ಪ್ರತಿಪಕ್ಷಗಳ ನಾಯಕರ ಜೊತೆ ಉಪಹಾರ; ಸಂಸತ್ತಿಗೆ ಸೈಕಲ್​ನಲ್ಲಿ ತೆರಳಿ ಪ್ರತಿಭಟಿಸಿದ ರಾಹುಲ್​ ಗಾಂಧಿ

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19 ರಂದು ಆರಂಭವಾಗಿದ್ದು, ಮೊದಲ ಎರಡು ವಾರಗಳಲ್ಲಿ 107 ಗಂಟೆಗಳಲ್ಲಿ ಕೇವಲ 18 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿದೆ. ಪ್ರತಿಪಕ್ಷಗಳ ಅಡಚಣೆಗಳಿಂದಾಗಿ 133 ಕೋಟಿಗೂ ಹೆಚ್ಚು ತೆರಿಗೆದಾರರ ಹಣ ನೀರಿನಲ್ಲಿ ಹೋಮಮಾಡಿದಂತಾಗಿದೆ ಎಂದು ಸರ್ಕಾರಿ ಮೂಲಗಳು ಶನಿವಾರ ತಿಳಿಸಿವೆ.

ಒಟ್ಟಿಗೆ ಕಾಣಿಸಿಕೊಂಡ ಪ್ರತಿಪಕ್ಷಗಳ ನಾಯಕರು ಹಾಗೂ ರಾಹುಲ್​ ಗಾಂಧಿ

ಒಟ್ಟಿಗೆ ಕಾಣಿಸಿಕೊಂಡ ಪ್ರತಿಪಕ್ಷಗಳ ನಾಯಕರು ಹಾಗೂ ರಾಹುಲ್​ ಗಾಂಧಿ

 • Share this:
  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಇತರೇ ಪ್ರತಿಪಕ್ಷ ನಾಯಕರುಗಳ ಜೊತೆ ಬೆಳಗಿನ ಉಪಹಾರದ ಜೊತೆಗೆ ಸಭೆಯನ್ನು ನಡೆಸಿದರು. ಈ ಅನೌಪಚಾರಿಕ ಸಭೆಯ ನೇತೃತ್ವ ವಹಿಸಿದ್ದ ರಾಹುಲ್​ಗಾಂಧು, ಪೆಗಾಸಸ್ ವಿವಾದ ಮತ್ತು ರೈತರ ಆಂದೋಲನಗಳ ವಿರುದ್ಧ ಉಭಯ ಸದನಗಳಲ್ಲಿ ಆಡಳಿತ ಪಕ್ಱಗಳಿಂದ ಸರಿಯಾದ ಉತ್ತರ ಸಿಗದೆ ಇರುತ್ತಿರುವ ಕಾರಣ ಹಾಗೂ ಜೋರು ಪ್ರತಿಭಟನೆಗಳನ್ನು ಎದುರಿಸುತ್ತಿರುವುದರಿಂದ ಸಂಸತ್ತಿನ ಆವರಣದಲ್ಲಿ 'ಅಣಕು ಸಂಸತ್ತು' ನಡೆಸುವ ಕುರಿತು ಚರ್ಚಿಸಲಾಯಿತು ಎಂದು ಹೇಳಲಾಗಿದೆ.

  ತೃಣಮೂಲ ಕಾಂಗ್ರೆಸ್, ಶಿವಸೇನೆ, ಎನ್‌ಸಿಪಿ ಮತ್ತು ಆರ್‌ಜೆಡಿ ಮುಂತಾದ ಪಕ್ಷಗಳ ನಾಕಕರುಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷದ ಅನುಪಸ್ಥಿತಿ ಇಲ್ಲಿ ಎದ್ದುಕಾಣುತ್ತಿತ್ತು. ಎಎಪಿ ಯಾವಾಗಲೂ ಸಂಸತ್ತಿನಲ್ಲಿ ವಿರೋಧ ಪಕ್ಷದ ಕಾರ್ಯತಂತ್ರದ ಸಭೆಗಳಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುತ್ತದೆ, ವಿಶೇಷವಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಏನಾದರೂ ಸಭೆ ಕರೆದರೆ ಆಕಡೆ ಎಎಪಿ ಬರುವುದೇ ಇಲ್ಲ ಎಂಬ ಮಾತಿದೆ. ಅದರಂತೆ ಎಎಪಿಯನ್ನು ಈ ಸಭೆಗೆ ಆಹ್ವಾನಿಸಲಾಗಿತ್ತು ಆದರೆ ಅದು ದೂರ ಉಳಿಯಿತು ಎಂದು ಮೂಲಗಳು ತಿಳಿಸಿವೆ.

  ಬೆಳಗಿನ ಉಪಾಹಾರ ಸಭೆಗೆ ಗೈರು ಹಾಜರಾದ ಬಗ್ಗೆ ಎಎಪಿ ಸಂಸದ ಸಂಜಯ್ ಸಿಂಗ್ ಅವರ ಪ್ರತಿಕ್ರೆಯೆ ಕೇಳಿದಾಗ "(ಸಭೆಯಲ್ಲಿ) ಹಾಜರಾಗುವುದು ಅಥವಾ ಹಾಜರಾಗದೇ ಇರುವುದು ಮುಖ್ಯವಲ್ಲ. ಸಂಸತ್ತಿನಲ್ಲಿ ಚರ್ಚೆ ನಡೆದಾಗಲೆಲ್ಲಾ, ನಾವು ರೈತರನ್ನು ಬೆಂಬಲಿಸುತ್ತಿದ್ದೇವೆ ಹಾಗೂ ವಿವಾದಿತ ಎಲ್ಲಾ ಮಸೂದೆಗಳನ್ನು ಸಹ ನಾವು ಬೆಂಬಲಿಸುತ್ತಿಲ್ಲ’’ ಎಂದಿದ್ದಾರೆ.


  ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ: "ನನ್ನ ದೃಷ್ಟಿಯಲ್ಲಿ ಒಂದೇ ಒಂದು ಮುಖ್ಯವಾದ ವಿಷಯವೆಂದರೆ ನಾವು ಆಡಳಿತ ಪಕ್ಷದ ಅನ್ಯಾಯದ ವಿರುದ್ದ ಬಲಗೊಳ್ಳುವುದು ಹಾಗೂ ಎಲ್ಲರನ್ನು ಒಂದುಗೂಡಿಸುವುದು. ಈ ಧ್ವನಿಯು (ಜನರ) ಎಷ್ಟು ಹೆಚ್ಚು ಒಗ್ಗೂಡುತ್ತದೆಯೋ, ಆಗ ಹೆಚ್ಚು ಶಕ್ತಿಯುತವಾಗುತ್ತದೆ, ಇದನ್ನು ನಿಗ್ರಹಿಸುವುದು ಬಿಜೆಪಿ-ಆರ್‌ಎಸ್‌ಎಸ್‌ಗೆ ಕಷ್ಟವಾಗುತ್ತದೆ’’.

  ಸಭೆಯ ನಂತರ, ಪ್ರತಿಪಕ್ಷ ನಾಯಕರು ಸಂಸತ್ತಿಗೆ ಸೈಕಲ್​ ತುಳಿದುಕೊಂಡು ಹೋದರು.

  ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19 ರಂದು ಆರಂಭವಾಗಿದ್ದು, ಮೊದಲ ಎರಡು ವಾರಗಳಲ್ಲಿ 107 ಗಂಟೆಗಳಲ್ಲಿ ಕೇವಲ 18 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿದೆ. ಪ್ರತಿಪಕ್ಷಗಳ ಅಡಚಣೆಗಳಿಂದಾಗಿ 133 ಕೋಟಿಗೂ ಹೆಚ್ಚು ತೆರಿಗೆದಾರರ ಹಣ ನೀರಿನಲ್ಲಿ ಹೋಮಮಾಡಿದಂತಾಗಿದೆ ಎಂದು ಸರ್ಕಾರಿ ಮೂಲಗಳು ಶನಿವಾರ ತಿಳಿಸಿವೆ.

  ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ದ ಕಾರ್ಯತಂತ್ರವನ್ನು ಹೆಣೆಯುತ್ತಿರುವ ಈ ಹೊತ್ತಿನಲ್ಲೆ, ಪ್ರಧಾನಿ ನರೇಂದ್ರ ಮೋದಿ ಅವರು ಸದನವನ್ನು ನಡೆಸಲು ಅನುಮತಿಸದ ವಿರೋಧದ ನಡವಳಿಕೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದರು. ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಸರ್ಕಾರ ಮತ್ತು ಸಂಸದರು ಸದನದ ಕಾರ್ಯಚಟುವಟಿಕೆಯನ್ನು ಖಚಿತಪಡಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತದೆ ಎಂದು ಹೇಳಿದ್ದಾರೆ.

  ಮೂಲಗಳ ಪ್ರಕಾರ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಮಧ್ಯಾಹ್ನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆದು ಚರ್ಚೆಗೆ ಅವಕಾಶ ನೀಡುವಂತೆ ಬೆಂಬಲ ಕೋರಿದ್ದಾರೆ.


  ಇದನ್ನೂ ಓದಿ: PM Modi- ಸಂಸತ್​ನಲ್ಲಿ ಗದ್ದಲ; ವಿಪಕ್ಷಗಳಿಂದ ಪ್ರಜಾತಂತ್ರಕ್ಕೆ ಅಪಮಾನ: ಪ್ರಧಾನಿ ಮೋದಿ ವ್ಯಗ್ರ

  ಪೆಗಾಸಸ್ ವಿವಾದವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಈ ಪೆಗಾಗಸ್​ ಗೂಡಚರ್ಯೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ನ್ಯಾಯಾಧೀಶರು, ಸಾಮಾಜಿಕ ಕಾರ್ಯಕರ್ತರು ಮತ್ತು ಸಚಿವರು ಕೂಡ ಇಸ್ರೇಲಿ ಸ್ಪೈವೇರ್‌ನ ಸಂಭಾವ್ಯ ಗುರಿಗಳಾಗಿದ್ದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: