ಪ್ರತಿ ಬಡವರಿಗೂ ಕನಿಷ್ಠ ಆದಾಯದ ಖಾತ್ರಿ: ರಾಹುಲ್ ಗಾಂಧಿ ಬಂಪರ್ ಆಫರ್

ಕೋಟ್ಯಂತರ ಜನರು ಬಡತನದ ಬೇಗೆಯಲ್ಲಿರುವಾಗ ನವಭಾರತದ ನಿರ್ಮಾಣ ಹೇಗೆ ಸಾಧ್ಯ? ಮೊದಲು ದೇಶವು ಹಸಿವು ಮುಕ್ತವಾಗಬೇಕು ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

Vijayasarthy SN | news18
Updated:January 28, 2019, 11:37 PM IST
ಪ್ರತಿ ಬಡವರಿಗೂ ಕನಿಷ್ಠ ಆದಾಯದ ಖಾತ್ರಿ: ರಾಹುಲ್ ಗಾಂಧಿ ಬಂಪರ್ ಆಫರ್
ಕೋಟ್ಯಂತರ ಜನರು ಬಡತನದ ಬೇಗೆಯಲ್ಲಿರುವಾಗ ನವಭಾರತದ ನಿರ್ಮಾಣ ಹೇಗೆ ಸಾಧ್ಯ? ಮೊದಲು ದೇಶವು ಹಸಿವು ಮುಕ್ತವಾಗಬೇಕು ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
  • News18
  • Last Updated: January 28, 2019, 11:37 PM IST
  • Share this:
ನವದೆಹಲಿ(ಜ. 28): ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ರೈತರಿಗೆ ಸಾಲ ಮನ್ನಾ ಮಾಡುವ ಭರವಸೆ ಇತ್ತು ಯಶಸ್ಸು ಗಳಿಸಿದ್ದ ರಾಹುಲ್ ಗಾಂಧಿ ಇದೀಗ ಲೋಕಸಭೆ ಚುನಾವಣೆಗೆ ಅದಕ್ಕಿಂತಲೂ ದೊಡ್ಡದ ಭರವಸೆಯನ್ನು ಜನರಿಗೆ ನೀಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಪ್ರತಿಯೊಬ್ಬ ಬಡ ವ್ಯಕ್ತಿಗೂ ಕನಿಷ್ಠ ಆದಾಯದ ಖಾತ್ರಿಯನ್ನು ರಾಹುಲ್ ಗಾಂಧಿ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷ ದೊಡ್ಡ ರೀತಿಯಲ್ಲಿ ಚುನಾವಣಾ ರಣಕಹಳೆ ಊದಿದೆ.

ಇದನ್ನೂ ಓದಿ: 'ಕೊಟ್ಟುಬಿಡಿ ರಾಜೀನಾಮೆಯಾ... ಎಷ್ಟು ದಿನ ಅಂತ ಹೀಗೆ ಮಾತಾಡ್ತೀರಾ..!': ಹೆಚ್​ಡಿಕೆಗೆ ಆರ್. ಅಶೋಕ್ ಸಲಹೆ

ಛತ್ತೀಸ್​ಗಡದ ರಾಯಪುರದಲ್ಲಿ ರೈತರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ದೇಶದಲ್ಲಿ ಬಡತನ ಮತ್ತು ಹಸಿವನ್ನು ನಿರ್ಮೂಲಗೊಳಿಸಲು ಕಾಂಗ್ರೆಸ್ ಐತಿಹಾಸಿಕ ಹೆಜ್ಜೆ ಇಡುತ್ತದೆ. ನಾವು ಸರಕಾರ ರಚಿಸಿದರೆ ಪ್ರತಿಯೊಬ್ಬ ಬಡವರಿಗೂ ಕನಿಷ್ಠತಮ ಆದಾಯ ಸಿಗುವಂತೆ ಖಾತ್ರಿಪಡಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಹಿಂದೆಂದೂ ಯಾವ ಸರಕಾರ ಇಡದಂಥ ಹೆಜ್ಜೆಯನ್ನು ಕಾಂಗ್ರೆಸ್ ಇಡುತ್ತಿದೆ ಎಂದು ರಾಹುಲ್ ಗಾಂಧಿ ತಮ್ಮ ನಿರ್ಧಾರವನ್ನು ಬಣ್ಣಿಸಿದ್ದಾರೆ.ಇದನ್ನೂ ಓದಿ: ಜಿಯೋ ರೈಲ್​ ಆ್ಯಪ್​: ಇನ್ಮುಂದೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯಬೇಕಿಲ್ಲ!

ನಮ್ಮ ಕೋಟ್ಯಂತರ ಅಣ್ಣತಮ್ಮಂದಿರು, ಅಕ್ಕತಂಗಿಯರು ಬಡತನದ ಬೇಗೆಯಲ್ಲಿ ಬೇಯುತ್ತಿರುವಾಗ ಹೊಸ ಭಾರತದ ನಿರ್ಮಾಣ ಮಾಡಲು ಸಾಧ್ಯವಿಲ್ಲ. ನಾವು ಅಧಿಕಾರಕ್ಕೆ ಬಂದರೆ ಬಡತನ ಮತ್ತು ಹಸಿವನ್ನು ನಿರ್ಮೂಲನೆ ಮಾಡಲು ಕಾಂಗ್ರೆಸ್ ಮೊದಲು ಬದ್ಧವಾಗಿರುತ್ತದೆ. ಇದು ನಮ್ಮ ಚಿಂತನೆ ಮತ್ತು ಭರವಸೆ ಎಂದೂ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರೂ ಕೂಡ ರಾಹುಲ್ ಗಾಂಧಿ ಅವರ ಮಾತಿಗೆ ಧ್ವನಿಗೂಡಿಸಿದ್ದಾರೆ. ರಾಹುಲ್ ಗಾಂಧಿ ನೀಡಿರುವ ಭರವಸೆ ಈಡೇರಿಸಲು ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಕೆಲಸ ಕಾಂಗ್ರೆಸ್ ಮಾಡುತ್ತದೆ ಎಂದು ಹೇಳಿದ ಚಿದಂಬರಂ, ದೇಶದ ಸಂಪನ್ಮೂಲಗಳ ಮೇಲೆ ಬಡವರಿಗೆ ಮೊದಲ ಹಕ್ಕು ಇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದಲ್ಲಿ ಯುಪಿಎ ಆಡಳಿತ ಇದ್ದ 2004ರಿಂದ 2014ರವರೆಗೆ ಸುಮಾರು 14 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿತ್ತು ಎಂದು ಚಿದಂಬರಂ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್​ನ ಹೊಸ ಭರವಸೆಗೆ ಮೂಲ ಅರವಿಂದ್ ಸುಬ್ರಮಣಿಯನ್:

ಮೋದಿ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಅವರು 2017ರ ಆರ್ಥಿಕ ಸಮೀಕ್ಷೆಯಲ್ಲಿ ಯೂನಿವರ್ಸಲ್ ಬೇಸಿಕ್ ಇನ್ಕಂ ಎಂಬ ಹೊಸ ವಿಚಾರವನ್ನು ಪ್ರಸ್ತುತಪಡಿಸಿದ್ದರು. ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಠ ಆದಾಯ ಕೊಡುವ ವ್ಯವಸ್ಥೆ ನಿರ್ಮಾಣ ಮಾಡುವುದು ಇದರ ಉದ್ದೇಶ. ಆದರೆ, ಅದಿನ್ನೂ ಕಾಗದದ ಮೇಲಿದೆಯೇ ಹೊರತು ಅನುಷ್ಠಾನಕ್ಕೆ ಬಂದಿಲ್ಲ. ಕೆಲ ಮೂಲಗಳ ಪ್ರಕಾರ, ಫೆಬ್ರವರಿ 1ರಂದು ನಡೆಯಲಿರುವ ಬಜೆಟ್​ನಲ್ಲಿ ಮೋದಿ ಸರಕಾರವು ಈ ಯೋಜನೆಯನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಈಗ ಕಾಂಗ್ರೆಸ್ ಪಕ್ಷವು ಭರವಸೆ ಕೊಟ್ಟಿರುವ ಕನಿಷ್ಠ ಆದಾಯ ಖಾತ್ರಿ ಯೋಜನೆಗೆ ಇದು ಸ್ಫೂರ್ತಿಯಾ ಎಂಬ ಅನುಮಾನವಿದೆ. ಆದರೆ, ಪಿ.ಚಿದಂಬರಂ ಅವರು ಇದನ್ನು ಅಲ್ಲಗಳೆದಿದ್ದಾರೆ. ಅರವಿಂದ್ ಸುಬ್ರಮಣಿಯನ್ ಅವರ ಯೂನಿವರ್ಸಲ್ ಬೇಸಿಕ್ ಇನ್ಕಮ್​ಗೂ ತಾವು ತರಲಿರುವ ಮಿನಿಮಮ್ ಇನ್ಕಮ್ ಗ್ಯಾರಂಟಿ ಸ್ಕೀಮ್​ಗೂ ಸಂಬಂಧವಿಲ್ಲ. ತಮ್ಮ ಯೋಜನೆಯು ಬಡವರ ಉದ್ದಾರಕ್ಕೆಂದು ಇದೆ ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಈ ಯೋಜನೆಯನ್ನು ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಮೊದಲು ಜಾರಿಗೆ ತಂದು ನಂತರ ಅದನ್ನು ರಾಷ್ಟ್ರಾದ್ಯಂತ ಅನುಷ್ಠಾನಗೊಳಿಸುವ ಗುರಿಯನ್ನು ಇಟ್ಟುಕೊಂಡಿದೆ.
First published: January 28, 2019, 5:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading