ಅಧಿಕಾರಕ್ಕೆ ಬಂದ ಮೂರೇ ದಿನದಲ್ಲಿ ಮೂರೂ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ; ರಾಹುಲ್ ಗಾಂಧಿ ಸಂತಸ

ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆಯೇ ಕಾಂಗ್ರೆಸ್​​ ಅಧಿಕಾರಕ್ಕೆ ಬಂದ ಮೂರು ರಾಜ್ಯಗಳಲ್ಲಿ ರೈತರ ಸಾಲಮನ್ನಾ ಮಾಡಿದೆ. ಹೀಗಾಗಿ ಕಾಂಗ್ರೆಸ್​​ ಅಧ್ಯಕ್ಷ  ರಾಹುಲ್ ಗಾಂಧಿಯವರು ಸಂತಸರಾಗಿದ್ಧಾರೆ.

Ganesh Nachikethu | news18
Updated:December 20, 2018, 9:43 AM IST
ಅಧಿಕಾರಕ್ಕೆ ಬಂದ ಮೂರೇ ದಿನದಲ್ಲಿ ಮೂರೂ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ; ರಾಹುಲ್ ಗಾಂಧಿ ಸಂತಸ
ರಾಹುಲ್​ ಗಾಂಧಿ
  • News18
  • Last Updated: December 20, 2018, 9:43 AM IST
  • Share this:

  1. ನವದೆಹಲಿ(ಡಿ.19): ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆಯೇ ಕಾಂಗ್ರೆಸ್​​ ಅಧಿಕಾರಕ್ಕೆ ಬಂದ ಮೂರು ರಾಜ್ಯಗಳಲ್ಲಿ ರೈತರ ಸಾಲಮನ್ನಾ ಮಾಡಿದೆ. ಹೀಗಾಗಿ ಕಾಂಗ್ರೆಸ್​​ ಅಧ್ಯಕ್ಷ  ರಾಹುಲ್ ಗಾಂಧಿಯವರು ಸಂತಸರಾಗಿದ್ಧಾರೆ. ನಾವು ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು. ಈಗ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದು ಕೇವಲ ಎರಡೇ ದಿನಗಳಾಗಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಡಲ್ಲಿ ಕೊಟ್ಟ ಮಾತಿನಂತೆಯೇ ಸಾಲಮನ್ನಾ ಮಾಡಿದ್ದೇವೆ ಎಂದು ರಾಹುಲ್​ ಟ್ವೀಟ್​​ನಲ್ಲಿ ಸಂತಸ ವ್ಯಕ್ತಪಡಿಸಿದ್ಧಾರೆ.


ಎರಡು ದಿನಗಳ ಹಿಂದೆಯೇ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಮಧ್ಯ ಪ್ರದೇಶ ಸರಕಾರ ರೈತರ ಸಾಲ ಮನ್ನಾ ಮಾಡಿದೆ. ಮಧ್ಯಪ್ರದೇಶದ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಕಮಲನಾಥ್ ಅವರು ಕೈಗೊಂಡ ಮೊದಲ ನಿರ್ಧಾರಗಳಲ್ಲಿ ಸಾಲ ಮನ್ನಾ ಕೂಡ ಒಂದಾಗಿತ್ತು. ರೈತರ 2 ಲಕ್ಷ ರೂವರೆಗಿನ ಸಾಲಗಳೆಲ್ಲವನ್ನೂ ಅವರು ಮನ್ನಾ ಮಾಡಿದ್ದಾರೆ ಎಂದು ತಿಳಿದು ಬಂದಿತ್ತು. ಈ ಬೆನ್ನಲ್ಲೇ ಛತ್ತೀಸ್​ಗಡ ಮತ್ತು ರಾಜಸ್ಥಾನದಲ್ಲಿಯೂ ಸಾಲಮನ್ನಾ ಮಾಡಲಾಯ್ತು.

ಇದನ್ನೂ ಓದಿ: ‘ಪಂಚರಾಜ್ಯ ಫಲಿತಾಂಶ ಲೋಕಸಭೆಗೆ ದಿಕ್ಸೂಚಿಯಲ್ಲ’: ದೇಶಕ್ಕಾಗಿ ಬಿಜೆಪಿ ಗೆಲುವು ಅನಿವಾರ್ಯ; ಅಮಿತ್​ ಶಾ

ಬಿಜೆಪಿ ವಿರುದ್ಧ ರೈತರು: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ವಿರುದ್ಧ ಸಾಲಮನ್ನಕ್ಕೆ ಆಗ್ರಹಿಸಿ ರೈತರು ಬೀದಿಗಳಿದಿದ್ದರು. ದೇಶದ ವಿವಿಧ ಭಾಗಗಳಿಂದ ದೆಹಲಿಗೆ ಪಾದಯಾತ್ರೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಹತ್ತಾರು ಸಾವಿರಾ ರೈತರು ಸೇರಿದ್ದ ಪ್ರತಿಭಟನಾನಿರತ ಹೋರಾಟಗಾರರ ಮೇಲೆ ಗೋಲಿಬಾರ್​ ನಡೆಯಿತು. ಇದರಿಂದ ಆಕ್ರೋಶಗೊಂಡ ರೈತರು ಕೇಂದ್ರ ಸರ್ಕಾರದ ವಿರುದ್ಧ ಕೆಂಡಮಂಡಲರಾಗಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾನಿರತ ರೈತರಿಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿಯವರು, ತಾವು ಅಧಿಕಾರಕ್ಕೆ ಬಂದಲ್ಲಿ ಕೃಷಿ ಸಾಲಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿದ್ದರು.

ಇದನ್ನೂ ಓದಿ: ಸೋತಾಗ ಇವಿಎಂ ದೂಷಿಸುವ ಕಾಂಗ್ರೆಸ್​: ಗೆದ್ದಾಗ ಮಾತ್ರ ಫಲಿತಾಂಶ ಒಪ್ಪಿಕೊಳ್ಳುತ್ತದೆ; ಮೋದಿ ವ್ಯಂಗ್ಯ

ಇನ್ನು ಮಧ್ಯಪ್ರದೇಶ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ ಸರ್ಕಾರ ಗುಜರಾತ್​​,ಅಸ್ಸಾಂನಲ್ಲೂ ಸಾಲಮನ್ನಕ್ಕೆ ನಿರ್ಧಾರ ತೆಗೆದುಕೊಳ್ಳಾಗಿದೆ. ಗುಜರಾತ್​​ನಲ್ಲಿ 650 ಕೋಟಿ, ಅಸ್ಸಾಂನಲ್ಲಿ 600 ಕೋಟಿ ಕೃಷಿ ಸಾಲಮನ್ನಾ ಘೋಷಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರು ರಾಹುಲ್​ ಗಾಂಧಿಯವರು, ಬಿಜೆಪಿ ಈ ನಿರ್ಧಾರಕ್ಕೆ ಕಾಂಗ್ರೆಸ್​ ಕಾರಣ. ನಮ್ಮ ಹೋರಾಟದಿಂದ ಸಿಎಂ ವಿಜಯ್​ ರೂಪಾಣಿ ಹಾಗೂ ಅಸ್ಸಾಂ ಸಿಎಂ ಎಚ್ಚೆತ್ತುಕೊಂಡಿದ್ದಾರೆ. ಈಗ ಆಯಾಗಿ ಮಲಗಿರುವ ಪ್ರಧಾನಿ ನರೇಂದ್ರ ಮೋದಿ ಸರದಿ. ಮುಂದಿನ ದಿನಗಳಲ್ಲಿ ಪ್ರಧಾನಿಯನ್ನ ನಿದ್ದೆಯಿಂದ ಬಡಿದೆಬ್ಬಿಸುತ್ತೇವೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿಯವರು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ.

-------------------
ಸತೀಶ್​ ಜಾರಕಿಹೊಳಿ ಸಿಎಂ ಆಗಲಿ; ಸಿದ್ದರಾಮಯ್ಯ
First published: December 19, 2018, 9:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading