ನೀವು ಇಲ್ಲಿರುವುದಕ್ಕಿಂತ ಇಟಲಿಗೆ ವಾಪಾಸ್​ ಹೋಗುವುದೇ ಒಳ್ಳೆಯದು; ರಾಹುಲ್ ಗಾಂಧಿ​ ವಿರುದ್ಧ ರೈತರ ಆಕ್ರೋಶ

ಅಮೇಥಿಯ ಸಾಮ್ರಾಟ್​ ಸೈಕಲ್​ ಫ್ಯಾಕ್ಟರಿ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತರು ಕಾಂಗ್ರೆಸ್​ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಶೇಷವೇನೆಂದರೆ ಯಾವ ಫ್ಯಾಕ್ಟರಿ ಮುಂದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೋ ಆ ಫ್ಯಾಕ್ಟರಿಯನ್ನು ಮಾಜಿ ಪ್ರಧಾನಿ ರಾಜೀವ್​ ಗಾಂಧಿಯವರೇ ಉದ್ಘಾಟನೆ ಮಾಡಿದ್ದರು.

sushma chakre | news18
Updated:January 24, 2019, 3:50 PM IST
ನೀವು ಇಲ್ಲಿರುವುದಕ್ಕಿಂತ ಇಟಲಿಗೆ ವಾಪಾಸ್​ ಹೋಗುವುದೇ ಒಳ್ಳೆಯದು; ರಾಹುಲ್ ಗಾಂಧಿ​ ವಿರುದ್ಧ ರೈತರ ಆಕ್ರೋಶ
ರಾಹುಲ್ ಗಾಂಧಿ
sushma chakre | news18
Updated: January 24, 2019, 3:50 PM IST
ಅಮೇಥಿ (ಜ. 24): 'ನಮಗೆ ನಿಮ್ಮ ಮೇಲೆ ಬಹಳ ಬೇಸರವಿದೆ. ನೀವು ನಮ್ಮ ದೇಶದಲ್ಲಿರುವುದಕ್ಕಿಂತ ಇಟಲಿಗೆ ವಾಪಾಸ್​ ಹೋಗುವುದೇ ಒಳ್ಳೆಯದು. ನಿಮಗೆ ನಮ್ಮ ದೇಶದಲ್ಲಿರಲು ಅರ್ಹತೆಯಿಲ್ಲ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ​ ವಿರುದ್ಧ ಅಮೇಥಿಯ ರೈತರು ಆಕ್ರೋಶ ಹೊರಹಾಕಿದ್ದಾರೆ.

ಉತ್ತರಪ್ರದೇಶದ ಅಮೇಥಿಯ ಗೌರಿಗಂಜ್​ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಜೀವ್​ ಗಾಂಧಿ ಫೌಂಡೇಷನ್​ಗೆ ರೈತರ ಜಾಗವನ್ನು ಕಿತ್ತುಕೊಳ್ಳಲಾಗಿದೆ. ಆ ಜಮೀನನ್ನು ವಾಪಾಸ್​ ನೀಡಲಿ. ನಮ್ಮ ಜಮೀನನ್ನು ಕಿತ್ತುಕೊಂಡ ರಾಹುಲ್ ಗಾಂಧಿಗೆ ನಮ್ಮ ಊರಿಗೆ ಬರುವ ಯೋಗ್ಯತೆಯಿಲ್ಲ ಎಂದು ತಮ್ಮ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ರಮೇಶ್​ ಜಿಗಜಿಣಗಿ ಹ್ಯಾಟ್ರಿಕ್​ ಗೆಲುವಿಗೆ ಬ್ರೇಕ್​ ಹಾಕಲಿದೆಯೇ ಕಾಂಗ್ರೆಸ್​?

ನಿನ್ನೆ ಗೌರಿಗಂಜ್​ಗೆ ಚುನಾವಣಾ ಅಭಿಯಾನಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿಗೆ ಇದರಿಂದ ತೀವ್ರ ಮುಜುಗರ ಉಂಟಾಗಿದ್ದು, ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಮೇಥಿಯ ಸಾಮ್ರಾಟ್​ ಸೈಕಲ್​ ಫ್ಯಾಕ್ಟರಿ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತರು ಕಾಂಗ್ರೆಸ್​ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಶೇಷವೇನೆಂದರೆ ಯಾವ ಫ್ಯಾಕ್ಟರಿ ಮುಂದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೋ ಆ ಫ್ಯಾಕ್ಟರಿಯನ್ನು ಮಾಜಿ ಪ್ರಧಾನಿ ರಾಜೀವ್​ ಗಾಂಧಿಯವರೇ ಉದ್ಘಾಟನೆ ಮಾಡಿದ್ದರು. ಇದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ರಾಜೀವ್ ಗಾಂಧಿ ಈ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮತದಾನದಲ್ಲಿ ಬ್ಯಾಲೆಟ್​ ಪೇಪರ್​ ಬಳಸುವುದಿಲ್ಲ; ಚುನಾವಣಾ ಆಯೋಗ ಸ್ಪಷ್ಟನೆ

ಈ ಮೊದಲು ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಕಾರ್ಪೋರೇಷನ್​ಗೆ ಜೈನ್​ ಸಹೋದರರು ಜಾಗವನ್ನು ಲೀಸ್​ ನೀಡಿದ್ದರು. ಆದರೆ, ಲೀಸ್​ನ ಅವಧಿ ಮುಗಿದ ಬಳಿಕ  ಆ ಜಾಗವನ್ನು ಯುಪಿಎಸ್​ಐಡಿಸಿಗೆ ವಾಪಾಸ್​ ನೀಡಬೇಕೆಂದು 2015ರಲ್ಲಿ ಅಮೇಥಿಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ ಆದೇಶ ನೀಡಿತ್ತು. ಆ ಆದೇಶದ ನಂತರವೂ ರಾಜೀವ್​ ಗಾಂಧಿ ಚಾರಿಟಬಲ್ ಟ್ರಸ್ಟ್​ ಆ ಜಾಗವನ್ನು ಆಕ್ರಮಿಸಿಕೊಂಡಿತ್ತು. ರೈತರ ಜಮೀನನ್ನು ಫೌಂಡೇಷನ್​ ಹೆಸರಿನಲ್ಲಿ ವಶಪಡಿಸಿಕೊಂಡಿದೆ ಎಂದು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಕೂಡ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
Loading...

First published:January 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...