• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Rahul Gandhi: ಸಂಸದ ಸ್ಥಾನದಿಂದ ಅನರ್ಹಗೊಂಡ ರಾಹುಲ್‌ ಗಾಂಧಿ; ಯಾವೆಲ್ಲಾ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ?

Rahul Gandhi: ಸಂಸದ ಸ್ಥಾನದಿಂದ ಅನರ್ಹಗೊಂಡ ರಾಹುಲ್‌ ಗಾಂಧಿ; ಯಾವೆಲ್ಲಾ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ?

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಸಾಮಾನ್ಯವಾಗಿ ಸಂಸತ್ತಿನ ಸದಸ್ಯರು ವಿವಿಧ ಮಾಸಿಕ ಭತ್ಯೆಗಳ ಜೊತೆಗೆ ಹಲವಾರು ಸವಲತ್ತುಗಳನ್ನು ಸರ್ಕಾರದಿಂದ ಪಡೆಯುತ್ತಾರೆ. ಇದೀಗ ಲೋಕಸಭೆ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದು, ಹಾಗಿದ್ರೆ ರಾಹುಲ್​ ಗಾಂಧಿಯವರು ಯಾವೆಲ್ಲಾ ಪ್ರಯೋಜನಗಳನ್ನು ಕಳೆದುಕೊಳ್ಳಲಿದ್ದಾರೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

ಮುಂದೆ ಓದಿ ...
 • Share this:

ಎಲ್ಲರಿಗೂ ತಿಳಿದಿರುವಂತೆ ಸರ್ಕಾರಿ ಅಧಿಕಾರಿಗಳು (Government Officers), ರಾಜಕಾರಣಿಗಳು ಹಲವಾರು ರೀತಿಯ ಸರ್ಕಾರಿ ಪ್ರಯೋಜನಗಳನ್ನು ಪಡೆಯುತ್ತಿರುತ್ತಾರೆ. ಹಾಗೆಯೇ ಸಂಸತ್ತಿನ ಸದಸ್ಯರು ವಿವಿಧ ಮಾಸಿಕ ಭತ್ಯೆಗಳ ಜೊತೆಗೆ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಾರೆ. ಆದರೆ ಸಂಸದೀಯ ನಿಯಮಗಳ ಪ್ರಕಾರ, ಕೇಂದ್ರದ ಶಾಸಕರು (MLA) ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದಾಗ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಅಂತೆಯೇ, ಅವರು ಸಂಸತ್ ಸದಸ್ಯರಿಗೆ ನೀಡಲಾಗುವ ಕೆಲವು ಸೌಲಭ್ಯಗಳನ್ನು ಮುಂದುವರಿಸಲು ಸಾಧ್ಯವಿಲ್ಲ. ಹಾಗಾಗಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ (Rahul Gandhi) ಕೂಡ ಈ ಕೆಳಗಿನ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ.


ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿ ದೋಷಿ


'ಮೋದಿ ಉಪನಾಮ' ಹೇಳಿಕೆಯ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೋಷಿ ಎಂದು ಗುಜರಾತ್‌ನ ಸೂರತ್‌ನ ನ್ಯಾಯಾಲಯ ತೀರ್ಪು ನೀಡಿದ್ದು, ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅದರೊಂದಿಗೆ ನ್ಯಾಯಾಲಯ ಅವರಿಗೆ ಜಾಮೀನು ಕೂಡ ನೀಡಿದೆ.


ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ ಲೋಕಸಭಾ ಸದಸ್ಯತ್ವದಿಂದಲೂ ಅನರ್ಹಗೊಂಡಿದ್ದಾರೆ. ಸಂವಿಧಾನದ 102 (1) (ಇ) ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 ರ ಪ್ರಕಾರ ಅಪರಾಧ ಸಾಬೀತಾದ ದಿನದಿಂದ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಲೋಕಸಭೆಯ ಸೆಕ್ರೆಟರಿಯೇಟ್ ಅಧಿಸೂಚನೆಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಂಸದರು ಹೊಂದಿರುವಂತಹ ಸರ್ಕಾರಿ ಸೌಲಭ್ಯಗಳನ್ನು ಅವರು ಕಳೆದುಕೊಳ್ಳಲಿದ್ದಾರೆ.


ಇದನ್ನೂ ಓದಿ: 19 ವರ್ಷಗಳ ನಂತರ ಬದಲಾಗುತ್ತಿದೆ ರಾಗಾ ವಿಳಾಸ!


ಹಾಗಿದ್ರೆ ಸಂಸದರು ಹೊಂದಿರುವಂಥ ಸರ್ಕಾರಿ ಸೌಲಭ್ಯಗಳು ಯಾವುವು ಅನ್ನೋದನ್ನು ನೋಡೋಣ.


ಸಂಸದರು ಹೊಂದಿರುವ ಸರ್ಕಾರಿ ಸೌಲಭ್ಯಗಳು


 • ಸಂಸದರು ತಮ್ಮ ಅಧಿಕಾರ ಅವಧಿಯುದ್ದಕ್ಕೂ ಶುಲ್ಕರಹಿತ ವಸತಿ ಸೌಲಭ್ಯ ಪಡೆಯುತ್ತಾರೆ. ಸಾಮಾನ್ಯ ಪರವಾನಗಿ ಶುಲ್ಕವನ್ನು ಪಾವತಿಸಿದ ನಂತರ ಅವರು ಬಂಗ್ಲೋ ಮಾದರಿಯ ವಸತಿ ಸೌಕರ್ಯವನ್ನು ಸಹ ಪಡೆಯಬಹುದು. ವಸತಿ ಉಪಸಮಿತಿಯು ನಿಗದಿತ ಮಾನದಂಡಗಳ ಆಧಾರದ ಮೇಲೆ ನಿವಾಸಗಳ ಹಂಚಿಕೆಯನ್ನು ಮಾಡುತ್ತದೆ. ನೀರು ಮತ್ತು ವಿದ್ಯುತ್ ಬಿಲ್‌ಗಳಿಗೆ ನಿರ್ದಿಷ್ಟ ಮಿತಿಯವರೆಗೆ ವಿನಾಯಿತಿ ನೀಡಲಾಗುತ್ತದೆ.

 • ಸಂಸದರ ವೇತನ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಕಾಯಿದೆ, 2010 ರ ಪ್ರಕಾರ, ಅವರು ಮಾಸಿಕ ₹ 50,000 ವೇತನವನ್ನು ಪಡೆಯುತ್ತಾರೆ. ಲೋಕಸಭಾ ಸದಸ್ಯರು ಸಂಸತ್ತಿನ ಅಧಿವೇಶನಗಳಿಗೆ ಹಾಜರಾಗಲು ದೈನಂದಿನ ಭತ್ಯೆಯಾಗಿ ₹ 2,000 ಪಡೆಯುತ್ತಾರೆ.

 • ಲೋಕಸಭಾ ಸದಸ್ಯರು ತಿಂಗಳಿಗೆ ₹45,000 ಕ್ಷೇತ್ರ ಭತ್ಯೆಯನ್ನೂ ಪಡೆಯುತ್ತಾರೆ.


ರಾಹುಲ್ ಗಾಂಧಿ


 • ಸಂಸದರು ಅಧಿವೇಶನದಲ್ಲಿ ಭಾಗವಹಿಸಲು ಪ್ರಯಾಣ ಸೇರಿದಂತೆ ತಮ್ಮ ಕರ್ತವ್ಯಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ನಡೆಸಲು ಪ್ರಯಾಣ ಭತ್ಯೆ ಪಡೆಯುತ್ತಾರೆ. ಅವರು ರೈಲಿನಲ್ಲಿ ಒಂದು ಎಕ್ಸಿಕ್ಯೂಟಿವ್ ಕ್ಲಾಸ್ ಅಥವಾ ಫಸ್ಟ್ ಕ್ಲಾಸ್ ಎಸಿ ಪಾಸ್ ಅನ್ನು ಪಡೆಯುತ್ತಾರೆ. ಯಾವುದೇ ಏರ್‌ಲೈನ್‌ನ ಒಂದು ಮತ್ತು ನಾಲ್ಕನೇ ಒಂದು ವಿಮಾನ ದರ ಮತ್ತು ರಸ್ತೆಯ ಮೂಲಕ ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ ₹16 ರೂ.ಗಳನ್ನು ಪಡೆಯುತ್ತಾರೆ. ಪ್ರತಿ ಸದಸ್ಯರಿಗೆ ಅವರ ಸಂಬಂಧಿಕರೊಂದಿಗೆ ವರ್ಷಕ್ಕೆ ಒಟ್ಟು 34 ಸಿಂಗಲ್‌ ಏರ್‌ ಟ್ರಾವೆಲ್‌ ಅನುಮತಿಸಲಾಗಿದೆ.

 • ಸ್ಟೇಶನರಿ ಹಾಗೂ ಅಂಚೆ ವೆಚ್ಚಕ್ಕೆ ₹15,000 ಸೇರಿದಂತೆ ಕಚೇರಿ ವೆಚ್ಚವಾಗಿ ತಿಂಗಳಿಗೆ ₹45,000 ಪಡೆಯುತ್ತಾರೆ. ಇದನ್ನು ಕಾರ್ಯದರ್ಶಿ ಸಹಾಯಕರ ವೇತನ ನೀಡಲು ಭತ್ಯೆ ಬಳಸಿಕೊಳ್ಳಬಹುದು.


top videos  • ಸಂಸದರು ತಮ್ಮ ದೆಹಲಿಯ ನಿವಾಸ, ಕಛೇರಿಯಲ್ಲಿ ಹಾಗೂ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿನ ನಿವಾಸ ಮತ್ತು ಕಛೇರಿಯಲ್ಲಿ ಉಚಿತ ದೂರವಾಣಿ ಕರೆಗಳನ್ನು ಹೊಂದಿರುತ್ತಾರೆ. ಅಂಥ ದೂರವಾಣಿಯಿಂದ ಮಾಡಿದ ಮೊದಲ 50,000 ಸ್ಥಳೀಯ ಕರೆಗಳಿಗೆ ಅವರು ಯಾವುದೇ ಪಾವತಿ ಮಾಡಬೇಕಾಗಿಲ್ಲ.


  ಒಟ್ಟಾರೆ, ಲೋಕಸಭೆ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಈ ಎಲ್ಲ ಸರ್ಕಾರಿ ಪ್ರಯೋಜನಗಳು ಕಡಿತಗೊಳ್ಳುತ್ತವೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು