ಸಮಸ್ಯೆಗಳನ್ನು ಒಪ್ಪಿಕೊಳ್ಳುವುದು ಉತ್ತಮ ಆರಂಭ; ಮೋದಿ ಸರ್ಕಾರದ ಕಾಲೆಳೆದ ರಾಹುಲ್​ ಗಾಂಧಿ

ಭಿನ್ನ ರೀತಿಯ ಆರ್ಥಿಕ ಸಂಕಷ್ಟಕ್ಕೆ ನಾವು ಪ್ರವೇಶಿಸಿದ್ದೇವೆ. ರಚನಾತ್ಮಕ ಮತ್ತು ಆವರ್ತಕ ಎರಡರಿಂದಲೂ  ದೀರ್ಘಕಾಲ ಆರ್ಥಿಕ ಕುಸಿತವಾಗುತ್ತಿದೆ. ಈ ಸಂಕಷ್ಟವನ್ನು ಒಪ್ಪಿಕೊಂಡು ಅದನ್ನು ಎದುರಿಸಬೇಕಿದೆ -ಮನಮೋಹನ್​ ಸಿಂಗ್​​

Seema.R | news18-kannada
Updated:September 12, 2019, 2:36 PM IST
ಸಮಸ್ಯೆಗಳನ್ನು ಒಪ್ಪಿಕೊಳ್ಳುವುದು ಉತ್ತಮ ಆರಂಭ; ಮೋದಿ ಸರ್ಕಾರದ ಕಾಲೆಳೆದ ರಾಹುಲ್​ ಗಾಂಧಿ
ರಾಹುಲ್​​ ಗಾಂಧಿ
  • Share this:
ನವದೆಹಲಿ (ಸೆ.12): ಪ್ರಸ್ತುತ ಆರ್ಥಿಕ ಕುಸಿತತೆಯನ್ನು ಮರೆಮಾಚುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ತಿರುಚಿದ ಸುದ್ದಿಯನ್ನು ಪ್ರಸಾರ ಮಾಡುತ್ತಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟರ್​ನಲ್ಲಿ ಹರಿಹಾಯ್ದಿರುವ ಅವರು, ಪ್ರಚಾರ ಹಾಗೂ ತಿರುಚಿದ ಸುದ್ದಿಯನ್ನು ಭಾರತ ನಿರೀಕ್ಷಿಸುವುದಿಲ್ಲ. ಮಿಲೆನಿಯರ್​ ಬಗ್ಗೆಗಿನ ಮೂರ್ಖ ಸಿದ್ಧಾಂತವು ನಮಗೆ ಬೇಡ ಎಂದು ಪರೋಕ್ಷವಾಗಿ ನಿರ್ಮಲಾ ಸೀತಾರಾಮನ್​ ವಿರುದ್ಧ ಕೂಡ ಹರಿಹಾಯ್ದಿದ್ದಾರೆ.

ರಾಹುಲ್​ ಟ್ವೀಟ್​​


ಸುಳ್ಳು ಹಾಗೂ ಪ್ರಚಾರ ಬದಲು ಆರ್ಥಿಕತೆ ಕುಸಿತದ ಸಮಸ್ಯೆಗಳನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಲು ಮುಂದಾಗುವುದು ಮುಖ್ಯ ಎಂದರು.

ಇನ್ನು ತಮ್ಮ ಟ್ವೀಟ್​ ಜೊತೆ ಭಾರತದ ಆರ್ಥಿಕತೆಯ ಕುರಿತು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಸಂದರ್ಶನವನ್ನು ಅವರು ಶೇರ್​ ಮಾಡಿದ್ದಾರೆ.

ಇದನ್ನು ಓದಿ: ಜಯಲಲಿತಾ ಸಮಾಧಿಯನ್ನೇ ಮದುವೆ ಮಂಟಪ ಮಾಡಿಕೊಂಡ ಎಐಎಡಿಎಂಕೆ ನಾಯಕ

ಆರ್ಥಿಕತೆ ಕುರಿತು ಮಾತನಾಡಿರುವ ಮನಮೋಹನ್​ ಸಿಂಗ್​, ವಿಭಿನ್ನ ರೀತಿಯ ಆರ್ಥಿಕ ಸಂಕಷ್ಟಕ್ಕೆ ನಾವು ಪ್ರವೇಶಿಸಿದ್ದೇವೆ. ರಚನಾತ್ಮಕ ಮತ್ತು ಆವರ್ತಕ ಎರಡರಿಂದಲೂ  ದೀರ್ಘಕಾಲ ಆರ್ಥಿಕ ಕುಸಿತ ಉಂಟಾಗಿದೆ. ಈ ಸಂಕಷ್ಟವನ್ನು ಒಪ್ಪಿಕೊಂಡು ಅದನ್ನು ಎದುರಿಸಬೇಕಿದೆ ಎಂದರು.ಜೂನ್​ನಲ್ಲಿ ಭಾರತದ ಆರ್ಥಿಕತೆಯ ಜಿಡಿಪಿ ದರ ಶೇ.5ಕ್ಕೆ ಕುಸಿದಿದೆ. ಆರ್ಥಿಕತೆ ಕುಸಿತದಿಂದ ಖಾಸಗಿ ಹೂಡಿಕೆ ಮತ್ತು ಆಟೋಮೊಬೈಲ್​ಗಳು ಸಂಕಷ್ಟದ ಸ್ಥಿತಿಗೆ ತಲುಪಿದೆ.

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading