ರಾಹುಲ್​ ಗಾಂಧಿ ಕೇರಳ ಪ್ರವಾಸ; ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ

news18
Updated:August 28, 2018, 12:29 PM IST
ರಾಹುಲ್​ ಗಾಂಧಿ ಕೇರಳ ಪ್ರವಾಸ; ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ
ಕೇರಳದ ನಿರಾಶ್ರಿತ ಕೇಂದ್ರ ಚೆಂಗನ್ನೂರ್​ ಗೆ ಭೇಟಿ ನೀಡಿ ಸಂತ್ರಸ್ಥರ ನೋವಿಗೆ ಸ್ಪಂದಿಸುತ್ತಿರುವ ರಾಹುಲ್ ಗಾಂಧಿ
news18
Updated: August 28, 2018, 12:29 PM IST
-ನ್ಯೂಸ್​ 18 ಕನ್ನಡ

ಕೇರಳ,(ಆ.28): ಪ್ರವಾಹದಿಂದ ತತ್ತರಿಸಿ ಹೋಗಿರುವ ದೇವರನಾಡು ಕೇರಳದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಕೇರಳದ ಅನೇಕ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ಥರ ನೋವಿಗೆ ಸ್ಪಂದಿಸಿದ್ದಾರೆ.


Loading...

 

ಇಂದು ಕೇರಳದ ರಾಜಧಾನಿ ತಿರುವನಂತಪುರಂಗೆ ಭೇಟಿ ನೀಡಿದ ಅವರು, ಪರಿಸ್ಥಿತಿಯನ್ನು ಅವಲೋಕಿಸಿದರು. ನಂತರ ಪ್ರವಾಹ ಪೀಡಿತ ಪ್ರದೇಶಗಳಾದ ಚೆಂಗನ್ನೂರ್​, ಆಲಪ್ಪಿ, ಅಂಗಮಲಿ ಮುಂತಾದ ನಿರಾಶ್ರಿತ ಕೇಂದ್ರಗಳಿಗೆ ತೆರಳಿ ಸಂತ್ರಸ್ಥರ ಜೊತೆ ಮಾತುಕತೆ ನಡೆಸಿದರು. ತಮ್ಮ ಪ್ರಾಣವನ್ನು ಪಣಕ್ಕಿಟ್ಟು  ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು ಸಾವಿರಾರು ಜನರನ್ನು ರಕ್ಷಿಸಿದ ಮೀನುಗಾರರು ಮತ್ತು ಸ್ವಯಂ ಸೇವಕರನ್ನು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್​ ನಾಯಕ ಶಶಿ ತರೂರ್​ ಏರ್​ಪೋರ್ಟ್​ಗೆ ತೆರಳಿ ರಾಹುಲ್ ಗಾಂಧಿಯನ್ನು ಬರಮಾಡಿಕೊಂಡರು. 2 ದಿನ ಕೇರಳ ಪ್ರವಾಸ ಕೈಗೊಳ್ಳುವುದಾಗಿ ಎಐಸಿಸಿ ಅಧ್ಯಕ್ಷ   ರಾಹುಲ್​ ಗಾಂಧಿ ಸೋಮವಾರ ಟ್ವೀಟ್​ ಮಾಡಿದ್ದರು. 

ಪ್ರವಾಹ ಪೀಡಿತ ಕೇರಳಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ವಿಪತ್ತನ್ನು ಘೋಷಿಸಬೇಕು ಎಂದು ಮನವಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಶೀಘ್ರ ನೆರವು ಎಂದು ಪ್ರವಾಹ ಪೀಡಿತ ಕೇರಳಕ್ಕೆ  500 ಕೋಟಿ ರೂ. ಪರಿಹಾರ ನಿಧಿ ಘೋಷಿಸಿದ್ದರು.

ದಶಕಗಳಲ್ಲೇ ಕಂಡು ಕೇಳರಿಯದ ಮಹಾಮಳೆಗೆ ಕೇರಳದ ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದರೆ, 400 ಕ್ಕೂ ಹೆಚ್ಚು ಜನ  ಬಲಿಯಾಗಿದ್ದರು. ಪ್ರವಾಹಕ್ಕೆ ಸಿಲುಕಿದ್ದ  ಸಾವಿರಾರು ಮಂದಿಯನ್ನು ನಿರಾಶ್ರಿತರ ತಾಣಗಳಿಗೆ ಸ್ಥಳಾಂತರಿಸಲಾಗಿತ್ತು.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...