• Home
  • »
  • News
  • »
  • national-international
  • »
  • Rahul Gandhi: ಶಾಲಾ ಮಕ್ಕಳೊಂದಿಗೆ ರಾಹುಲ್ ಗಾಂಧಿ ಓಟ! ಭಾರತ್ ಜೋಡೋ ಯಾತ್ರೆಯಲ್ಲಿ ರೆಡಿ, ಸ್ಟಡಿ, ಗೋ!

Rahul Gandhi: ಶಾಲಾ ಮಕ್ಕಳೊಂದಿಗೆ ರಾಹುಲ್ ಗಾಂಧಿ ಓಟ! ಭಾರತ್ ಜೋಡೋ ಯಾತ್ರೆಯಲ್ಲಿ ರೆಡಿ, ಸ್ಟಡಿ, ಗೋ!

ಮಕ್ಕಳೊಂದಿಗೆ ರಾಹುಲ್ ಗಾಂಧಿ

ಮಕ್ಕಳೊಂದಿಗೆ ರಾಹುಲ್ ಗಾಂಧಿ

ರಾಹುಲ್ ಗಾಂಧಿ 'ಭಾರತ್ ಜೋಡೋ ಯಾತ್ರೆ' ವೇಳೆ ಅಪಾರ ಸಂಖ್ಯೆಯ ಶಾಲಾ ಮಕ್ಕಳು ಆಗಮಿಸಿದ್ದರು. ಈ ವೇಳೆ ರಾಹುಲ್ ಗಾಂಧಿ ಶಾಲಾ ಮಕ್ಕಳೊಂದಿಗೆ ಓಡಲು ಪ್ರಾರಂಭಿಸಿದರು, ಅಲ್ಲದೇ ಇತರರನ್ನು ಓಡುವಂತೆ ಹುರಿದುಂಬಿದ್ರು.

  • News18 Kannada
  • Last Updated :
  • Telangana, India
  • Share this:

ಜಡ್ಚೆರ್ಲಾ, ತೆಲಂಗಾಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ ತೆಲಂಗಾಣದಲ್ಲಿ (Bharat Jodo Yatra in Telangana) ಮುಂದುವರೆದಿದೆ. ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆಯ ಸಮಯದಲ್ಲಿ ಕೆಲವು ರೋಚಕ ಕ್ಷಣಗಳನ್ನು ಕಳೆದರು. ರಾಹುಲ್ ಗಾಂಧಿ ಯಾತ್ರೆ ವೇಳೆ ಅಪಾರ ಸಂಖ್ಯೆಯ ಶಾಲಾ ಮಕ್ಕಳು (School Students) ಆಗಮಿಸಿದ್ದರು. ಈ ವೇಳೆ ರಾಹುಲ್ ಗಾಂಧಿ ಶಾಲಾ ಮಕ್ಕಳೊಂದಿಗೆ ಓಡಲು (Running) ಪ್ರಾರಂಭಿಸಿದರು, ಅಲ್ಲದೇ ಇತರರನ್ನು ಓಡುವಂತೆ ಹುರಿದುಂಬಿದ್ರು. ಈ ವೇಳೆ ರಾಹುಲ್ ಗಾಂಧಿ ಅವರಷ್ಟೇ ಅಲ್ಲದೇ, ಅವರ ಭದ್ರತಾ ಸಿಬ್ಬಂದಿ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ (Revanth Reddy) ಮತ್ತು ಇತರರು, ಸ್ಥಳೀಯ ಕಾಂಗ್ರೆಸ್ ನಾಯಕರು, ಸ್ಥಳೀಯ ಪೊಲೀಸರು ಓಟದಲ್ಲಿ ಭಾಗಿಯಾದ್ರು.


ಶಾಲಾ ಮಕ್ಕಳೊಂದಿಗೆ ಓಡಿದ ರಾಹುಲ್ ಗಾಂಧಿ


ತೆಲಂಗಾಣದಲ್ಲಿ ಇಂದು ಐದನೇ ದಿನದ ಭಾರತ್ ಜೋಡೋ ಯಾತ್ರೆ ನಡೆಯಿತು. ಪಾದಯಾತ್ರೆಯಲ್ಲಿ ಭಾಗಿಯಾದ ರಾಹುಲ್ ಗಾಂಧಿ, ಶಾಲಾ ಮಕ್ಕಳೊಂದಿಗೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಚಿಕ್ಕ ಮಕ್ಕಳ ರೇಸ್ ಓಡೋಣವೇ? ಎಂಬ ಸವಾಲನ್ನು ಸ್ವೀಕರಿಸಿ ಅವರ ಜೊತೆಗೆ ಓಡಿದ್ದಾರೆ. ಗುಂಪಿನ ಮಧ್ಯದಿಂದ ಒಬ್ಬರು "ರೇಸ್ ಲಗಾವೋಗೇ?" ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ರಾಹುಲ್ ಓಟದಿಂದಲೇ ಉತ್ತರಿಸಿದ್ದಾರೆ. ರಾಹುಲ್ ಗಾಂಧಿ ಓಟದ ವಿಡಿಯೋ ಇದೀಗ ವೈರಲ್ ಆಗಿದೆ.ತೆಲಂಗಾಣದಲ್ಲಿ 5ನೇ ದಿನದ ಭಾರತ್ ಜೋಡೋ ಪಾದಯಾತ್ರೆ


ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸೇರಿಕೊಂಡು, ರಾಹುಲ್ ಗಾಂಧಿ ಇಂದು ಬೆಳಿಗ್ಗೆ ಇಲ್ಲಿಂದ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಿದರು. ಇನ್ನು 22 ಕಿಲೋಮೀಟರ್ ದೂರವನ್ನು ಕ್ರಮಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇಂದಿಗೆ ತೆಲಂಗಾಣದಲ್ಲಿ 5 ದಿನಗಳ ಭಾರತ್ ಜೋಡೋ ಯಾತ್ರೆ ಮುಗಿದಿದೆ.


ಇದನ್ನೂ ಓದಿ: Mann Ki Baat: ಕನ್ನಡಿಗನಿಗೆ ನಮೋ ಎಂದ ಪ್ರಧಾನಿ, ಬೆಂಗಳೂರಿನ ಪರಿಸರ ಪ್ರೇಮಿ ಬಗ್ಗೆ ಮನ್ ಕಿ ಬಾತ್‌ನಲ್ಲಿ ಮೆಚ್ಚುಗೆ!


ಯಾತ್ರೆಯಲ್ಲಿ ಗಮನ ಸೆಳೆದ ರಾಹುಲ್ ಗಾಂಧಿ


ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಫುಲ್ ಗಮನ ಸೆಳೆದಿದ್ದಾರೆ. ಸ್ಪ್ರಿಂಟಿಂಗ್, ಪುಷ್-ಅಪ್ಸ್ ಮಾಡುವುದು, ಟ್ಯಾಂಕ್ ಮೇಲೆ ಹತ್ತುವುದು, ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಪ್ರತಿನಿತ್ಯ 25 ಕಿಮೀ ನಡೆಯುವುದು ಯಾತ್ರೆಯ ನಡುವೆ ಅವರ ಫಿಟ್‌ನೆಸ್‌ನಲ್ಲಿ ಗಮನ ಸೆಳೆದಿದೆ. ಶನಿವಾರ, ರಾಹುಲ್ ಗಾಂಧಿ ತಮ್ಮ ನೃತ್ಯ ಕೌಶಲ್ಯದಿಂದ ಎಲ್ಲರನ್ನು ಅಚ್ಚರಿಗೊಳಿಸಿದರು. ರಾಜ್ಯದ ಬುಡಕಟ್ಟು ಸಮುದಾಯಗಳ ಮಹಿಳೆಯರೊಂದಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು.


ಸೆಪ್ಟೆಂಬರ್ 7ರಿಂದ ಆರಂಭವಾಗಿರುವ ಯಾತ್ರೆ


ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಕಳೆದ ವಾರ ತೆಲಂಗಾಣದಲ್ಲಿ ಯಾತ್ರೆ ಪ್ರಾರಂಭಿಸುವ ಮೊದಲು ರಾಹುಲ್ ಗಾಂಧಿ ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಮ್ಯಾರಥಾನ್ ನಡಿಗೆಯನ್ನು ಪೂರ್ಣಗೊಳಿಸಿದ್ದರು.


ನವೆಂಬರ್‌ 7ರಂದು ಮಹಾರಾಷ್ಟ್ರಕ್ಕೆ ವಿಸಿಟ್


ಭಾರತ್ ಜೋಡೆ ಯಾತ್ರೆಯು ನವೆಂಬರ್ 7 ರಂದು ಮಹಾರಾಷ್ಟ್ರವನ್ನು ಪ್ರವೇಶಿಸಲಿದೆ. ಅದಕ್ಕೂ ಮೊದಲು ತೆಲಂಗಾಣದಲ್ಲಿ ಒಟ್ಟು 375 ಕಿ.ಮೀ ದೂರವನ್ನು ವ್ಯಾಪಿಸಿರುವ ತೆಲಂಗಾಣದ 19 ಅಸೆಂಬ್ಲಿ ಮತ್ತು 7 ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿದೆ. ಯಾತ್ರೆಯು ನವೆಂಬರ್ 4 ರಂದು ಒಂದು ದಿನದ ವಿರಾಮವನ್ನು ತೆಗೆದುಕೊಳ್ಳುತ್ತದೆ ಅಂತ ಹೇಳಲಾಗಿದೆ.


ಇದನ್ನೂ ಓದಿ: Narendra Modi: ಜಾಹೀರಾತಿನಲ್ಲಿ ನರೇಂದ್ರ ಮೋದಿಗೆ ಆಯ್ತಾ ಅಪಮಾನ? ಜೋರಾಯ್ತು #BoycottCadbury ಅಭಿಯಾನ!


ಒಟ್ಟು 5 ತಿಂಗಳ ಪಾದಯಾತ್ರೆ


ಪಾದಯಾತ್ರೆಯು 5 ತಿಂಗಳವರೆಗೆ ಇರುತ್ತದೆ ಮತ್ತು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ. ಇದಕ್ಕೂ ಮುನ್ನ 12 ರಾಜ್ಯಗಳನ್ನು ಹಾದುಹೋಗಲಿದೆ.

Published by:Annappa Achari
First published: