ಸೂರತ್ ಮ್ಯಾಜಿಸ್ಟರ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಿನ ಪ್ರಹಾರ ನಡೆಸಿದ್ದ ರಾಹುಲ್ ಗಾಂಧಿ “ದೇಶದಲ್ಲಿ ಎಲ್ಲಾ ಕಳ್ಳರೂ ಮೋದಿ ಎಂಬ ಉಪನಾಮವನ್ನೇ ಹೊಂದಿದ್ದಾರೆ” ಎಂದು ಅಪಹಾಸ್ಯ ಮಾಡಿದ್ದರು. ಭಾರತದ ಸಾರ್ವಜನಿಕ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾದ ನೀರವ್ ಮೋದಿ, ಲಲಿತ್ ಮೋದಿ ಅವರನ್ನು ಉಲ್ಲೇಖಿಸಿ ರಾಹುಲ್ ಈ ಹೇಳಿಕೆ ನೀಡಿದ್ದರು.

ಏಪ್ರಿಲ್ 13ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ..ಈ ಎಲ್ಲಾ ಕಳ್ಳರೂ ಹೇಗೆ ಮೋದಿ ಎಂಬ ಉಪನಾಮೆಯನ್ನು ಸಾಮಾನ್ಯವಾಗಿ ಹೊಂದಿದ್ದಾರೆ? ಎಂದು ಅಪಹಾಸ್ಯ ಮಾಡಿದ್ದರು.

ಆದರೆ, ಈ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದ ಸೂರತ್​ನ ಸ್ಥಳೀಯ ಬಿಜೆಪಿ ಶಾಸಕ ಪೂರ್ಣೇಶ್ ಎಲ್ಲ ಕಳ್ಳರೂ ಮೋದಿ ಎಂಬ ಉಪನಾಮೆ ಹೊಂದಿದ್ದಾರೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಇಡೀ ಮೋದಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಈ ಸಂಬಂಧ ಮಾನಹಾನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ದೂರು ದಾಖಲಾಗಿತ್ತು. ಅಲ್ಲದೆ, ಈ ದೂರನ್ನು ಒಪ್ಪಿಕೊಂಡಿದ್ದ ಮ್ಯಾಜಿಸ್ಟ್ರೇಟ್ ಬಿ.ಹೆಚ್. ಕಪಾಡಿಯಾ ಕಳೆದ ಮೇ ತಿಂಗಳಲ್ಲೇ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು.

ಕಳೆದ ಜುಲೈ ತಿಂಗಳಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ವಿನಾಯಿತಿ ಕೋರಿ ರಾಹುಲ್ ಪರ ವಕೀಲರು ಮನವಿ ಸಲ್ಲಿಸಿದ್ದರು. ಈ ಮನವಿಗೆ ಸಮ್ಮತಿ ಸೂಚಿಸಿದ್ದ ನ್ಯಾಯಾಲಯ ರಾಹುಲ್ ಗಾಂಧಿ ಅವರ ವ್ಯಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡಿತ್ತು. ಆದರೆ, ಅಕ್ಟೋಬರ್ 10ಕ್ಕೆ ಮುಂದಿನ ವಿಚಾರಣೆಯ ಮುಂದೂಡಿ ಆ ದಿನದ ವಿಚಾರಣೆಗೆ ರಾಹುಲ್ ಖುದ್ದು ಹಾಜರಾಗಬೇಕು ಎಂದು ಆದೇಶಿಸಿತ್ತು.

ಈ ಪ್ರಕರಣದ ಸಂಬಂಧ ವಿಚಾರಣೆಗೆ ರಾಹುಲ್ ಗಾಂಧಿ ಇಂದು ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಆದರೆ, ಇದರ ಹೊರತಾಗಿಯೂ ಅಹಮದಾಬಾದ್ ನ್ಯಾಯಾಲಯದಲ್ಲಿ ಅವರ ವಿರುದ್ಧ ಮತ್ತೆರಡು ಮಾನನಷ್ಟ ಮೊಕದ್ದಮೆ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಈ ಪೈಕಿ ಒಂದು ಕೇಂದ್ರ ಗೃಹ ಸಚಿವ ಸಮಿತ್ ಶಾ ಅವರನ್ನು “ಕೊಲೆ ಆರೋಪಿ” ಎಂದು ದೂಷಿಸಿದ್ದ ಪ್ರಕರಣವಾದರೆ, ಮತ್ತೊಂದು ಅಮಿತ್ ಶಾ ಸಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ 2016ರಲ್ಲಿ ನೋಟು ಅಮಾನ್ಯೀಕರಣವಾದಾಗ ಸುಮಾರು 750 ಕೋಟಿ ಹಳೆ ನೊಟುಗಳನ್ನು ಬದಲಿಸಿ “ಹಗರಣ” ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.

ಈ ಎರಡೂ ಪ್ರಕರಣದ ವಿಚಾರಣೆ ಅಕ್ಟೋಬರ್ 11 ರಂದು ನಡೆಯಲಿದ್ದು, ರಾಹುಲ್ ವ್ಯಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ. ಇತ್ತೀಚೆಗೆ ವ್ಯಯಕ್ತಿಕ ಕಾರಣಕ್ಕಾಗಿ ಭೂತಾನ್​ಗೆ ತೆರಳಿದ್ದ ರಾಹುಲ್ ಗಾಂಧಿ ಭಾರತಕ್ಕೆ ಮರಳಿದ್ದು, ಅಕ್ಟೋಬರ್ 13 ಮತ್ತು 15ರಂದು ಮಹಾರಾಷ್ಟ್ರ ಮತ್ತು 14ರಂದು ಹರಿಯಾಣ ವಿಧಾನಸಭಾ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.ಇದನ್ನೂ ಓದಿ : ಜಾಗತಿಕ ಮಂದ ಆರ್ಥಿಕತೆ ಭಾರತದಂತಹ ಉದಯೋನ್ಮುಖ ದೇಶಗಳನ್ನು ಮತ್ತಷ್ಟು ಕಾಡಲಿದೆ; ಎಚ್ಚರಿಕೆ ನೀಡಿದ ಐಎಮ್ಎಫ್

First published: October 10, 2019, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading