• Home
  • »
  • News
  • »
  • national-international
  • »
  • Bharat Jodo Yatra: ಸೋನಿಯಾ ಗಾಂಧಿ ಸನ್​ಸ್ಕ್ರೀನ್ ಕಳಿಸಿದರೂ ರಾಹುಲ್ ಗಾಂಧಿ ಬಳಸಲ್ವಂತೆ!

Bharat Jodo Yatra: ಸೋನಿಯಾ ಗಾಂಧಿ ಸನ್​ಸ್ಕ್ರೀನ್ ಕಳಿಸಿದರೂ ರಾಹುಲ್ ಗಾಂಧಿ ಬಳಸಲ್ವಂತೆ!

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ

ದಿನಕ್ಕೆ 20 ಕಿಲೋಮೀಟರ್ ನಡೆಯುವಾಗಲೂ ನನಗೆ ಯಾವುದೇ ಗುಳ್ಳೆಗಳು ಬಂದಿಲ್ಲ. ಹೀಗಾಗಿ ನಾನು ಯಾವುದೇ ಸನ್‌ಸ್ಕ್ರೀನ್ ಬಳಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ದೆಹಲಿ: 'ಭಾರತ್ ಜೋಡೋ ಯಾತ್ರೆ'ಯಲ್ಲಿ (Bharat Jodo Yatra) ದೇಶದುದ್ದಗಲಕ್ಕೂ ಪಾದಯಾತ್ರೆ ನಡೆಸುತ್ತಿರುವ ಸಂಸದ ರಾಹುಲ್ ಗಾಂಧಿಗೆ (Rahul Gandhi) ಅವರ ಅಮ್ಮ ಅಂದರೆ ಸೋನಿಯಾ ಗಾಂಧಿ (Sonia Gandhi)  ಸನ್​ಸ್ಕ್ರೀನ್ ಕಳಿಸುತ್ತಾರಂತೆ ಆದರೆ ಆ ಸನ್​ಸ್ಕ್ರೀನ್​ ಅನ್ನು ಸಂಸದ ರಾಹುಲ್ ಗಾಂಧಿ ಬಳಕೆ ಮಾಡುವುದಿಲ್ಲವಂತೆ. ಈ ಕುರಿತು ಸಂವಾದವೊಂದರಲ್ಲಿ ಸ್ವತಃ ರಾಹುಲ್ ಗಾಂಧಿ ಅವರೇ ಸ್ಪಷ್ಟಪಡಿಸಿದ್ದಾರೆ. ದಿನಕ್ಕೆ 20 ಕಿಲೋಮೀಟರ್ ನಡೆಯುವಾಗಲೂ ನನಗೆ ಯಾವುದೇ ಗುಳ್ಳೆಗಳು ಬಂದಿಲ್ಲ. ಹೀಗಾಗಿ ನಾನು ಯಾವುದೇ ಸನ್‌ಸ್ಕ್ರೀನ್ ಬಳಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.


ಸದ್ಯ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕದಿಂದ ಆಂಧ್ರಪ್ರದೇಶ ತಲುಪಿದೆ.


ಬಳ್ಳಾರಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತು
ಬಳ್ಳಾರಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ರಾಹುಲ್ ಗಾಂಧಿ, 3500 ಕಿಲೋ ಮೀಟರ್ ನಡೆಯುವುದು ಸಾಮಾನ್ಯ ವಿಷಯ ಅಲ್ಲ ಅನ್ಕೊಂಡಿದ್ದೆ. ಆದ್ರೆ, ದಿನಗಳೆದಂತೆ ನಡೆಯೋದು ಸುಲಭವಾಗಿದೆ ಎಂದು ಹೇಳಿದ್ದಾರೆ.


ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಮಾತಾಡಿದ ರಾಹುಲ್ ಗಾಂಧಿ, ಯಾವಾಗ ಯಾತ್ರೆಯಲ್ಲಿ ಸಣ್ಣ ಮಗು, ವೃದ್ಧರು ಬಂದು ಮಾತಾಡ್ತಾರೋ ನನಗೆ ಮುಂದೆ ಹೋಗೋದಕ್ಕೆ ಶಕ್ತಿ ಬರುತ್ತದೆ ಎಂದರು.


ಇದನ್ನೂ ಓದಿ: Rahul Gandhi Fitness: ಫಿಟ್ನೆಸ್​ ಕಾಪಾಡಲು ರಾಹುಲ್ ಗಾಂಧಿ ಪ್ರತಿದಿನ ಹೀಗ್ಮಾಡ್ತಾರಂತೆ, ದೃಢ ದೇಹದ ರಹಸ್ಯವಿದು


ಬಳ್ಳಾರಿ ಜಿಲ್ಲೆಯಲ್ಲಿ ಒಬ್ಬ ರಾಮುಲು ಅಂತಾ ಮಂತ್ರಿ ಇದ್ದಾನೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಏನೂ ಮಾಡಿಲ್ಲ ಎಂದು ಹೇಳಿದ್ದಾನೆ. ಆ ಶ್ರೀರಾಮುಲು ಒಬ್ಬ ಪೆದ್ದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.


ರಾಮುಲುಗೆ ಸಿದ್ದರಾಮಯ್ಯ ಪ್ರಶ್ನೆ
ನಿನ್ನಂತ ಪೆದ್ದನ ಜೊತೆ ಚರ್ಚೆ ಮಾಡೋಕೆ ಯಾರೂ ತಯಾರಿಲ್ಲ. ಲೂಟಿ ಹೊಡೆದಿದ್ದು ಮಾತ್ರವೇ ನಿನ್ನ ಸಾಧನೆ. ಬಳ್ಳಾರಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಕೊಟ್ಟಿದ್ದು ಯಾರು ಎಂದು ಮೇಜು ಕುಟ್ಡಿ ರಾಮುಲುಗೆ ಸಿದ್ದರಾಮಯ್ಯ ಪ್ರಶ್ನಿಸಿದ್ರು.


ಕಾಂಗ್ರೆಸ್ ಸಮಾವೇಶದ ಕಸ ಕ್ಲೀನ್ ಮಾಡಿದ ಶ್ರೀರಾಮುಲು! ಕೈ ನಾಯಕರಿಗೆ ಸಚಿವರು ಕೊಟ್ರು ಟಾಂಗ್
ಸಚಿವ ಶ್ರೀರಾಮುಲು ಹಾಗೂ ಕಾಂಗ್ರೆಸ್ ನಡುವಿನ ಟ್ವೀಟ್ ವಾರ್  ಮುಂದುವರಿದಿದೆ. ಕಾಂಗ್ರೆಸ್​ ವಿರುದ್ಧ ಸಾಲು ಸಾಲು ಟ್ವೀಟ್ ಮಾಡಿ ರಾಮುಲು ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯತಲುಪಿದ್ದ ರಾಹುಲ್ ಜೋಡೋ ಯಾತ್ರೆಗೆ ಕಾರ್ಯಕರ್ತರ ದಂಡೇ ಹರಿದು ಬಂದಿತ್ತು. ಕಾಂಗ್ರೆಸ್​ ಸಮಾವೇಶ ಮಾಡಿದ್ದ ಜಾಗವನ್ನು ಸಚಿವ ಶ್ರೀರಾಮುಲು ಸ್ವಚ್ಛಗೊಳಿಸುವ ಮೂಲಕ ಕಾಂಗ್ರೆಸ್​ಗೆ ವಿಭಿನ್ನ ರೀತಿಯಲ್ಲಿ ಟಾಂಗ್​ ಕೊಟ್ಟಿದ್ದಾರೆ.


ಇದನ್ನೂ ಓದಿ: Bharat Jodo Yatra: ವಾಟರ್ ಟ್ಯಾಂಕ್ ಏರಿ ರಾಹುಲ್ ಗಾಂಧಿ ಭಾಷಣ, ಕೈ ನಾಯಕನಿಂದ ಕನ್ನಡದ ಗುಣಗಾನ!


ನಾವು ಮಾತ್ರ ಸ್ವಚ್ಛವಾಗಿದ್ದರೆ ಸಾಲದು, ಪರಿಸರವೂ ಶುಭ್ರವಾಗಿರಬೇಕು
ಮುನಿಸಿಪಲ್ ಮೈದಾನ ಸ್ವಚ್ಚಗೊಳಿಸಿದ ಸಚಿವ ಶ್ರೀರಾಮುಲು, ನಾವು ಮಾತ್ರ ಸ್ವಚ್ಛವಾಗಿದ್ದರೆ ಸಾಲದು, ನಮ್ಮ ಸುತ್ತಮುತ್ತಲಿನ ಪರಿಸರವೂ ಅಷ್ಟೇ ಶುಭ್ರವಾಗಿರಬೇಕು ಎಂಬ ಕಾರಣಕ್ಕಾಗಿ ದೇಶದ ಪ್ರಧಾನಿ ಜೀ ಸ್ವಚ್ಫ ಭಾರತ್ ಯೋಜನೆ ಪ್ರಾರಂಭಿಸಿದ್ದರು. ಕಡೆ ಪಕ್ಷ ಕಾಂಗ್ರೆಸ್ ನಾಯಕ ಸ್ಥಳೀಯ ನಾಯಕರಿಗಾದರೂ ಇದರ ಬಗ್ಗೆ ಅರಿವು ಮೂಡಿಸದಿರುವುದು ನನಗೆ ಆಶ್ಚರ್ಯ ಉಂಟು ಮಾಡಿದೆ ಎಂದು ಕಾಂಗ್ರೆಸ್​ನನ್ನು ರಾಮುಲು ಕುಟುಕಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: