ಅಧಿಕಾರಿಗಳು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ ನಂತರ ಉತ್ತರ ಪ್ರದೇಶ ಸರ್ಕಾರವು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ಮೂವರಿಗೆ ಲಖಿಂಪುರ್ ಖೇರಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಪ್ರಿಯಾಂಕಾ ಗಾಂಧಿ ಈಗಾಗಲೇ ಸೀತಾಪುರದಲ್ಲಿ ಬಂಧನದಲ್ಲಿದ್ದರೆ, ರಾಹುಲ್ ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಶೀಘ್ರದಲ್ಲೇ ಲಖಿಂಪುರ್ ಖೇರಿ ಜಿಲ್ಲೆಗೆ ಇತರೆ ಮೂವರು ಕಾಂಗ್ರೆಸ್ ನಾಯಕರಾದ ಕೆಸಿ ವೇಣುಗೋಪಾಲ್, ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ಹಾಗೂ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಭೇಟಿ ನೀಡಲಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು, ಐದಕ್ಕಿಂತ ಕಡಿಮೆ ಸದಸ್ಯರ ಗುಂಪು ಮಾತ್ರ ಲಖಿಂಪುರಕ್ಕೆ ಭೇಟಿ ನೀಡಲು ಅನುಮತಿ ನೀಡಲಾಗಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಶರಣಾಗಬಹುದು ಎಂಬ ವರದಿಗಳ ನಡುವೆ, ಕೇಂದ್ರ ಸಚಿವರು ದೆಹಲಿ ತಲುಪಿದ್ದಾರೆ. ಭಾನುವಾರ ಹಿಂಸಾಚಾರದ ನಂತರ ದಾಖಲಾದ ಎಫ್ಐಆರ್ನಲ್ಲಿ ಆಶಿಶ್ ವಿರುದ್ಧ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿ ಪ್ರಕರಣದಡಿ ಎಫ್ಐಆರ್ ದಾಖಲಿಸಲಾಗಿದೆ. ಒಂದು ವೇಳೆ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಮರಣೋತ್ತರ ಪರೀಕ್ಷೆಯ ವರದಿಯು ಗುಂಡಿನ ಯಾವುದೇ ಗಾಯಗಳನ್ನು ಹೊಂದಿರದಿದ್ದರೆ, ಪ್ರಕರಣವು ಕೇವಲ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಪ್ರಕರಣ ದಾಖಲಾಗುತ್ತದೆ. ಈ ಪ್ರಕರಣದಲ್ಲಿ ಪೊಲೀಸ್ ಠಾಣೆಯಿಂದಲೇ ಜಾಮೀನು ಪಡೆಯಬಹುದಾಗಿದೆ.
#WATCH | At Lucknow airport, Congress leader Rahul Gandhi says, "What kind of permission I have been granted by UP Govt? These people are not letting me go out of the airport."
Gandhi is leading a Congress delegation to violence-hit Lakhimpur Kheri pic.twitter.com/Wfxzgh3sec
— ANI UP (@ANINewsUP) October 6, 2021
ಇದಕ್ಕೂ ಮುನ್ನ ರಾಹುಲ್ ಗಾಂಧಿ ಅವರು ಲಕ್ನೋ ವಿಮಾನ ನಿಲ್ದಾಣ ತಲುಪಿದಾಗ ಅಲ್ಲಿಂದ ಅವರನ್ನು ಹೊರಗೆ ಹೋಗಲು ಪೊಲೀಸ್ ಸಿಬ್ಬಂದಿ ಬಿಡಲಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ ಅವರು, ಉತ್ತರಪ್ರದೇಶ ಸರ್ಕಾರದಿಂದ ನಾನು ಯಾವ ಬಗೆಯ ಅನುಮತಿ ಪಡೆಯಬೇಕು ಎಂದು ಮಾಧ್ಯಮದ ಮೂಲಕ ಪ್ರಶ್ನೆ ಮಾಡಿದರು.
ಇದನ್ನು ಓದಿ: Lakhimpur Kheri Violence: ನಿಷೇಧಾಜ್ಞೆ ಇದ್ದರೇನಂತೆ, 3 ಜನ ಲಖಿಂಪುರ್ಗೆ ಹೋಗುತ್ತೇವೆ; ರಾಹುಲ್ ಗಾಂಧಿ
ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chief Minister Bhupesh Baghel), ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ (Chief Minister Charanjith Sing Channi) ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ (K.C. Venugopal) ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ (Ranadeep Sing Surjewala) ಅವರೊಂದಿಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ (AICC Head Quarter) ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಅವರು, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಪ್ರತಿಪಕ್ಷದ ನಾಯಕರು ಹಿಂಸಾಚಾರ ನಡೆದ ಸ್ಥಳಕ್ಕೆ ಹೋಗುವುದನ್ನು ತಡೆಯಲಾಗುತ್ತಿದೆ. ಹಿಂದೆ ಹಾತ್ರಾಸ್ ಘಟನೆ (Hathras Incident) ನಡೆದಾಗಲೂ ಹೀಗೆ ಮಾಡಿದ್ದರು. ನಾವು ಅಲ್ಲಿಗೆ ಹೋಗಿದ್ದರಿಂದ ಆ ಘಟನೆ ಬಗ್ಗೆ ತನಿಖೆ ಆಯಿತು. ಈಗಲೂ ಲಖೀಂಪುರ್ ಖೇರಿಗೆ ತೆರಳುವ ಹಿಂದೆ ಮೃತಪಟ್ಟ ರೈತರನ್ನು ಸಂತೈಸುವ ಮತ್ತು ತನಿಖೆ ಆಗುವಂತೆ ಒತ್ತಾಯಿಸುವ ಉದ್ದೇಶ ಮಾತ್ರ ಇದೆ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ