Rahul Gandhi Marriage: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮದುವೆ ಪ್ರಸ್ತಾಪ!

Bharat Jodo Yatra: ತಮಿಳು ಹುಡುಗಿಯನ್ನು ರಾಹುಲ್ ಗಾಂಧಿಗಾಗಿ ಹುಡುಕಲು ತಾವು ಸಿದ್ಧರಿರುವುದಾಗಿಯೂ ಆ ಮಹಿಳೆ  ಹೇಳಿದ್ದಾಗಿ ಸಂಸದ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ಕಾಂಗ್ರೆಸ್ ಹಮ್ಮಿಕೊಂಡಿರುವ 150 ದಿನಗಳ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಮದುವೆ ಬಗ್ಗೆ ಸುದ್ದಿಯಾಗಿದೆ. ಸದ್ಯ ತಮಿಳುನಾಡಿನಲ್ಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ (Congress MP Rahul Gandhi) ವಿವಿಧ ಸಮುದಾಯ, ವರ್ಗಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಅದೇ ರೀತಿ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ಜೊತೆ ಸಂವಾದದ ವೇಳೆ ರಾಹುಲ್ ಗಾಂಧಿ ಮದುವೆ (Rahul Gandhi Marriage) ಕುರಿತು ಪ್ರಸ್ತಾಪ ಬಂದಿದೆ.

ಕನ್ಯಾಕುಮಾರಿಯ ಮಾರ್ತಾಂಡಂನಲ್ಲಿ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರೊಬ್ಬರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಳಿ ಮದುವೆ ಬಗ್ಗೆ ಮಾತೆತ್ತಿದ್ದಾರೆ. ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಜೊತೆಗಿರುವ ಸಂಸದ ಜೈರಾಮ್ ರಮೇಶ್, ರಾಹುಲ್ ಗಾಂಧಿ ತಮಿಳುನಾಡಿನ ಮೇಲೆ ಭಾರೀ ಪ್ರೀತಿ ಇಟ್ಟಿದ್ದಾರೆ ಎಂದು ಆ ಮಹಿಳೆ ಹೇಳಿದ್ದಾಗಿ ತಿಳಿಸಿದ್ದಾರೆ.

ರಾಹುಲ್ ಗಾಂಧಿಗೆ ಹುಡುಗಿ ಹುಡುಕಲು ಸಿದ್ಧ
ಅಲ್ಲದೇ ತಮಿಳು ಹುಡುಗಿಯನ್ನು ರಾಹುಲ್ ಗಾಂಧಿಗಾಗಿ ಹುಡುಕಲು ತಾವು ಸಿದ್ಧರಿರುವುದಾಗಿಯೂ ಆ ಮಹಿಳೆ  ಹೇಳಿದ್ದಾಗಿ ಸಂಸದ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ಜೊತೆಗೆ  ರಾಹುಲ್ ಗಾಂಧಿ ಆ ಮಹಿಳೆಯ ಜೊತೆ ಚರ್ಚೆ ನಡೆಸುತ್ತಿರುವ ಫೋಟೋಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಮದುವೆ ಪ್ರಸ್ತಾಪದಿಂದ ಉಲ್ಲಾಸಭರಿತರಾದ ರಾಹುಲ್ ಗಾಂಧಿ
ಮದುವೆ ಪ್ರಸ್ತಾಪ ಎತ್ತುತ್ತಿದ್ದಂತೆ ರಾಹುಲ್ ಗಾಂಧಿ ಉಲ್ಲಾಸಭರಿತರಾದರು. ಖುಷಿ ಖುಷಿಯಿಂದ ಆ ಮಹಿಳೆಯ ಜೊತೆ ಚರ್ಚೆ ನಡೆಸಿದರು ಎಂದು ಕಾಂಗ್ರೆಸ್ ಸಂಸದ್ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: Bharat Jodo: ಯೇಸು ಮಾತ್ರ ನಿಜವಾದ ದೇವರು: ವಿವಾದಿತ ಪಾದ್ರಿಯನ್ನು ಭೇಟಿಯಾದ ರಾಹುಲ್ ಗಾಂಧಿ: ಬಿಜೆಪಿ, ಕೈ ಸಮರ!

ಏನಿದು ಭಾರತ್ ಜೋಡೋ ಯಾತ್ರೆ?
ಕಾಂಗ್ರೆಸ್​ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದೆ. ಈ 3500 ಕಿಮೀ ಪ್ರಯಾಣವು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಈ ಐದು ತಿಂಗಳ ಪಾದಯಾತ್ರೆಯನ್ನು ಸ್ವತಃ ರಾಹುಲ್ ಗಾಂಧಿ ಅವರು ಬುಧವಾರ ತಮಿಳುನಾಡಿನಿಂದ ಆರಂಭಿಸಲಿದ್ದಾರೆ. ಎರಡು ಹಂತಗಳಲ್ಲಿ ಪ್ರಯಾಣ ನಡೆಯಲಿದೆ. 

ಪ್ರವಾಸದ ತತ್ವಗಳನ್ನು ತಿಳಿಸಿದ ಕಾಂಗ್ರೆಸ್

- ಜಾತ್ಯತೀತ ಮನೋಭಾವಕ್ಕಾಗಿ ದೇಶದ ಜನರನ್ನು ಸಂಪರ್ಕಿಸುವುದು
- ಕೋಟ್ಯಂತರ ಭಾರತೀಯರ ಪರ ಧ್ವನಿ ಎತ್ತಲು
- ಪ್ರಸ್ತುತ ಸಮಯದಲ್ಲಿ ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಮಾತನಾಡುವುದು

ಇದನ್ನೂ ಓದಿ: Bharat Jodo Yatra: ಕಾಂಗ್ರೆಸ್ ಮತ್ತೆ ಎದ್ದು ಬರಲಿದೆ; ವಿದೇಶದಿಂದ ಸೋನಿಯಾ ಗಾಂಧಿ ವ್ಯಾಖ್ಯಾನ

ಯಾತ್ರೆಗೆ 150 ನಾಗರಿಕ ಸಮುದಾಯದ ಬೆಂಬಲ
ಭಾರತ್ ಜೋಡೋ ಯಾತ್ರೆಯನ್ನು ಮತ್ತಷ್ಟು ಬಲಪಡಿಸಲು, ರಾಹುಲ್ ಗಾಂಧಿ ಅವರೊಂದಿಗೆ ಸಾಮಾಜಿಕ ಸಂಘಟನೆಗಳನ್ನು ಸಂಯೋಜಿಸಿದ್ದಾರೆ. ಕಾಂಗ್ರೆಸ್ ಭೇಟಿಗೆ 150 ನಾಗರಿಕ ಸಂಘಟನೆಗಳು ಬೆಂಬಲ ನೀಡಿವೆ. ಯೋಗೇಂದ್ರ ಯಾದವ್, ಅರುಣಾ ರೈ, ಸೈಯದಾ ಹಮೀದ್, ಪಿ.ವಿ.ರಾಜಗೋಪಾಲ್, ಬೆಜವಾಡ ವಿಲ್ಸನ್, ದೇವನೂರ ಮಹಾದೇವ, ಜಿ.ಎನ್.ದೇವಿ ಮುಂತಾದ ವಿವಿಧ ಸಂಘಟನೆಗಳಿಗೆ ಸಂಬಂಧಿಸಿದವರು ಕೂಡ ಕಾಂಗ್ರೆಸ್ ಭೇಟಿಗೆ ಬೆಂಬಲ ಘೋಷಿಸಿದ್ದಾರೆ.
Published by:ಗುರುಗಣೇಶ ಡಬ್ಗುಳಿ
First published: