ಮಾನಸ ಸರೋವರದಲ್ಲಿ ರಾಹುಲ್​ ಗಾಂಧಿ; ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಕಾಂಗ್ರೆಸ್​ ಅಧ್ಯಕ್ಷ

news18
Updated:September 7, 2018, 1:32 PM IST
ಮಾನಸ ಸರೋವರದಲ್ಲಿ ರಾಹುಲ್​ ಗಾಂಧಿ; ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಕಾಂಗ್ರೆಸ್​ ಅಧ್ಯಕ್ಷ
news18
Updated: September 7, 2018, 1:32 PM IST
ನ್ಯೂಸ್​18 ಕನ್ನಡ

ಮಾನಸ ಸರೋವರ (ಸೆ. 7): ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅಲ್ಲಿನ ಪ್ರವಾಸಿಗರ ಜೊತೆಗೆ ತೆಗೆಸಿಕೊಂಡಿರುವ ಫೋಟೋ, ವಿಡಿಯೋಗಳು ಈಗ ವೈರಲ್​ ಆಗಿವೆ.

ಕೈಲಾಸ ಮಾನಸ ಸರೋವರದಲ್ಲಿ ರಾಹುಲ್​ ಗಾಂಧಿ ಅವರ ಅಭಿಮಾನಿಗಳು ಅವರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಟ್ವಿಟ್ಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಸಾಧ್ವಿ ಖೋಸ್ಲಾ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ರಾಹುಲ್​ ಗಾಂಧಿ ಅವರ ಫೋಟೋ, ವಿಡಿಯೋವನ್ನು ಪೋಸ್ಟ್​ ಮಾಡಿದ್ದು, 'ಮಹಾಶಿವ ಸದಾ ನಿಮ್ಮೊಂದಿಗಿದ್ದಾನೆ' ಎಂದು ರಾಹುಲ್​ ಗಾಂಧಿ ಅವರಿಗೆ ಟ್ಯಾಗ್​ ಮಾಡಿದ್ದಾರೆ.

 




ಚುನಾವಣೆ ಹತ್ತಿರ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ರಾಹುಲ್ ಗಾಂಧಿಯವರಿಗೆ ದೇವರ ನೆನಪಾಗಿದೆ. ಬಿಜೆಪಿಯನ್ನು ಕೋಮುವಾದಿ ಎಂದು ಕರೆಯುವ ರಾಹುಲ್​ ಇದೀಗ ಮಾನಸ ಸರೋವರ ಯಾತ್ರೆಗೆ ತೆರಳಿದ್ದಾರೆ ಎಂದು ಬಿಜೆಪಿ ಟೀಕೆ ಮಾಡಿತ್ತು.

 



 



ರಾಹುಲ್​ ಮಾನಸ ಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಬಿತ್ತರವಾಗಿತ್ತೇ ಹೊರತು ಯಾವುದೇ ದಾಖಲೆಗಳು ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ಮಾನಸ ಸರೋವರದ ಸುತ್ತಮುತ್ತ ತೆಗೆಸಿಕೊಂಡಿರುವ ಫೋಟೋ, ವಿಡಿಯೋಗಳು ಸಿಕ್ಕಿವೆ. ಆದರೆ, ಈ ಫೋಟೋಗಳು ಫೇಕ್​ ಎಂದು ಕೇಂದ್ರ ಸರ್ಕಾರದ ಸಚಿವ ಗಿರಿರಾಜ್​ ಸಿಂಗ್​ ಕೂಡ ಇದನ್ನು ಫೋಟೋಶಾಪ್​ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

 

First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ