Rahul Gandhi: ಟ್ವಿಟ್ಟರ್ ಫಾಲೋವರ್ಸ್ ಕಡಿಮೆ ಆಗ್ತಿರೋದಕ್ಕೆ ಕಾರಣ ಮೋದಿ, ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಪತ್ರ!

ಟ್ವಿಟ್ಟರ್‌ಗೆ ರಾಹುಲ್ ಗಾಂಧಿ ತಮ್ಮ ಫಾಲೋವರ್ಸ್‌ ಬಗ್ಗೆ ಅಂಕಿಸಂಖ್ಯೆಗಳನ್ನು ನೀಡಿದ್ದಾರೆ. ಅದರ ಪ್ರಕಾರ ರಾಹುಲ್ ಗಾಂಧಿ ಅವರು ಪ್ರತಿ ತಿಂಗಳೂ ಸರಾಸರಿ 2.3 ಲಕ್ಷಕ್ಕೂ ಅಧಿಕ ಹೊಸ ಫಾಲೋವರ್‌ಗಳನ್ನು ಪಡೆದುಕೊಳ್ಳುತ್ತಿದ್ದರು. ಅದೀಗ ಕಡಿಮೆ ಆಗಿದೆಯಂತೆ.

ರಾಹುಲ್ ಗಾಂಧಿ-ಪರಾಗ್ ಅಗ್ರವಾಲ್

ರಾಹುಲ್ ಗಾಂಧಿ-ಪರಾಗ್ ಅಗ್ರವಾಲ್

  • Share this:
ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಬಿಜೆಪಿ (BJP) ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದು ಹೊಸದೇನಲ್ಲ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ರಾಹುಲ್ ಗಾಂಧಿ ಪ್ರತಿನಿತ್ಯ ಟೀಕಿಸುತ್ತಾರೆ. ಇದೀಗ ಮತ್ತೆ ರಾಹುಲ್ ಗಾಂಧಿ ಹೊಸದೊಂದು ಆರೋಪ ಮಾಡಿದ್ದಾರೆ. ಈ ಕುರಿತಂತೆ ಟ್ಟಿಟ್ಚರ್ (Twitter) ಸಂಸ್ಥೆಗೆ ಪತ್ರವನ್ನೂ ಬರೆದಿದ್ದಾರೆ. ಹಾಗಿದ್ರೆ ರಾಹುಲ್ ಗಾಂಧಿ ಆರೋಪ ಮಾಡಿದ್ದು ಯಾರ ಮೇಲೆ? ಟ್ವಿಟ್ಟರ್‌ಗೆ ಅವರು ಪತ್ರ ಬರೆದಿದ್ದಾದರೂ ಏಕೆ? ಪತ್ರದಲ್ಲಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಎಳೆದು ತಂದಿರೋದಾದರೂ ಏಕೆ? ಟ್ವಿಟ್ಟರ್ ಸಂಸ್ಥೆಯ ಸಿಇಒ (CEO) ಅವರು ರಾಹುಲ್ ಗಾಂಧಿ ಪತ್ರಕ್ಕೆ ಏನೆಂದು ಉತ್ತರಿಸಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಕುತೂಹಲಕಾರಿ ಉತ್ತರಕ್ಕಾಗಿ ಮುಂದೆ ಓದಿ…

ಟ್ವಿಟ್ಟರ್‌ಗೆ ಪತ್ರ ಬರೆದ ರಾಹುಲ್ ಗಾಂಧಿ

ಹೌದು, ರಾಹುಲ್ ಗಾಂಧಿ ಟ್ವಿಟ್ಟರ್ ಸಂಸ್ಥೆಯ ಸಿಇಒ ಪರಾಗ್ ಅಗ್ರವಾಲ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಸಹ ವರದಿ ಮಾಡಿದೆ. ರಾಹುಲ್ ಗಾಂಧಿ ಪತ್ರದಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ಬಗ್ಗೆ ಆರೋಪಿಸಿದ್ದಾರೆ. ಇದಕ್ಕೆ ಟ್ವಿಟ್ಟರ್ ಸಂಸ್ಥೆಯೂ ಸಹ ಕಾರಣ ಅಂತ ಉಲ್ಲೇಖಿಸಿದ್ದಾರೆ.

“ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿಲ್ಲ”

ರಾಹುಲ್ ಗಾಂಧಿ ಟ್ವಿಟ್ಟರ್‌ಗೆ ಬರೆದಿರೋ ಪತ್ರದಲ್ಲಿ ಮುಖ್ಯವಾಗಿ ತಮ್ಮ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಕುಸಿಯುತ್ತಿರೋ ಬಗ್ಗೆ ಉಲ್ಲೇಖಿಸಿದ್ದಾರೆ. “ಟ್ವಿಟ್ಟರ್ ಸಂಸ್ಥೆಯ ಅಸಮರ್ಪಕ ಕೆಲಸದಿಂದಾಗಿ ನಾನು ಗೊಂದಲಕ್ಕೆ ಒಳಗಾಗಿದ್ದೇನೆ. 2021ರ ಆಗಸ್ಟ್‌ನಲ್ಲಿ ನನ್ನ ಖಾತೆಯು ಕೆಲ ಸಮಯ ಲಾಕ್ ಆದ ನಂತರ ಫಾಲೋವರ್‌ಗಳು ಹೆಚ್ಚಾಗದಂತೆ ನಿಯಂತ್ರಣ ಹೇರಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Punjab Elections: ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು Congressನ ಎಲ್ಲಾ 117 ಅಭ್ಯರ್ಥಿಗಳಿಂದ ಪೂಜೆ

ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ ರಾಹುಲ್

ಇನ್ನು ತಮ್ಮ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಕುಸಿಯುತ್ತಿರೋದಕ್ಕೆ ಬಿಜೆಪಿಯತ್ತ ರಾಹುಲ್ ಗಾಂಧಿ ಬೊಟ್ಟು ಮಾಡಿದ್ದಾರೆ.  ಕೇಂದ್ರ ಸರ್ಕಾರದ ಒತ್ತಡಕ್ಕೆ ಟ್ವಿಟ್ಟರ್ ಒಳಗಾಗಿದೆ. ಹೀಗಾಗಿಯೇ ಅದು ನನ್ನ ಫಾಲೋವರ್ಸ್ ಸಂಖ್ಯೆಯನ್ನು ನಿಯಂತ್ರಿಸುತ್ತಿದೆ ಅಂತ ಹೇಳಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಟ್ವಿಟ್ಟರ್‌ನ ಧೋರಣೆಯಿಂದಾಗಿ ಭಾರತದಲ್ಲಿ ಮುಕ್ತ ಮತ್ತು ನ್ಯಾಯಯುತ ಅಭಿವ್ಯಕ್ತಿಯನ್ನು ನಿರ್ಬಂಧಿಸಲಾಗುತ್ತಿದೆ ಎಂದು ರಾಹುಲ್ ಕಟುವಾಗಿ ಟೀಕಿಸಿದ್ದಾರೆ.

“ಆಗಸ್ಟ್‌ನಿಂದ ಕುಸಿಯುತ್ತಿದೆ ಫಾಲೋವರ್ಸ್ ಸಂಖ್ಯೆ” 

ಟ್ವಿಟ್ಟರ್‌ಗೆ ರಾಹುಲ್ ಗಾಂಧಿ ತಮ್ಮ ಫಾಲೋವರ್ಸ್‌ ಬಗ್ಗೆ ಅಂಕಿಸಂಖ್ಯೆಗಳನ್ನು ನೀಡಿದ್ದಾರೆ. ಅದರ ಪ್ರಕಾರ ರಾಹುಲ್ ಗಾಂಧಿ ಅವರು ಪ್ರತಿ ತಿಂಗಳೂ ಸರಾಸರಿ 2.3 ಲಕ್ಷಕ್ಕೂ ಅಧಿಕ ಹೊಸ ಫಾಲೋವರ್‌ಗಳನ್ನು ಪಡೆದುಕೊಳ್ಳುತ್ತಿದ್ದರು. ಅದು ಕೆಲವು ತಿಂಗಳು 6.5 ಲಕ್ಷಕ್ಕೂ ತಲುಪಿತ್ತು. ಆದರೆ 2021ರ ಆಗಸ್ಟ್‌ನಿಂದ ಅವರ ಖಾತೆಯ ಹೊಸ ಫಾಲೋವರ್‌ಗಳ ಸಂಖ್ಯೆ ತಿಂಗಳಿಗೆ ಕೇವಲ 2,500ಕ್ಕೆ ಕುಸಿದಿದೆ.  ಅವರ 19.5 ಮಿಲಿಯನ್ ಒಟ್ಟು ಫಾಲೋವರ್‌ಗಳ ಸಂಖ್ಯೆಯನ್ನು ವರ್ಚ್ಯುವಲ್ ಆಗಿ ತಡೆಹಿಡಿಯಲಾಗಿದೆಯಂತೆ.

ಇದನ್ನೂ ಓದಿ: Yogi Adityanath: ಯೋಗಿ ಆದಿತ್ಯನಾಥ್‌ಗೆ ಹತ್ಯೆ ಬೆದರಿಕೆ, ಪತ್ರದಲ್ಲಿ ಸ್ಫೋಟಕ ಕಳಿಸಿದ್ಯಾರು?

ರಾಹುಲ್-ಟ್ವಿಟ್ಟರ್ ಜಟಾಪಟಿ ಇದೇ ಮೊದಲಲ್ಲ

ಅಂದಹಾಗೆ ರಾಹುಲ್  ಗಾಂಧಿ ಟ್ವಿಟ್ಟರ್ ಜೊತೆ ಸಂಘರ್ಷಕ್ಕೆ ಇಳಿದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಭಾರತದ ರಾಜಕೀಯದಲ್ಲಿ ಟ್ವಿಟ್ಟರ್ ಹಸ್ತಕ್ಷೇಪ ಮಾಡುತ್ತಿದೆ ಅಂತ ರಾಹುಲ್ ಗಾಂಧಿ ಆರೋಪಿಸಿದ್ದರು. 2021ರ ಆಗಸ್ಟ್‌ನಲ್ಲಿ ದಿಲ್ಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬದ ಚಿತ್ರವನ್ನು ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ವಿವಾದ ಸೃಷ್ಟಿಸಿತ್ತು.

ಬಳಿಕ ಈ ಚಿತ್ರವನ್ನು ತೆಗೆದು ಹಾಕಿದ್ದ ಟ್ವಿಟ್ಟರ್, ರಾಹುಲ್ ಗಾಂಧಿ ಅವರ ಖಾತೆಯನ್ನು ಎಂಟು ದಿನ ತಡೆಹಿಡಿದಿತ್ತು. ಬಳಿಕ ಖಾತೆಯನ್ನು ಮರಳಿ ಸಕ್ರಿಯಗೊಳಿಸಲಾಗಿತ್ತು. ಈ ಘಟನೆ ಬಳಿಕ ರಾಹುಲ್ ಗಾಂಧಿ ಅವರ ಖಾತೆಗೆ ಫಾಲೋವರ್‌ಗಳ ಸಂಖ್ಯೆ ಹೆಚ್ಚಿಸಲು ಅಡೆತಡೆಗಳು ಉಂಟಾಗುತ್ತಿವೆ ಎನ್ನುವುದು ಅವರ ಆರೋಪ.

ರಾಹುಲ್ ಪತ್ರಕ್ಕೆ ಟ್ವಿಟ್ಟರ್ ಹೇಳಿದ್ದೇನು?

ಇನ್ನು ರಾಹುಲ್ ಪತ್ರಕ್ಕೆ ಟ್ವಿಟ್ಟರ್ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ನಾವು ಆರೋಗ್ಯಕರ ಸೇವೆ ಮತ್ತು ವಿಶ್ವಾಸಾರ್ಹ ಖಾತೆಗಳನ್ನು ಖಚಿತಪಡಿಸಿಕೊಳ್ಳಲು ಪ್ರತಿದಿನ ಪ್ರಯತ್ನ ನಡೆಸುತ್ತಲೇ ಇರುತ್ತೇವೆ. ಇದರ ಭಾಗವಾಗಿ ನಾವು ಸ್ಪ್ಯಾಮ್ ಮತ್ತು ದುರುದ್ದೇಶಪೂರಿತ ವಿಷಯಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ. ಇದರ ಬದಲಾವಣೆ ಸಂದರ್ಭದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಟು ಕಡಿಮೆ ಆಗಬಹುದು. ನಮ್ಮ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ಪ್ರತಿ ವಾರ ಲಕ್ಷಾಂತರ ಖಾತೆಗಳನ್ನು ತೆಗೆದುಹಾಕುತ್ತೇವೆ ಅಂತ ಪ್ರತಿಕ್ರಿಯಿಸಿದೆ.
Published by:Annappa Achari
First published: