Rahul Gandhi: ತಮ್ಮ ಹುಟ್ಟುಹಬ್ಬ ಆಚರಿಸದಂತೆ ರಾಹುಲ್ ಗಾಂಧಿ ಮನವಿ! ಕಾರಣ ಏನು ಗೊತ್ತಾ?

ರಾಹುಲ್ ಗಾಂಧಿ

ರಾಹುಲ್ ಗಾಂಧಿ

"ಅಗ್ನಿಪಥ್ ಯೋಜನೆಯಿಂದ ಕೋಟ್ಯಂತರ ಯುವಕರು ದುಃಖದಲ್ಲಿದ್ದಾರೆ. ಅಂತಹ ಯುವಕರು, ಮತ್ತವರ ಕುಟುಂಬಗಳ ನೋವುಗಳನ್ನು ಹಂಚಿಕೊಳ್ಳೋಣ. ಆ ನಿರುದ್ಯೋಗಿ ಯುವಕರ ಜೊತೆ ನಿಲ್ಲೋಣ' ಎಂದು ರಾಹುಲ್ ಗಾಂಧಿ ಮನವಿ ಮಾಡಿರುವುದಾಗಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

  • Share this:

ನವದೆಹಲಿ, ಜೂ. 19: ಕೇಂದ್ರ ಸರ್ಕಾರವು ಹೊಸದಾಗಿ ಮಿಲಿಟರಿ ನೇಮಕಾತಿಗಾಗಿ ರೂಪಿಸಿರುವ ಅಗ್ನಿಪಥ (Agnipath) ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿದೆ. ನಿರುದ್ಯೋಗಿ ಯುವಕರು, ಪೂರ್ಣಾವಧಿಗೆ ಸೇನೆ ಸೇರಬೇಕೆಂದು ಕನಸು ಕಂಡಿದ್ದ ಯುವಕರು ಮತ್ತವರ ಕುಟುಂಬದವರು ಈಗ ಆಕ್ರೋಶಭರಿತರಾಗಿದ್ದು ಇದರ ಪರಿಣಾಮವಾಗಿ ಕೆಲವು ಕಡೆ ಹಿಂಸಾಚಾರ, ಸಾವು, ನೋವು, ಸಾರ್ವಜನಿಕ ಆಸ್ತಿಗಳ ನಷ್ಟವಾಗಿದೆ. ಕಾಂಗ್ರೆಸ್ ಪಕ್ಷ (Congress Party) ಕೂಡ ಯುವಕರ ಅಳಲಿಗೆ ದನಿಗೂಡಿಸಿ ಇಂದು ದೆಹಲಿಯಲ್ಲಿ (Delhi) ಸತ್ಯಾಗ್ರಹ ನಡೆಸಲಿದೆ. ಅಷ್ಟೇ ಅಲ್ಲದೆ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಂಭ್ರಮಾಚರಣೆ ಬೇಡ ಎಂದಿದ್ದಾರೆ. “ಯುವಕರು ಸಂಕಷ್ಟದಲ್ಲಿರುವಾಗ ತಮ್ಮ ಹುಟ್ಟುಹಬ್ಬದ ಹಬ್ಬದ ಸಂಭ್ರಮಾಚರಣೆ ಬೇಡ” ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.


“ಯುವಕರ ನೋವು ಹಂಚಿಕೊಳ್ಳೋಣ”


ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಜೈರಾಮ್ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ 'ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆ ಬೇಡ. ನಾವೆಲ್ಲರೂ ದೇಶ ಈಗ ಎದುರಿಸುತ್ತಿರುವ ಕಷ್ಟದ ಪರಿಸ್ಥಿತಿ ಬಗ್ಗೆ ಚಿಂತಿಸಬೇಕಾಗಿದೆ. ಅಗ್ನಿಪಥ್ ಯೋಜನೆಯಿಂದ ಕೋಟ್ಯಂತರ ಯುವಕರು ದುಃಖದಲ್ಲಿದ್ದಾರೆ. ಅಂತಹ ಯುವಕರು ಮತ್ತವರ ಕುಟುಂಬಗಳ ನೋವುಗಳನ್ನು ಹಂಚಿಕೊಳ್ಳೋಣ. ಆ ನಿರುದ್ಯೋಗಿ ಯುವಕರ ಜೊತೆ ನಿಲ್ಲೋಣ' ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.


ಅಗ್ನಿಪಥ್ ವಿರೋಧಿಸಿ ಕಾಂಗ್ರೆಸ್ ಸತ್ಯಾಗ್ರಹ


ಇದಲ್ಲದೆ ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಮುಂದುವರೆದಿದ್ದು ಇಂದು ಕಾಂಗ್ರೆಸ್ ವತಿಯಿಂದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ದೆಹಲಿಯ ಜಂತರ್ ಮಂತರ್ ನಲ್ಲಿ ಇಂದು ಬೆಳಿಗ್ಗೆ 10ಗಂಟೆಗೆ ಪ್ರತಿಭಟನೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು, ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸದಸ್ಯರು ಹಾಗೂ ಎಐಸಿಸಿ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.


ಇದನ್ನೂ ಓದಿ: Agnipath: ಒಂದೆಡೆ ಹೊತ್ತಿ ಉರಿಯುತ್ತಿರುವ 'ಅಗ್ನಿ', ಮತ್ತೊಂದೆಡೆ ಮೀಸಲಾತಿ! ಅಗ್ನಿವೀರರಿಗೆ ಕೇಂದ್ರದಿಂದ ಗುಡ್‌ ನ್ಯೂಸ್


ಶಾಂತಿ ಕಾಪಾಡುವಂತೆ ಸೋನಿಯಾ ಗಾಂಧಿ ಮನವಿ


ಅಗ್ನಿಪಥ್ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾರೂಪ ತಳೆದಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿಭಟನಾಕಾರರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. “ಕೇಂದ್ರ ಸರ್ಕಾರವು ನಿಮ್ಮ ಧ್ವನಿಯನ್ನು ನಿರ್ಲಕ್ಷಿಸಿ ಅಗ್ನಿಪಥ್ ಯೋಜನೆಯನ್ನು ಘೋಷಿಸಿರುವ ಬಗ್ಗೆ ನನಗೆ ಬೇಸರವಾಗಿದೆ. ಆದರೂ ಶಾಂತಿಯುತವಾಗಿ ಪ್ರತಿಭಟಿಸುವಂತೆ ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಮ್ಮ ಜೊತೆ ಇರಲಿದೆ” ಎಂದು ಸೋನಿಯಾ ಗಾಂಧಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Agneepath Protest: ದೇಶಾದ್ಯಂತ ‘ಅಗ್ನಿ’ಯ ಆಕ್ರೋಶ; ಕೇಂದ್ರ ನಿಮ್ಮ ದನಿ ಕೇಳುತ್ತಿಲ್ಲ, ಆದರೆ ನಾವಿದ್ದೇವೆ: ಸೋನಿಯಾ


“ನಿಮ್ಮೊಂದಿಗೆ ನಾವಿದ್ದೇವೆ” ಎಂದ ಸೋನಿಯಾ ಗಾಂಧಿ


ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಂದಾಗಿ ದೆಹಲಿಯ ಗಂಗಾ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 75 ವರ್ಷದ ಸೋನಿಯಾ ಗಾಂಧಿ ಅವರು ನೋವಿನಲ್ಲೂ ಜವಾಬ್ದಾರಿ ಮೆರೆದಿದ್ದಾರೆ. 'ಸೈನ್ಯದಲ್ಲಿ ಲಕ್ಷಗಟ್ಟಲೆ ಹುದ್ದೆಗಳು ಖಾಲಿ ಇದ್ದು ಮೂರು ವರ್ಷಗಳಿಂದ ನೇಮಕಾತಿ ಮಾಡಿಲ್ಲ. ಯುವಕರ ಈ ನೋವನ್ನು ಅರ್ಥಮಾಡಿಕೊಳ್ಳಬಹುದು. ವಾಯುಪಡೆ ಸೇರ್ಪಡೆಗಾಗಿ ಪರೀಕ್ಷೆ ನಡೆದು ಫಲಿತಾಂಶ ಹೊರಬರುವ ಮುನ್ನವೇ ಅಗ್ನಿಪಥ್ ಯೋಜನೆ ಮಾಡಲಾಗುತ್ತಿದೆ. ನಿರುದ್ಯೋಗಿ ಯುವಕರ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ. ಕಾಂಗ್ರೆಸ್ ಪೂರ್ಣ ಶಕ್ತಿಯೊಂದಿಗೆ ನಿಮ್ಮೊಂದಿಗೆ ನಿಂತಿದೆ ಮತ್ತು ನಿಮ್ಮ ಹಿತಾಸಕ್ತಿಗಳಿಗಾಗಿ ಮತ್ತು ಈ ಯೋಜನೆಯನ್ನು ಹಿಂಪಡೆಯಲು ಹೋರಾಟ ಮಾಡುವ ಭರವಸೆ ನೀಡುತ್ತಿದ್ದೇನೆ' ಎಂದಿದ್ದಾರೆ.

top videos
    First published: