video: ಸಿಕ್ಸ್​ ಪ್ಯಾಕ್​ ಬಳಿಕ ವಿದ್ಯಾರ್ಥಿಗಳೊಂದಿಗೆ ಪುಶ್​ ಅಪ್, ಡ್ಯಾನ್ಸ್​​​ ; ರಾಹುಲ್​ ಗಾಂಧಿ ಫಿಟ್​ನೆಸ್​ಗೆ ನೆಟ್ಟಿಗರು ಫಿದಾ

ವಿದ್ಯಾರ್ಥಿಯೊಂದಿಗೆ ಸರಾಗವಾಗಿ ಪುಶ್​ ಅಪ್​ ಮಾಡಿ ಮತ್ತೊಮ್ಮೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ ಈ ಕಾಂಗ್ರೆಸ್​ ನಾಯಕ

ವಿದ್ಯಾರ್ಥಿಯೊಂದಿಗೆ ಸರಾಗವಾಗಿ ಪುಶ್​ ಅಪ್​ ಮಾಡಿ ಮತ್ತೊಮ್ಮೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ ಈ ಕಾಂಗ್ರೆಸ್​ ನಾಯಕ

ವಿದ್ಯಾರ್ಥಿಯೊಂದಿಗೆ ಸರಾಗವಾಗಿ ಪುಶ್​ ಅಪ್​ ಮಾಡಿ ಮತ್ತೊಮ್ಮೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ ಈ ಕಾಂಗ್ರೆಸ್​ ನಾಯಕ

 • Share this:
  ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನಿರಂತರ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇಲ್ಲಿನ ಸ್ಥಳೀಯ ಮೀನುಗಾರರು, ಸಾಮಾನ್ಯ ಜನರು, ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತ ಅವರ ಕಷ್ಟ ಆಲಿಸಲು ಮುಂದಾಗಿದ್ದಾರೆ​. ಈ ನಡುವೆ ರಾಹುಲ್​ ಗಾಂಧಿಯವರ ಫಿಟ್​ನೆಸ್​ ದೇಶದ ಯುವ ಜನತೆ ಸೇರಿದಂತೆ ಬಾಲಿವುಡ್​, ಸಾಮಾಜಿಕ ಜಾಲತಾಣಿಗರ ಮನಗೆದ್ದಿದೆ. ಕೇರಳದಲ್ಲಿ ಮೀನುಗಾರರೊಂದಿಗೆ ಅರಬ್ಬಿ ಸಮುದ್ರದಲ್ಲಿ ಈಜಿ ಹೊರ ಬಂದ ಅವರ ಒದ್ದೆ ಟೀ ಶರ್ಟ್​ನಲ್ಲಿ ಕಂಡು ಬಂದ ಸಿಕ್ಸ್​ ಪ್ಯಾಕ್​ ಎಲ್ಲರ ಗಮನ ಸೆಳೆದಿತ್ತು. ಈ ಹಿನ್ನಲೆ ಬಾಲಿವುಡ್​ ಸೆಲೆಬ್ರಿಟಿ ಸೇರಿದಂತೆ ಅನೇಕರು ಅವರಿಗೆ ತಮ್ಮ ಫಿಟ್​ನೆಸ್​ ಗುಟ್ಟು ಕೇಳಿ ಪ್ರಶ್ನಿಸಿದ್ದರು. ಇದಾದ ಬಳಿಕ ಈಗ ವಿದ್ಯಾರ್ಥಿಯೊಂದಿಗೆ ಸರಾಗವಾಗಿ ಪುಶ್​ ಅಪ್​ ಮಾಡಿ ಮತ್ತೊಮ್ಮೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ ಈ ಕಾಂಗ್ರೆಸ್​ ನಾಯಕ  ಇಂದು ತಮಿಳುನಾಡಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ತೊಡಗಿದ್ದಾರೆ ರಾಹುಲ್​ ಗಾಂಧಿ. ಈ ವೇಳೆ ಮುಲಾಗುಮುದಬ್ನ್​ನಲ್ಲಿ ವಿದ್ಯಾರ್ಥಿನಿಯೊಬ್ಬರು  ಅವರಿಗೆ 15 ಪುಶ್​ ಅಪ್​ ಚಾಲೆಂಜ್​ ನೀಡಿದ್ದಾರೆ. ಈ ಚಾಲೆಂಜ್​ ಒಪ್ಪಿಕೊಂಡ ರಾಹುಲ್​ ಕ್ಷಣಮಾತ್ರದಲ್ಲಿ 15 ಪುಶ್​ ಅಪ್ ಚಾಲೆಂಜ್​ ಅನ್ನು  ಸರಾಗವಾಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ಪುಶ್​ ಅಪ್​ ಮಾಡಲು ಕಷ್ಟಪಟ್ಟಿದ್ದು, ನೀವು ನನಗೆ ಮುಜುಗರ ಮಾಡಿದ್ದೀರಾ ಎಂದು ರಾಹುಲ್​ ಮೇಲೆ ಮುನಿಸು ತೋರಿದ್ದಾಳೆ.  ಇದೇ ವೇಳೆ ರಾಹುಲ್​ ಗಾಂಧಿ ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್​ ಮಾಡಿ ಕೂಡ ಗಮನಸೆಳೆದಿದ್ದಾರೆ. ಈ ವೇಳೆ ಎಐಸಿಸಿ ತಮಿಳುನಾಡು ಉಸ್ತುವಾರಿ ದಿನೇಶ್​ ಗುಂಡೂರಾವ್​ ಕೂಡ ಹೆಜ್ಜೆ ಹಾಕಿದ್ದಾರೆ.

  ರಾಜಕಾರಣಿಗಳೆಂದರೆ ಅವರಿಗೆ ಪಿಟ್​ನೆಸ್​ ಕಾಳಜಿ ಇಲ್ಲ ಎಂಬುವುದಕ್ಕೆ ಅಪವಾದದಂತೆ ರಾಹುಲ್​ ಗಾಂಧಿ ಕಂಡು ಬಂದಿದ್ದಾರೆ. ಫೆ. 24ರಂದು ಅವರು ಸಮುದ್ರದಲ್ಲಿ ಈಜಾಡಿದ ಫೋಟೋ, ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದ್ದವು. ಇದಾದ ಬಳಿಕ ಅವರ ಸಿಕ್ಸ್​ಪ್ಯಾಕ್​ ಎಲ್ಲರ ಗಮನಸೆಳೆದಿತ್ತು. ಬಾಕ್ಸಿಂಗ್​ ಚಾಪಿಂಯನ್​ ವಿಜೇಂದ್ರ ಸಿಂಗ್​​ ಇವರ ಸಿಕ್ಸ್​ಪ್ಯಾಕ್​ ಗೆ ಫಿದಾ ಆಗಿದ್ದರು.
  Published by:Seema R
  First published: