ಸಿದ್ಧಾಂತಗಳ ನಡುವಿನ ಹೋರಾಟ ನಿರಂತರ, ರೈತ-ಬಡವರ ಪರ ನನ್ನ ನಿಲುವು; ರಾಹುಲ್​ ಗಾಂಧಿ!

ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾರನೇ ದಿನವೇ ಕೋರ್ಟ್​ಗೆ ಹಾಜರಾದ ಅವರಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ನ್ಯಾಯಾಲಯದ ಆವರಣದಲ್ಲಿ ಕಿಕ್ಕಿರಿದು ತುಂಬಿದ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ಅವರಿಗೆ ಬೆಂಬಲ ನೀಡಿದರು. .

Seema.R | news18
Updated:July 4, 2019, 12:30 PM IST
ಸಿದ್ಧಾಂತಗಳ ನಡುವಿನ ಹೋರಾಟ ನಿರಂತರ, ರೈತ-ಬಡವರ ಪರ ನನ್ನ ನಿಲುವು; ರಾಹುಲ್​ ಗಾಂಧಿ!
ಮುಂಬೈ ಕೋರ್ಟ್​ಗೆ ಹಾಜರಾದ ರಾಹುಲ್​ ಗಾಂಧಿ
Seema.R | news18
Updated: July 4, 2019, 12:30 PM IST
ಮುಂಬೈ (ಜು.04):  ಮಾನಹಾನಿ ಪ್ರಕರಣದ ಸಂಬಂಧ ಮುಂಬೈ ಕೋರ್ಟ್​ ಮುಂದೆ ಹಾಜರಾದ ರಾಹುಲ್​ ಗಾಂಧಿ ತಪ್ಪಿತಸ್ಥರಲ್ಲ ಎಂದು ನ್ಯಾಯಾಲಯ ತಿಳಿಸಿದ್ದು,  ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ.

ಪ್ರಕರಣ ಸಂಬಂಧ ಸಮನ್ಸ್​ ಜಾರಿಯಾದ ಹಿನ್ನೆಲೆ ವಿಚಾರಣೆಗಾಗಿ ಅವರು ಇಂದು ನ್ಯಾಯಾಲಯಕ್ಕೆ ಹಾಜರಾದರು.  ವಿಚಾರಣೆ ನಡೆಸಿದ ನ್ಯಾಯಾಲಯ, 15 ಸಾವಿರ ಶ್ಯೂರಿಟಿ ಹಣವನ್ನಿಟ್ಟು ಜಾಮೀನು ಪಡೆಯಬಹುದು ಎಂದು ತಿಳಿಸಿದೆ.

 Loading...

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಇದು ಸಿದ್ಧಾಂತಗಳ ನಡುವಿನ ಹೋರಾಟ. ನಾನು ರೈತ ಹಾಗೂ ಬಡವರ ಪರವಾಗಿ ನಿಂತಿದ್ದೇನೆ. ನನ್ನ ಮೇಲೆ ದಾಳಿ ನಡೆಯುತ್ತಿದ್ದು, ಇದನ್ನು ನಾನು ಸಂತೋಷದಿಂದ ಸ್ವೀಕರಿಸುತ್ತಿದ್ದೇನೆ. ನನ್ನ ಹೋರಾಟ ಮುಂದುವರಿಯಲಿದೆ, ಕಳೆದ ಐದು ವರ್ಷಗಳಲ್ಲಿ 10 ಪಟ್ಟು ಕಠಿಣವಾಗಿ ನಾನು ಹೋರಾಟ ಮಾಡಿದ್ದೇನೆ" ಎಂದರು

ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾರನೇ ದಿನವೇ ಕೋರ್ಟ್​ಗೆ ಹಾಜರಾದ ಅವರಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ನ್ಯಾಯಾಲಯದ ಆವರಣದಲ್ಲಿ ಕಿಕ್ಕಿರಿದು ತುಂಬಿದ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ಅವರಿಗೆ ಬೆಂಬಲ ನೀಡಿದರು. .

ಪ್ರಕರಣದ ಹಿನ್ನೆಲೆ

2017ರ ಸೆಪ್ಟೆಂಬರ್​ನಲ್ಲಿ ಗೌರಿ ಲಂಕೇಶ್​ ಹತ್ಯೆ ನಡೆಸಲಾಗಿತ್ತು. ಈ ಹತ್ಯೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು, ಈ ಕುರಿತು ಮಾತನಾಡಿದ್ದ ರಾಹುಲ್​ ಗಾಂಧಿ, ಈ ಹತ್ಯೆಯನ್ನು ಆರ್​ಎಸ್​ಎಸ್​ ಕೈವಾಡವಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್​ಎಸ್​ ಎಸ್​ ಕಾರ್ಯಕರ್ತ ಜೋಶಿ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಹಾಗೂ ಸಿಪಿಐ(ಎಂ) ನಾಯಕ ಸೀತಾರಾಮ್​ ಯೆಚೂರಿ ಮೇಲೆ ವೈಯಕ್ತಿಯ ದೂರು ದಾಖಲಿಸಿದ್ದರು.

ಈ ಪ್ರಕರಣ ಸಂಬಂಧ ಕಳೆದ ಫೆಬ್ರವರಿಯಲ್ಲಿ ಮಾಝ್​ಗಂವ್​ ನ್ಯಾಯಾಲಯ ರಾಹುಲ್​ ಗಾಂಧಿ ಹಾಗೂ ಸಿಪಿಐ (ಎಂ)ನಾಯಕ ಸೀತಾರಾಮ್​ ಯೆಚೂರಿ ಅವರ ವಿರುದ್ಧ ಸಮನ್ಸ್​ ಜಾರಿ ಮಾಡಿತ್ತು.

ಗೌರಿ ಲಂಕೇಶ್​ ಹತ್ಯೆ ಮಾರನೇ ದಿನ ಮಾತನಾಡಿದ ರಾಹುಲ್​ ಗಾಂಧಿ "ಬಿಜೆಪಿ ತತ್ವಗಳ ವಿರುದ್ಧ ಹಾಗೂ ಆರ್​ಎಸ್​ಎಸ್​ ಆದರ್ಶಗಳ ವಿರುದ್ಧ ಯಾರೇ ಮಾತನಾಡಿದರೂ ಅವರ ಮೇಲೆ ದಾಳಿ ನಡೆದು ಹತ್ಯೆಮಾಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದಿದ್ದರು" ಎಂದು ಜೋಶಿ ದೂರಿನಲ್ಲಿ ದಾಖಲಿಸಿದ್ದರು.

ಇದನ್ನು ಓದಿ: ಗೌರಿ ಹತ್ಯೆಯಲ್ಲಿ ಆರ್​ಎಸ್​ಎಸ್​ ಕೈವಾಡ ಹೇಳಿಕೆ, ಮಾನಹಾನಿ ಮೊಕದ್ದಮೆ; ನ್ಯಾಯಾಲಯದ ಎದುರು ರಾಹುಲ್​ ಗಾಂಧಿ!

ಸೀತಾರಾಮ್​ ಯೆಚೂರಿ ಕೂಡ "ಆರ್​ಎಸ್​ಎಸ್​ ತತ್ವ ಒಪ್ಪದ ಪತ್ರಕರ್ತರ ಹತ್ಯೆ ನಡೆಯುತ್ತಿದೆ" ಎಂದು ಆರೋಪಿಸಿದ್ದರು. ಈ ಸಂಬಂಧ ಇವರ ಮೇಲೆ ಮಾನಹಾನಿ ಪ್ರಕರಣ ದಾಖಲಾಗಿತ್ತು.

ಇದಲ್ಲದೇ ರಾಹುಲ್​ ಗಾಂಧಿ ಮತ್ತೊಂದು ಮಾನಹಾನಿ ಪ್ರಕರಣ ಎದುರಿಸುತ್ತಿದ್ದಾರೆ. ಈ ಹಿಂದೆ  ಮಹಾತ್ಮ ಗಾಂಧಿ ಹತ್ಯೆಗೆ ಸಂಘ ಕಾರಣ ಎಂದು ಆರೋಪಿಸಿದ ಅವರ ಮೇಲೆ ಸ್ಥಳೀಯ ಆರ್​ಎಸ್​ಎಸ್​ ಕಾರ್ಯಕರ್ತರು ಥಾಣೆ ಜಿಲ್ಲೆಯ ಭಿವಂಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

 
First published:July 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...