ಜಲಿಯನ್​ ವಾಲಾಬಾಗ್​ ಸ್ಮಾರಕ ನವೀಕರಣಕ್ಕೆ ಆಕ್ಷೇಪ; ಇಂತಹ ಅಪಮಾನ ಸಹಿಸಲ್ಲ ಎಂದ ರಾಹುಲ್​ ಗಾಂಧಿ

Jallianwala Bagh renovation: ಜಲಿಯನ್​ ವಾಲಾಬಾಗ್​ ಸ್ಮಾರಕ ನವೀಕರಣಕ್ಕೆ ಮುಂದಾಗಿರುವ ಕೇಂದ್ರದ ನಿರ್ಧಾರಕ್ಕೆ ಅನೇಕ ವಿಪಕ್ಷ ನಾಯಕರು , ಶಿಕ್ಷಣ ತಜ್ಞರು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

 • Share this:
  ನವದೆಹಲಿ (ಆ. 31): ಜಲಿಯನ್​ ವಾಲಾಬಾಗ್ (Jallianwala Bagh )​ ಸ್ಮಾರಕವನ್ನು ನವೀಕರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕಾರ್ಯಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ( Rahul Gandhi) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್​ ಮೂಲಕ ಆಕ್ರೋಶ ಹೊರ ಹಾಕಿರುವ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡದವರು ಹುತಾತ್ಮರ ಮಗ ಎಂದು ಹೇಳಿಕೊಳ್ಳುತ್ತಾರೆ. ಇಂತಹ ಅಪಮಾನವನ್ನು ಎಂದಿಗೂ ಸಹಿಸುವುದಿಲ್ಲ. ಹುತಾತ್ಮರ ಅರ್ಥವನ್ನು ತಿಳಿಯದವರ ಮಾತ್ರ ಜಲಿಯನ್​ ವಾಲಾಬಾಗ್​ ಹುತಾತ್ಮರಿಗೆ ಇಂತಹ ಅವಮಾನ ಮಾಡುತ್ತಾರೆ. ನಾನು ಹುತಾತ್ಮರ ಮಗನಾಗಿ ಇಂತಹ ಅಪಮಾನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ

  ಈ ಕುರಿತು ಇಂಗ್ಲೀಷ್​ ಮತ್ತು ಹಿಂದಿ ಭಾಷೆಗಳಲ್ಲಿ ಟ್ವೀಟ್​ ಮಾಡಿರುವ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡದವರಿಗೆ ಅದಕ್ಕಾಗಿ ಹೋರಾಟ ಮಾಡಿದವರ ಭಾವನೆಗಳು ಅರ್ಥವಾಗುವುದಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.  ಸ್ವಾತಂತ್ರ್ಯ ಹೋರಾಟದ ಹೆಗ್ಗುರುತಾಗಿರುವ ಜಲಿಯನ್​ ವಾಲಾಬಾಗ್ ಸ್ಮಾರಕ ನವೀಕರಿಸುವ ಕುರಿತು ಕೆಲದಿನಗಳ ಹಿಂದೆ ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಪ್ರಧಾನಿಗಳ ಈ ನಿರ್ಧಾರಕ್ಕೆ ಸಾರ್ವಜನಿಕರು ಸೇರಿದಂಥೆ ಅನೇಕ ವಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಯನಾಡು ಸಂಸದ ಕೂಡ ಪ್ರಧಾನಿ ಅವರ ಈ ಮಾತಿನ ಹೇಳಿಕೆಯನ್ನು ತಮ್ಮ ಟ್ವೀಟ್​ನಲ್ಲಿ ಟ್ಯಾಗ್​ ಮಾಡಿ ಪ್ರಧಾನಿಗಳ ನಿರ್ಧಾರವನ್ನು ಖಂಡಿಸಿದ್ದಾರೆ

  ಈ ಬಗ್ಗೆ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿಪಿಎಂ ನಾಯಕ ಸೀತಾರಾಮ್​ ಯೆಚೂರಿ, ಸ್ವಾತಂತ್ರ್ಯ ಹೋರಾಟದ ಮಹಾ ಸಂಗ್ರಾಮದಿಂದ ದೂರ ಉಳಿದವರು ಈ ರೀತಿ ಮಾಡಬಹುದು ಎಂದು ಆಕ್ಷೇಪಿಸಿದ್ದಾರೆ

  ಇದನ್ನು ಓದಿ: ಚಿನ್ನ ಗೆದ್ದ ಅವನಿ ಲೇಖರಾಗೆ 'ವಿಶೇಷ SUV' ಉಡುಗೊರೆ ಘೋಷಿಸಿದ ಆನಂದ್​ ಮಹೀಂದ್ರಾ

  ಮತ್ತೊಬ್ಬ ಕಾಂಗ್ರೆಸ್​ ಸಂಸದ ಗೌರವ್​ ಗೊಗೊಯಿ ಈ ಸಂಬಂಧ ಟ್ವೀಟ್​ ಮಾಡಿ, ನನ್ನನ್ನು ಸಾಂಪ್ರದಾಯಿಕ ಭಾರತೀಯ ಎಂದು ಕರೆಯಿರಿ. ಆದರೆ ನಾನು ನಮ್ಮ ಘನತೆಯ ಪ್ರತೀಕವಾಗಿರುವ ಸ್ಥಳಗಳಲ್ಲಿ ಡಿಸ್ಕೋ ಲೈಟ್​ಗಳನ್ನು ಅಳವಡಿಸುವುದಿಲ್ಲ. ಜಲಿಯನ್​ ವಾಲಾಬಾಗ್​ನಲ್ಲಿ ನಡೆದ ಭೀಕರತೆಯನ್ನು ಇಂತಹ ಅಡಂಬರದ ವರ್ತನೆಗಳು ಕಡಿಮೆಗೊಳಿಸುತ್ತದೆ ಎಂದಿದ್ದಾರೆ  ಜಲಿಯನ್​ ವಾಲಬಾಗ್​ ನೋವು, ದುರಂತದ ಸಂಕೇತ. ಅಲ್ಲಿ ಸ್ವಾತಂತ್ರ್ಯಕ್ಕಅಗಿ ಜನರು ಪ್ರಾಣ ಕಳೆದುಕೊಂಡ ಘಟನೆ ಅವಿಸ್ಮರಣೀಯವಾಗಿದೆ, ಈ ಸ್ಥಳವನ್ನು ನೋಡುತ್ತಿದ್ದಂತೆ ನಾನು ಏನನ್ನು ಕಳೆದುಕೊಂಡಿವು. ಯಾವುದಕ್ಕಾಗಿ ಹೋರಾಡಿದ್ದೇವು ಎಂಬುದನ್ನು ನೆನೆಪಿಸುತ್ತದರೆ. ಅಂತಹ ಸಂದರ ನೆನಪುಗಳನ್ನು ಮಾರ್ಪಡಿಸಲು ಪ್ರಯತ್ನಿಸುತ್ತಿರುವುದು ಇತಿಹಾಸಕ್ಕೆ ಮಾಡಿದ ದೊಡ್ಡ ಹಾನಿಯಾಗುತ್ತದೆ ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ತಿಳಿಸಿದ್ದಾರೆ.

  ಕೇವಲ ರಾಜಕಾರಣಿಗಳು ಮಾತ್ರವಲ್ಲದೇ ಅನೇಕ ಶಿಕ್ಷಣ ತಜ್ಞರು ಕೂಡ ಕೇಂದ್ರ ಸರ್ಕಾರದ ಈ ನಿರ್ಧಾರ ಕುರಿತು ಕಿಡಿಕಾರಿದ್ದಾರೆ. ಜಲಿಯನ್ ವಾಲಾ ಬಾಗ್‌ನ ಮಹತ್ವ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಸ್ಥಾನವನ್ನು ಪ್ರಶಂಸಿಸುವಲ್ಲಿ ತಾವು ವಿಫಲರಾಗಿದ್ದೇವೆ ಎಂದಿದ್ದಾರೆ

  ಪಂಜಾಬ್​ನ ಜಲಿಯನ್​ ವಾಲಬಾಗ್​ನಲ್ಲಿ  102 ವರ್ಷಗಳ ಹಿಂದೆ ಸ್ವಾತಂತ್ರ್ಯ ಹೋರಾಟಗಾಗರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬ್ರಿಟಿಷರು ಜನರಲ್ ಡೈಯರ್ ನೇತೃತ್ವದಲ್ಲಿ ಗುಂಡಿನ ಮಳೆಗೆರೆಯಲಾಗಿತ್ತು. ಈ ಘಟನೆಯಲ್ಲಿ ಮಕ್ಕಳು ಸೇರಿದಂತೆ ಸಾವಿರಾರು ಪುರುಷರು ಮತ್ತು ಮಹಿಳೆಯರು ಸಾವನ್ನಪ್ಪಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: