Rahul Gandhi: ರೈತರ ಸಾಲ ಮನ್ನಾ, ಉಚಿತ ವಿದ್ಯುತ್, 500 ರೂಪಾಯಿಗೆ ಗ್ಯಾಸ್! ಮತದಾರರಿಗೆ ರಾಹುಲ್ ಗಾಂಧಿ ಭರವಸೆ

ಮುಂಬರುವ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ 3 ಲಕ್ಷ ರೂಪಾಯಿವರೆಗಿನ  ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಘೋಷಿಸಿದ್ದಾರೆ. ಅಹಮದಾಬಾದ್‌ನಲ್ಲಿ ಇಂದು ಆಯೋಜಿಸಿದ್ದ ಗುಜರಾತ್ ಚುನಾವಣೆಯ ಕಾಂಗ್ರೆಸ್ ಸಂಕಲ್ಪ ಸಮಾವೇಶದ ಪ್ರಯುಕ್ತ ಅವರು ಬೂತ್ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಮಾತನ್ನಾಡಿದರು.

ಎಐಸಿಸಿ ನಾಯಕ ರಾಹುಲ್ ಗಾಂಧಿ

ಎಐಸಿಸಿ ನಾಯಕ ರಾಹುಲ್ ಗಾಂಧಿ

  • Share this:
ಅಹ್ಮದಾಬಾದ್, ಗುಜರಾತ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ತವರು ಗುಜರಾತ್‌ನಲ್ಲಿ (Hometown Gujarat) ವಿಧಾನಸಭಾ ಚುನಾವಣೆ (Assembly Election) ರಂಗೇರುತ್ತಿದೆ. ಶತಾಯಗತಾಯ ಅಧಿಕಾರಕ್ಕೆ ಬರಲೇಬೇಕು ಅಂತ ಬಿಜೆಪಿ (BJP) ಹೊಸ ಹೊಸ ತಂತ್ರ ಹೂಡುತ್ತಿದೆ. ಮತ್ತೊಂದೆಡೆ ಬಿಜೆಪಿಗೆ ಅಧಿಕಾರ ತಪ್ಪಿಸಬೇಕು ಅಂತ ಕಾಂಗ್ರೆಸ್‌ (Congress) ಶತಪ್ರಯತ್ನ ಮಾಡುತ್ತಿದೆ. ಈ ನಡುವೆ ದೆಹಲಿ (Delhi) ಹಾಗೂ ಪಂಜಾಬ್‌ನಲ್ಲಿ (Punjab) ಅಧಿಕಾರ ಗದ್ದುಗೆ ಹಿಡಿದಿರುವ ಆಮ್ ಆದ್ಮಿ ಪಾರ್ಟಿ (Aam Aadmi Party), ಗುಜರಾತ್‌ನಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ಲ್ಯಾನ್ ಮಾಡಿದೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಗುಜರಾತ್ ಮತದಾರರಿಗಾಗಿ ಕಾಂಗ್ರೆಸ್ ಪ್ರಣಾಳಿಕೆಯನ್ನು (Congress Manifesto) ರಿಲೀಸ್ ಮಾಡಿದ್ದಾರೆ. ರೈತರ 3 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ, 500 ರೂಪಾಯಿಗೆ ಅಡುಗೆ ಅನಿಲ ಪೂರೈಕೆ ಸೇರಿದಂತೆ ಮತದಾರರಿಗೆ ತರಹೇವಾರಿ ಯೋಜನೆಗಳ ಘೋಷಣೆ ಮಾಡಿದ್ದಾರೆ.    

 ರೈತರ 3 ಲಕ್ಷ ರೂಪಾಯಿ ಸಾಲ ಮನ್ನಾ

ಮುಂಬರುವ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ 3 ಲಕ್ಷ ರೂಪಾಯಿವರೆಗಿನ  ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಘೋಷಿಸಿದ್ದಾರೆ. ಅಹಮದಾಬಾದ್‌ನಲ್ಲಿ ಇಂದು ಆಯೋಜಿಸಿದ್ದ ಗುಜರಾತ್ ಚುನಾವಣೆಯ ಕಾಂಗ್ರೆಸ್ ಸಂಕಲ್ಪ ಸಮಾವೇಶದ ಪ್ರಯುಕ್ತ ಅವರು ಬೂತ್ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಮಾತನ್ನಾಡಿದರು.

ರೈತರಿಗೆ ಉಚಿತ ವಿದ್ಯುತ್, ಜನಸಾಮಾನ್ಯರಿಗೆ 300 ಯೂನಿಟ್ ಫ್ರೀ

ಇನ್ನು ಗುಜರಾತ್ ರಾಜ್ಯದ ರೈತರಿಗೆ ಉಚಿತವಾಗಿ ವಿದ್ಯುತ್ ಪೂರೈಸುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಇದರ ಜೊತೆಗೆ ಜನಸಾಮಾನ್ಯರಿಗೆ ಉಚಿತವಾಗಿ 300 ಯೂನಿಟ್ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Hemant Soren: ಜಾರ್ಖಂಡ ಸಿಎಂ ಹೇಮಂತ್ ಸೊರೆನ್ ಕುರ್ಚಿ ಭದ್ರ; ಬಹುಮತ ಸಾಬೀತು

500 ರೂಪಾಯಿಗೆ ಅಡುಗೆ ಸಿಲಿಂಡರ್

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗುಜರಾತ್ ಜನಕ್ಕೆ ಗರಿಷ್ಠ 500 ರೂಪಾಯಿಗೆ ಒಂದು ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ. ಗುಜರಾತ್‌ನ ಜನರಿಗೆ 10 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ, 3,000 ಆಂಗ್ಲ ಮಾಧ್ಯಮ ಶಾಲೆಗಳ ನಿರ್ಮಾಣ ಮತ್ತು ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಭರವಸೆಗಳನ್ನು ನೀಡಿದರು.

ಬಿಜೆಪಿ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ಇದೇ ವೇಳೆ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಗುಡುಗಿದರು. ಬಿಜೆಪಿ ಒಂದು ಕಡೆ ಸರ್ದಾರ್ ಪಟೇಲ್ ಅವರ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಿಸಿದೆ. ಇನ್ನೊಂದು ಕಡೆ ಅದು ಅವರಿಗೆ ಅವಮಾನ ಮಾಡಿದೆ. ಸರ್ದಾರ್ ಪಟೇಲ್ ಯಾರಿಗಾಗಿ ಮತ್ತು ಏಕೆ ಹೋರಾಡಿದರು? ನೀವು ಅವರ ಪ್ರತಿಮೆಯನ್ನು ನಿರ್ಮಿಸಿದ್ದೀರಿ, ಆದರೆ ಅವರು ಕೇವಲ ಮನುಷ್ಯನಲ್ಲ, ಅವರು ಗುಜರಾತ್ ಮತ್ತು ಭಾರತದ ರೈತರ ಧ್ವನಿಯಾಗಿದ್ದರು, ಅವರು ಗುಜರಾತ್ ಮತ್ತು ಭಾರತದ ರೈತರ ಅನುಕೂಲಕ್ಕಾಗಿ ಶ್ರಮಿಸಿದ್ದರು, ಆದರೆ ಬಿಜೆಪಿ ಸರ್ಕಾರ ರೈತರನ್ನು ತುಳಿಯುತ್ತಿದೆ ಅಂತ ಕಿಡಿಕಾರಿದ್ರು.

ಇದನ್ನೂ ಓದಿ: Teachers' Day 2022: ಶಿಕ್ಷಕರ ಶ್ರಮ ಶ್ಲಾಘಿಸಿದ ಪ್ರಧಾನಿ ಮೋದಿ; ಪ್ರಶಸ್ತಿ ವಿಜೇತರೊಂದಿಗೆ ಸಂವಾದ

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸಮಾವೇಶ

ಇನ್ನು ಇದಕ್ಕೂ ಮುನ್ನ ನವದೆಹಲಿಯಲ್ಲಿ ಆಯೋಜಿಸಿದ್ದ ಬೆಲೆ ಏರಿಕೆ ವಿರುದ್ಧ ದನಿ ಏರಿಕೆ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ದ್ವೇಷ ಮತ್ತು ಕ್ರೋಧ ಹೆಚ್ಚಾಗುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರು ಉದ್ದೇಶಪೂರ್ವಕವಾಗಿ ದ್ವೇಷ ಹರಡುತ್ತಿದ್ದಾರೆ ಎಂದು ಆರೋಪಿಸಿದ್ದರು.
Published by:Annappa Achari
First published: