Lakhimpur Kheri Violence| ರಾಹುಲ್ ಗಾಂಧಿ ಭಲೇ ನಾಟಕಕಾರ; ಉತ್ತರಪ್ರದೇಶ ಸಚಿವ ಸಿದ್ಧಾರ್ಥ್​ ನಾಥ್ ಸಿಂಗ್ ಕಿಡಿ

ವಿರೋಧ ಪಕ್ಷದ ನಾಯಕರು ಈ ಪ್ರದೇಶಕ್ಕೆ ಭೇಟಿ ನೀಡುವುದು ಅನವಶ್ಯಕ ಗೊಂದಲ ಮತ್ತು ಅಶಾಂತಿಗೆ ಕಾರಣವಾಗಬಹುದು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕ ಪ್ರವೇಶವನ್ನು ನಿಷೇಧಿಸಲಾಗಿತ್ತು ಎಂದು ಸಚಿವ ಸಿದ್ದಾರ್ಥ್​ನಾಥ್ ಸಿಂಗ್ ತಿಳಿಸಿದ್ದಾರೆ.

ಸಿದ್ದಾರ್ಥ್ ​ನಾಥ್ ಸಿಂಗ್.

ಸಿದ್ದಾರ್ಥ್ ​ನಾಥ್ ಸಿಂಗ್.

 • Share this:
  ಲಕ್ನೋ (ಅಕ್ಟೋಬರ್​ 07); ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ಅನವಶ್ಯಕವಾಗಿ ಲಕ್ನೋ ವಿಮಾನ (Lucknow) ನಿಲ್ದಾಣದಲ್ಲಿ ಭಲೇ ನಾಟಕವನ್ನೇ ನಡೆಸಿದ್ದಾರೆ ಎಂದು ಉತ್ತರಪ್ರದೇಶದ ಸಚಿವ ಸಿದ್ದಾರ್ಥ್​ ನಾಥ್​ ಸಿಂಗ್ (Sidharth Nath Singh) ಕಿಡಿಕಾರಿದ್ದಾರೆ. ಲಖೀಂಪುರ್​ ಖೇರಿ (Lakhimpur Kheri) ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಮನೆಗಳಿಗೆ ಭೇಟಿ ನೀಡುವ ಸಲುವಾಗಿ ಸೋಮವಾರವೇ ಪ್ರಿಯಾಂಕಾ ಗಾಂಧಿ ಲಖೀಂಪುರ್​ ಖೇರಿಗೆ  ತಲುಪಿದ್ದರು. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಬಂಧಿಸಿ ಗೆಸ್ಟ್​ಹೌಸ್​ನಲ್ಲಿ ಗೃಹ ಬಂಧನದಲ್ಲಿ ಇಡಲಾಗಿತ್ತು. ಹೀಗಾಗಿ ನಿನ್ನೆ ರಾಹುಲ್​ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಮತ್ತು ಛತ್ತೀಸ್‌ಗಢದ ಸಿಎಂ ಭೂಪೇಶ್ ಬಘೇಲ್ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು. ಆದರೆ, ಅವರಿಗೆ ಲಖೀಂಪುರ್​ ಕೇರಿ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ರಾಹುಲ್ ಗಾಂಧಿ ವಿಮಾನ ನಿಲ್ದಾಣದಲ್ಲೇ ಧರಣಿ ಆರಂಭಿಸಿದ್ದರು. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು.

  ಆದರೆ, ಈ ಘಟನೆ ಕುರಿತು ನ್ಯೂಸ್​ 18 ವ್ಯವಸ್ಥಾಪಕ ಸಂಪಾದಕ ಜಕ್ಕಾ ಜೇಕಬ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿರುವ ಸಚಿವ ಸಿದ್ದಾರ್ಥ್ ​ನಾಥ್​ ಸಿಂಗ್, "ಕೆಲವೊಬ್ಬರಿಗೆ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಪ್ರದರ್ಶಿಸಿಕೊ ಳ್ಳಲು ಮತ್ತು ರೀಟ್ವೀಟ್ ಮಾಡಲು ಉತ್ಸುಕರಾಗಿರುತ್ತಾರೆ. ಆದರೆ, ಜನರ ಮೇಲೆ ನಿಜವಾದ ಅಕ್ಕರೆ ಇರುವವರು ಅವರ ಕೆಲಸದ ಮೂಲಕ ಅದನ್ನು ಪ್ರದರ್ಶಿಸಬೇಕು. ರಾಹುಲ್ ಗಾಂಧಿ ಕೇವಲ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿದ್ದು, ಇದರಿಂದ ಅವರು ಭಲೇ ನಾಟಕಕಾರ ಎಂಬುದು ಸ್ಪಷ್ಟವಾಗಿದೆ.

  ಇನ್ನೂ ಭದ್ರತೆ ಕಾರಣಕ್ಕೆ ರಾಹುಲ್ ಗಾಂಧಿ ಮತ್ತು ಇತರೆ ನಾಯಕರನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಏಕೆಂದರೆ ಲಖೀಂಪುರ್​ ಖೇರಿಯಲ್ಲಿ ಗಲಭೆ ಆರಂಭವಾದ ಮೊದಲ ದಿನದಿಂದಲೂ ನಾವು ಸ್ಪಷ್ಟವಾಗಿದ್ದೇವೆ. ಆ ಪ್ರದೇಶ ಅತಿಸೂಕ್ಷ್ಮ ವಲಯವಾಗಿದ್ದು, ಸಾಕಷ್ಟು ಕಾಳಜಿ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಗಲಭೆಯನ್ನು ನಿಯಂತ್ರಿಸಲು ರೈತರು ಮತ್ತು ಉತ್ತರಪ್ರದೇಶ ಸರ್ಕಾರ ಒಂದು ಒಪ್ಪಂದಕ್ಕೆ ಮುಂದಾಗುತ್ತಿದೆ. ಆದರೆ, ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಈ ಪ್ರದೇಶಕ್ಕೆ ಭೇಟಿ ನೀಡುವುದು ಅನವಶ್ಯಕ ಗೊಂದಲ ಮತ್ತು ಅಶಾಂತಿಗೆ ಕಾರಣವಾಗಬಹುದು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕ ಪ್ರವೇಶವನ್ನು ನಿಷೇಧಿಸಲಾಗಿತ್ತು" ಎಂದು ಸಚಿವ ಸಿದ್ದಾರ್ಥ್​ ನಾಥ್ ಸಿಂಗ್ ತಿಳಿಸಿದ್ದಾರೆ.

  ಘಟನೆಯ ವಿವರ;

  ಕೇಂದ್ರ ಸಚಿವ ಅಜಯ್​ ಮಿಶ್ರಾ ಮತ್ತು ಡಿಸಿಎಂ ಕೇಶವ ಪ್ರಸಾದ್​ ಮೌರ್ಯ ಕಳೆದ ಭಾನುವಾರ ಉತ್ತರ ಪ್ರದೇಶದ ಲಖೀಮ್​ಪುರ್​ಗೆ ಆಗಮಿಸಿದ್ದರು. ಆದರೆ, ಅವರ ಈ ಭೇಟಿಯನ್ನು ತಡೆಯುವ ಸಲುವಾಗಿ ರೈತ ಪ್ರತಿಭಟನಾಕಾರರು ಹೆಲಿಪ್ಯಾಡ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅಜಯ್ ಮಿಶ್ರಾ ಸೇರಿದಂತೆ ಇನ್ನಿತರರು ರಸ್ತೆ ಮಾರ್ಗವಾಗಿಯೇ ಲಖಿಮಪುರಕ್ಕೆ ತೆರಳಿದ್ದರು. ಕಾರ್ಯಕ್ರಮದ ನಂತರ ಹಿಂದಿರುಗುತ್ತಿದ್ದ ವೇಳೆ ರೈತರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

  ಇದನ್ನೂ ಓದಿ: ಮೊದಲು ಪ್ರವೇಶ ನಿರಾಕರಿಸಿ ಈಗ ಲಖಿಂಪುರ್​ಗೆ ವಿರೋಧ ಪಕ್ಷದ ನಾಯಕರು ತೆರಳಲು ಯುಪಿ ಸರ್ಕಾರ ಅನುಮತಿ ನೀಡಿದ್ದು ಏಕೆ?

  ಈ ವೇಳೆ ಸಚಿವರ ಪುತ್ರ ರೈತರ ಮೇಲೆ ಕಾರ್ ಚಲಾಯಿಸಿದ್ದಾರೆ. ಈ ಘಟನೆಯಲ್ಲಿ 4 ಜನ ರೈತರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಂತರ ನಡೆದ ಗಲಭೆಯಲ್ಲಿ 5 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರದಲ್ಲಿ ಓರ್ವ ಪ್ರತಕರ್ತನೂ ಮೃತಪಟ್ಟಿದ್ದು ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ನಂತರ ಲಖೀಮ್​ಪುರ್​ನಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಕ್ಕೂಟ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದೆ. ಅಲ್ಲದೆ, ಇನ್ನೂ ಇತರ 13 ಜನರ ವಿರುದ್ಧ ಎಫ್‌ಐಆರ್‌‌ ದಾಖಲಿಸಲಾಗಿದೆ.
  Published by:MAshok Kumar
  First published: