ಶ್ರೀನಗರ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ಇದೀಗ ಪಂಜಾಬ್ನಲ್ಲಿ (Punjab) ಮುಕ್ತಾಯವಾಗಿ ಗುರುವಾರ ಜಮ್ಮು ಕಾಶ್ಮೀರಕ್ಕೆ (Jammu-Kashmir) ಲಗ್ಗೆ ಇಟ್ಟಿದೆ. ಅಂತಿಮ ಹಂತ ತಲುಪಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕೊನೆಗೂ ರಾಹುಲ್ ಗಾಂಧಿ ಅವರು ಜಾಕೆಟ್ (Jacket) ಧರಿಸಿದ್ದಾರೆ. ಮುಂಜಾನೆ ತುಂತುರು ಮಳೆ (Rain) ಆರಂಭವಾಗಿದ್ದ ಕಾರಣ ಬಿಳಿ ಟೀ ಶರ್ಟ್ (White T-Shirt) ಮೇಲೆ ಕಪ್ಪು ಬಣ್ಣದ ಜಾಕೆಟ್ ಅನ್ನು ರಾಹುಲ್ ಗಾಂಧಿ ಧರಿಸಿರುವುದು ಕಂಡು ಬಂದಿದೆ.
ನನಗೆ ಚಳಿ ಎನಿಸಿದಾಗ ಜಾಕೆಟ್ ಧರಿಸುತ್ತೇನೆ ಅಂದಿದ್ದ ರಾಹುಲ್
ಇದುವರೆಗಿನ ಸುದೀರ್ಘ 125 ದಿನಗಳ ಪ್ರಯಾಣದಲ್ಲಿ 3,400 ಕಿಲೋಮೀಟರ್ಗಳವರೆಗೂ ಪಾದಯಾತ್ರೆ ನಡೆಸಿರುವ ರಾಹುಲ್ ಗಾಂಧಿ ಅವರ ಉಡುಪಿನ ಬಗ್ಗೆ ಭಾರೀ ಚರ್ಚೆಯಾಗಿತ್ತು. ಅಲ್ಲದೇ ರಾಹುಲ್ ಟೀ ಶರ್ಟ್ ಬಗ್ಗೆ ವಿರೋಧ ಪಕ್ಷಗಳು ಟೀಕಿಸಿತ್ತು. ಈ ವೇಳೆ ನನಗೆ ಚಳಿ ಎನಿಸಿದಾಗ ಜಾಕೆಟ್ ಧರಿಸುತ್ತೇನೆ ಎಂದು ರಾಹುಲ್ ಹೇಳಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಜಾಕೆಟ್ ಅನ್ನು ರಾಹುಲ್ ಗಾಂಧಿ ತೊಟ್ಟಿರಲಿಲ್ಲ.
ಜನವರಿ 25 ರಂದು ರಾಷ್ಟ್ರಧ್ವಜಾರೋಹಣ ಮಾಡಲಿರುವ ರಾಹುಲ್
ನಾಯಕ ಜನವರಿ 25 ರಂದು ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್ನಲ್ಲಿ ರಾಹುಲ್ ಗಾಂಧಿ ಅವರು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ ಮತ್ತು ಎರಡು ದಿನಗಳ ನಂತರ ಜನವರಿ 27 ರಂದು ಅನಂತನಾಗ್ ಮೂಲಕ ಶ್ರೀನಗರದಲ್ಲಿ ಯಾತ್ರೆ ನಡೆಸಲು ಯೋಜಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಕಾಶ್ಮೀರದಲ್ಲಿ ಭಾರೀ ಭದ್ರತೆ
ಇಂದು ಬೆಳಗ್ಗೆ ಕಥುವಾದ ಹಟ್ಲಿ ಮೋರ್ಹ್ನಿಂದ ಪುನರಾರಂಭಗೊಂಡ ಯಾತ್ರೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಗಾಂಧಿ ಕುಟುಂಸ್ಥರು ಮತ್ತು ಅವರ ಜೊತೆ ಯಾತ್ರೆಯಲ್ಲಿ ಭಾಗಿಯಾಗಿರುವವರಿಗೆ ರಕ್ಷಣೆ ನೀಡುತ್ತಿದೆ. ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕೆಲವು ಸ್ಟ್ರೆಚ್ಗಳಲ್ಲಿ ನಡೆಯದಂತೆ ಭದ್ರತಾ ಏಜೆನ್ಸಿಗಳು ರಾಹುಲ್ಗೆ ಈ ಹಿಂದೆ ಸಲಹೆ ನೀಡಿದೆ.
ಸ್ವೆಟರ್ ಧರಿಸಿದೇ ಚಳಿಯ ಮಧ್ಯೆ ಟೀ ಶರ್ಟ್ನಲ್ಲಿ ಯಾತ್ರೆ ನಡೆಸಿದ್ದ ರಾಹುಲ್
ಕೆಲವು ದಿನಗಳ ಹಿಂದೆ ಭಾರತ್ ಜೋಡೋ ಯಾತ್ರೆಯಲ್ಲಿ ಸ್ವೆಟರ್ ಧರಿಸದೇ ಚಳಿಯ ಮಧ್ಯೆ ಟೀ ಶರ್ಟ್ನಲ್ಲಿಯೇ ರಾಹುಲ್ ಗಾಂಧಿ ನಡೆದಿದ್ದರು. ಈ ಬಗ್ಗೆ ರಾಜಕೀಯದಲ್ಲಿ ಭಾರೀ ಚರ್ಚೆಯಾಗಿತ್ತು. ಈ ಕುರಿತಂತೆ ಸುದ್ದಿಗೋಷ್ಠಿವೊಂದರಲ್ಲಿ ಪ್ರತಿಕ್ರಿಯಿಸಿದ ರಾಹುಲ್, ನನ್ನ ಟೀ ಶರ್ಟ್ ಬಗ್ಗೆ ಯಾಕೆ ಇಷ್ಟೊಂದು ಚರ್ಚೆ? ನನಗೆ ಚಳಿ ಎಂದರೆ ಭಯವಿಲ್ಲ, ಹೀಗಾಗಿ ಸ್ವೆಟರ್ ಧರಿಸುವುದಿಲ್ಲ. ನನಗೆ ಚಳಿ ಅನಿಸಿದಾಗ ಸ್ವೆಟರ್ ಧರಿಸುತ್ತೇನೆ. ಭಾರತ್ ಜೋಡೋ ಯಾತ್ರೆ ಮುಗಿದ ನಂತರ ವಿಡಿಯೋ ಮಾಡಿ ಅದರಲ್ಲಿ ಸ್ವೆಟರ್ ಧರಿಸದಿದ್ದರ ಬಗ್ಗೆ ಗುಟ್ಟು ಹೇಳುತ್ತೇನೆ ಎಂದು ವ್ಯಂಗ್ಯವಾಡಿದ್ದರು.
ಅಲ್ಲದೇ ಮಾಧ್ಯಮಗಳು ನನ್ನ ಟೀ ಶರ್ಟ್ ಬಗ್ಗೆ ಗಮನ ಹರಿಸಿದವು, ಆದರೆ ಎಂದಾದರೂ ಬಡ ರೈತರು ಮತ್ತು ಕಾರ್ಮಿಕರ ಹರಿದ ಬಟ್ಟೆಯನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದ್ದರು.
ಇತ್ತೀಚೆಗೆ ಶರ್ಟ್ ಬಿಚ್ಚಿ ಚಳಿ ಮಧ್ಯೆ ಬಸ್ ಮೇಲೆ ಡ್ಯಾನ್ಸ್ ಮಾಡಿದ್ದ ಕೈ ಕಾರ್ಯಕರ್ತರು
ಇತ್ತೀಚೆಗಷ್ಟೇ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಕುಣಿದು ಕುಪ್ಪಳಿಸಿದ್ದರು. ಹರಿಯಾಣದ ಕರ್ನಾಲ್ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೈಯಲ್ಲಿ ಬ್ಯಾನರ್ ಹಿಡಿದು, ಬಸ್ ಮೇಲೆ ನಿಂತು, ಸಾಂಗ್ ಹಾಡುತ್ತಾ ಶರ್ಟ್ ಧರಿಸದೇ ನೃತ್ಯ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ