HOME » NEWS » National-international » RAHUL GANDHI EXPRESSION WHILE BUDGET GOES VIRAL IN TWITTER SESR

Union Budget: ಬಜೆಟ್​ ಮಂಡನೆ ವೇಳೆ ಟ್ವೀಟಿಗರ ಗಮನ ಸೆಳೆದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ

ಬಜೆಟ್​ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಬಜೆಟ್​ ಹಣವನ್ನು ಜನರ ಕೈಗೆ ನೀಡುವ ಬದಲು ಸರ್ಕಾರ ಇದನ್ನು ಬಂಡವಾಳಶಾಹಿಗಳ ಕೈಗೆ ಇಟ್ಟಿದೆ ಎಂದು ಟೀಕಿಸಿದ್ದಾರೆ. 

news18-kannada
Updated:February 1, 2021, 3:26 PM IST
Union Budget: ಬಜೆಟ್​ ಮಂಡನೆ ವೇಳೆ ಟ್ವೀಟಿಗರ ಗಮನ ಸೆಳೆದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ
ಬಜೆಟ್​ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಬಜೆಟ್​ ಹಣವನ್ನು ಜನರ ಕೈಗೆ ನೀಡುವ ಬದಲು ಸರ್ಕಾರ ಇದನ್ನು ಬಂಡವಾಳಶಾಹಿಗಳ ಕೈಗೆ ಇಟ್ಟಿದೆ ಎಂದು ಟೀಕಿಸಿದ್ದಾರೆ. 
  • Share this:
ನವದೆಹಲಿ (ಫೆ.1): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು 2021-22ನೇ ಸಾಲಿನ ಬಜೆಟ್​ ಮಂಡಿಸಿದರು. ಈ ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಸದನದಲ್ಲಿ ಹಾಜರಿದ್ದು, ಸಾಮಾಜಿಕ ಜಾಲತಾಣಿಗರ ಗಮನ  ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.  ಬಜೆಟ್​ ಮಂಡಿಸುವ ವೇಳೆ ವಿತ್ತ ಸಚಿವರು ರವೀಂದ್ರನಾಥ್​ ಟ್ಯಾಗೋರ್​ ಅವರನ್ನು ಉಲ್ಲೇಖಿಸುವ ಮೂಲಕ ಕೊರೋನಾ ಸೋಂಕಿನ ಮೂಲಕ ಹೇಗೆ ಹೋರಾಡಬಹುದು ಎಂಬುದನ್ನು ಪ್ರಸ್ತಾಪಿಸಿದರು. ಈ ಮಧ್ಯೆ ಟ್ವೀಟರಿಗರಿಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಣ್ಣಿಗೆ ಬಿದ್ದರು. ಬಜೆಟ್​ ಮಂಡಿಸುವ ವೇಳೆ ಕೊಂಚ ಬೇಸರದಿಂದ ಇದ್ದಂತೆ ರಾಹುಲ್​ ಗಾಂಧಿ ಕಂಡು ಬಂದಿದ್ದಾರೆ. ಈ ವೇಳೆ ಮಾಸ್ಕ್​ ಧರಿಸಿದ್ದ ಅವರು ಕಣ್ಣನ್ನು ಮಿಟುಕಿಸುತ್ತಿದ್ದ ಅವರ ಪೋಟೋ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು, ಈ ಪೋಟೋ ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾಗಿದೆ.ಇನ್ನು ಬಜೆಟ್​ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಬಜೆಟ್​ ಹಣವನ್ನು ಜನರ ಕೈಗೆ ನೀಡುವ ಬದಲು ಸರ್ಕಾರ ಇದನ್ನು ಬಂಡವಾಳಶಾಹಿಗಳ ಕೈಗೆ ಇಟ್ಟಿದೆ ಎಂದು ಟೀಕಿಸಿದ್ದಾರೆ.
Published by: Seema R
First published: February 1, 2021, 3:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories