HOME » NEWS » National-international » RAHUL GANDHI GIVE LOCKDOWN SUGGESTION TO UNION GOVERNMENT TO CONTROL CORONAVIRUS DBDEL LG

Rahul Gandhi: ಕೊರೋನಾ ನಿಯಂತ್ರಿಸಲು ಈಗ ಲಾಕ್​​​ಡೌನ್​​ ಒಂದೇ ಪರಿಹಾರ; ರಾಹುಲ್ ಗಾಂಧಿ

ಟ್ಬೀಟ್ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ರಾಹುಲ್ ಗಾಂಧಿ ಅವರು ಲಾಕ್ಡೌನ್ ಮಾಡುವುದರ ಜೊತೆಗೆ ಬಡವರ ಖಾತೆಗೆ ನೇರವಾಗಿ ಹಣ ನೀಡುವ ನ್ಯಾಯ್ (NYAY) ಯೋಜನೆಯನ್ನು ಜಾರಿಗೊಳಿಸಿ ಎಂದು ಕೂಡ ಹೇಳಿದ್ದಾರೆ.

news18-kannada
Updated:May 4, 2021, 11:55 AM IST
Rahul Gandhi: ಕೊರೋನಾ ನಿಯಂತ್ರಿಸಲು ಈಗ ಲಾಕ್​​​ಡೌನ್​​ ಒಂದೇ ಪರಿಹಾರ; ರಾಹುಲ್ ಗಾಂಧಿ
ರಾಹುಲ್ ಗಾಂಧಿ.
  • Share this:
ನವದೆಹಲಿ (ಮೇ 4): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ.‌ ಹಲವು ನಿರ್ಬಂಧಗಳ ನಡುವೆಯೂ ಪ್ರತಿ ದಿನ‌ ಮೂರೂವರೆ ಲಕ್ಷಕ್ಕೂ ಹೆಚ್ಚು ಜನರು ಕೊ ರೊನಾ ಸೋಂಕು ಪೀಡಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೋನಾದ ಹುಟ್ಟಡಗಿಸಲು ಮತ್ತೆ ಲಾಕ್​​​ಡೌನ್​ ಮಾಡಲೇಬೇಕಾ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಈಗ ಕಾಂಗ್ರೆಸ್ ನಾಯಕ‌ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಕೊರೋನಾ ನಿಯಂತ್ರಿಸಲು ಈಗ ಲಾಕ್​​​ಡೌನ್​​ ಒಂದೇ ಪರಿಹಾರ ಎಂದು ಹೇಳಿದ್ದಾರೆ.

ಕೊರೋನಾ ನಿಯಂತ್ರಿಸಲು ಈಗ ಲಾಕ್ಡೌನ್ ಒಂದೇ ಪರಿಹಾರ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಅವರು ಪರೋಕ್ಷವಾಗಿ ಕೇಂದ್ರ ಸರ್ಕಾರದ ಮೇಲೆ ಲಾಕ್​​ಡೌನ್​ ಹೇರುವಂತೆ ಆಗ್ರಹಿಸಿದ್ದಾರೆ. ಟ್ಬೀಟ್ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ರಾಹುಲ್ ಗಾಂಧಿ ಅವರು 'ಲಾಕ್ಡೌನ್ ಮಾಡುವುದರ ಜೊತೆಗೆ ಬಡವರ ಖಾತೆಗೆ ನೇರವಾಗಿ ಹಣ ನೀಡುವ 'ನ್ಯಾಯ್' (NYAY) ಯೋಜನೆಯನ್ನು ಜಾರಿಗೊಳಿಸಿ ಎಂದು ಕೂಡ ಹೇಳಿದ್ದಾರೆ.

ಲಾಕ್​​ಡೌನ್​ ಮಾಡುವುದಾದರೆ ಬಡವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರ ಖಾತೆಗಳಿಗೆ ನೇರವಾಗಿ ಹಣ ಹಾಕಿ ಎಂದು ಮೊದಲಿನಿಂದಲೂ ಒತ್ತಾಯ ಮಾಡುತ್ತಿರುವ ರಾಹುಲ್ ಗಾಂಧಿ ಅವರು, ಈಗಲೂ 'ನ್ಯಾಯ್ ಯೋಜನೆ ಮೂಲಕ ಜನಕ್ಕೆ ಹಣ ಕೊಟ್ಟು ಲಾಕ್ಡೌನ್ ಮಾಡಿ. ಇದರಿಂದ ಅಮಾಯಕ ಜನರು ಸಾಯುವುದು ತಪ್ಪುತ್ತದೆ‌' ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Coronavirus India Updates: ದೇಶದಲ್ಲಿ 2 ಕೋಟಿ ದಾಟಿದ ಕೊರೋನಾ ಪೀಡಿತರ ಸಂಖ್ಯೆ!

ಇಲ್ಲದೆ ಕೇಂದ್ರ ಸರ್ಕಾರದ ನಿಷ್ಕ್ರಿಯತೆಯು ಅಮಾಯಕ ಜನರನ್ನು ಕೊಲ್ಲುತ್ತಿದೆ ಎಂದು ಹೇಳಿದ್ದಾರೆ.‌ ನಿನ್ನೆ (ಮೇ 3ರಂದು  ಕರ್ನಾಟಕದ ಚಾಮರಾಜನಗರದಲ್ಲಿ 24 ಗಂಟೆಗಳ ಅವಧಿಯಲ್ಲಿ ಆಮ್ಲಜನಕ ಸಿಗದೆ 24 ಜನ ಸಾವನ್ನಪ್ಪಿದ ಘಟನೆ ಬಗ್ಗೆ 'ಇವು ಸಾವುಗಳೋ ಅಥವಾ ಕೊಲೆಗಳೋ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ದೇಶದಲ್ಲಿ ಪ್ರತಿ ದಿನ ಮೂರೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿರುವ ಮತ್ತು ಪ್ರತಿ ದಿನ 3 ಸಾವಿರಕ್ಕೂ ಹೆಚ್ಚು ಜನ ಕೊರೋನಾಗೆ ಬಲಿ ಆಗುತ್ತಿರುವ ಹಿನ್ನೆಲೆಯಲ್ಲಿ, ಆಮ್ಲಜನಕ, ಕೊರೋನಾ ಲಸಿಕೆ, ವೆಂಟಿಲೇಟರ್, ಐಸಿಯು, ಬೆಡ್ ಮತ್ತಿತರ ಕೊರತೆಗಳು ತಲೆದೂರಿರುವ ಹಿನ್ನಲೆಯಲ್ಲಿ, ಕೊರೋನಾ ವಿಷಯದಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್ ರಜಾದಿನವಾದ ಭಾನುವಾರ ವಿಚಾರಣೆ ನಡೆಸಿ 'ಕೊರೋನಾ ‌ನಿಯಂತ್ರಣಕ್ಕೆ ಲಾಕ್ಡೌನ್ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಿ' ಎಂದು ಆದೇಶ ಹೊರಡಿಸಿದೆ.
ಇದಲ್ಲದೆ ಆರೋಗ್ಯ ಕ್ಷೇತ್ರದ ತಜ್ಞರು ದೇಶದಲ್ಲಿ ಕೊರೋನಾದಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ತಜ್ಞರು ಕೊರೋನಾದ 3ನೇ ಅಲೆಗೆ ಸಿದ್ದರಾಗಿ ಎಂಬ ಎಚ್ಚರಿಸಿದ್ದಾರೆ. ವಿದೇಶಿ ಅಧ್ಯಯನಗಳು ಕೂಡ ಇಂಥದೇ ಆತಂಕವನ್ನು ಹೊರಹಾಕಿವೆ. ಪರೋಕ್ಷವಾಗಿ ಅವರು ಕೂಡ ಲಾಕ್ಡೌನ್ ಮಾಡಿ ಎಂದೇ ಹೇಳಿವೆ. ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
Published by: Latha CG
First published: May 4, 2021, 11:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories