• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Rahul Gandhi Disqualified: ಅಂದು ಅನರ್ಹತೆ ಪರ ದನಿ, ಇಂದು ರಾಹುಲ್ ವಿಚಾರದಲ್ಲಿ ಉಲ್ಟಾ! ನಿಲುವು ಬದಲಿಸಿಕೊಂಡಿತಾ ಕಾಂಗ್ರೆಸ್-ಎಎಪಿ?

Rahul Gandhi Disqualified: ಅಂದು ಅನರ್ಹತೆ ಪರ ದನಿ, ಇಂದು ರಾಹುಲ್ ವಿಚಾರದಲ್ಲಿ ಉಲ್ಟಾ! ನಿಲುವು ಬದಲಿಸಿಕೊಂಡಿತಾ ಕಾಂಗ್ರೆಸ್-ಎಎಪಿ?

ರಾಹುಲ್ ಗಾಂಧಿ- ಅರವಿಂದ್ ಕೇಜ್ರಿವಾಲ್

ರಾಹುಲ್ ಗಾಂಧಿ- ಅರವಿಂದ್ ಕೇಜ್ರಿವಾಲ್

2013ರಲ್ಲಿ ಕೇಜ್ರಿವಾಲ್, ತಪ್ಪಿತಸ್ಥ ಸಂಸದರನ್ನು ತಕ್ಷಣವೇ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದರು. ಆದರೆ ಈಗ ರಾಹುಲ್​ ಗಾಂಧಿ ಪ್ರಕರಣದಲ್ಲಿ ದ್ವೇಷದ ರಾಜಕಾರಣದಿಂದ ರಾಹುಲ್​ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಉಲ್ಟಾ ಹೊಡೆದಿದ್ದಾರೆ.

  • News18 Kannada
  • 4-MIN READ
  • Last Updated :
  • New Delhi, India
  • Share this:

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯನ್ನು (Rahul Gandhi) ಸಂಸತ್ ಸದಸ್ಯತ್ವದಿಂದ (MP) ಅನರ್ಹಗೊಳಿಸಿರುದಕ್ಕೆ ಪ್ರತಿಪಕ್ಷಗಳು ತಾವೆಲ್ಲಾ ಒಂದೇ ಬಿಂಬಿಸಲು ಪ್ರಯತ್ನಿಸುತ್ತಿವೆ. ಆದರೆ ಈ ವಿಷಯದ ಬಗ್ಗೆ ಕಾಂಗ್ರೆಸ್, ರಾಹುಲ್ ಗಾಂಧಿ ಅಥವಾ ಆಮ್ ಆದ್ಮಿ ಪಕ್ಷ (ಎಎಪಿ) ಯಾರೂ ಕೂಡ ತಮ್ಮ ಹಿಂದಿನ ನಿಲುವುಗಳಿಗೆ ಸ್ಥಿರವಾಗಿ ನಿಂತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಲಿಲಿ ಥಾಮಸ್ ಪ್ರಕರಣದಲ್ಲಿ 2013 ರ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ, 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಒಳಪಟ್ಟ ಒಂದು ದಿನದ ನಂತರ ರಾಹುಲ್​ ಗಾಂಧಿ ಅವರನ್ನು ಶುಕ್ರವಾರ ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ.


2019ರಲ್ಲಿ ರಾಹುಲ್​ ಗಾಂಧಿ "ಎಲ್ಲಾ ಕಳ್ಳರಿಗೂ ಮೋದಿ ಎಂಬ ಸಾಮಾನ್ಯ ಉಪನಾಮ ಹೇಗೆ?" ಎಂಬ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್​ ಗಾಂಧಿ ವಿರುದ್ಧ ದೂರು ನೀಡಿ, ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ತೀರ್ಪು ಗುರುವಾರ ಹೊರಬಿದ್ದಿದ್ದು, ರಾಹುಲ್ ಗಾಂಧಿಗೆ ಸೂರತ್‌ನ ನ್ಯಾಯಾಲಯ  ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದೀಗ ಶುಕ್ರವಾರ ಅವರ ಸಂಸದ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.


2013 ರಲ್ಲಿ ಏನಾಗಿತ್ತು?


2013ರಲ್ಲಿ ಸುಪ್ರೀಂ ಕೋರ್ಟ್‌ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 8(4) ಅನ್ನು ರದ್ದುಪಡಿಸಿ, ಸಂವಿಧಾನದ 101 (3) (ಎ) ಮತ್ತು 190 (3) (ಎ) ವಿಧಿಗಳ ಪ್ರಕಾರ, ಜನಪ‍್ರತಿನಿಧಿಯು ತಪ್ಪಿತಸ್ಥ ಎಂದು ತೀರ್ಪು ಬಂದ ಕೂಡಲೇ ಅವರ ಸದಸ್ಯತ್ವ ರದ್ದಾಗುತ್ತದೆ ಎಂದು ಲಿಲಿ ಥಾಮಸ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.


ಇದನ್ನೂ ಓದಿ: Rahul Gandhi: ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆಯಡಿ ರಾಹುಲ್ ಗಾಂಧಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹ!


ಈ ಹಿನ್ನೆಲೆಯಲ್ಲಿ ಅಂದಿನ ಯುಪಿಎ ಸರ್ಕಾರವು ಸುಪ್ರೀಂ ಕೋರ್ಟ್‌ ಆದೇಶವನ್ನು ಅಸಿಂಧುಗೊಳಿಸಲು ಸುಗ್ರೀವಾಜ್ಞೆ ಜಾರಿಗೆ ತರಲು ಮುಂದಾಗಿತ್ತು. ಯಾವುದಾದರೂ ಅಪರಾಧ ಪ್ರಕರಣದಲ್ಲಿ ಹಾಲಿ ಸಂಸದ/ಶಾಸಕರು ದೋಷಿಗಳಾದರೆ ಅವರಿಗೆ ರಕ್ಷಣೆ ಒದಗಿಸುವ ಉದ್ದೇಶವನ್ನು ಆ ಸುಗ್ರೀವಾಜ್ಞೆ ಹೊಂದಿತ್ತು.


ನ್ಯಾಯಾಲಯದ ಹಾಲಿ ಶಾಸಕ/ಸಂಸದರನ್ನು ದೋಷಿ ಎಂದರೂ ಅವರನ್ನು ಮೂರು ತಿಂಗಳ ಕಾಲ ಅನರ್ಹಗೊಳಿಸುವಂತಿಲ್ಲ ಎಂಬ ನಿಬಂಧನೆಯನ್ನು ಅಡಕಗೊಳಿಸಲಾಗಿತ್ತು. ಅಲ್ಲದೇ, ಆ ಮೂರು ತಿಂಗಳ ಒಳಗೆ ಸಂಸದ/ಶಾಸಕ ಮೇಲ್ಮನವಿ ಅಥವಾ ತೀರ್ಪು ಮರುಪರಿಶೀಲನಾ ಅರ್ಜಿ ದಾಖಲಿಸಿದಲ್ಲಿ ಅದು ಇತ್ಯರ್ಥವಾಗುವವರೆಗೂ ಅವರನ್ನು ಅನರ್ಹಗೊಳಿಸದಿರಲು ಅವಕಾಶ ಕಲ್ಪಿಸಲಾಗಿತ್ತು. ಲಿಲಿ ಥಾಮಸ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಈ ನಿಬಂಧನೆಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿತ್ತು. ಇದನ್ನು ಅಸಿಂಧುಗೊಳಿಸಲು ಪ್ರಜಾಪ್ರತಿನಿಧಿ (ಎರಡನೇ ತಿದ್ದುಪಡಿ ಮತ್ತು ಸಿಂಧುತ್ವ) ಮಸೂದೆ 2013 ಅನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಯುಪಿಎ ಸರ್ಕಾರ ಮುಂದಾಗಿತ್ತು.


ಯುಪಿಎ ಸರ್ಕಾರವು ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಸಮ್ಮತಿಸಿ ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸುವ ಸಂದರ್ಭದಲ್ಲಿ ಮಾಧ್ಯಮ ಗೋಷ್ಠಿಗೆ ಹಾಜರಾಗಿದ್ದ ರಾಹುಲ್‌ ಗಾಂಧಿಯವರು “ ಇದು ಸಂಪೂರ್ಣ ಅವಿವೇಕದಿಂದ ಕೂಡಿರುವುದು” ಎಂದು ತಿರಸ್ಕರಿಸಿದ್ದರು. ಆನಂತರ ಅಂದಿನ ಸರ್ಕಾರ ಸುಗ್ರೀವಾಜ್ಞೆಯನ್ನು ಹಿಂಪಡೆದುಕೊಂಡಿತ್ತು.




ಉಲ್ಟಾ ಹೊಡೆದ  ಕೇಜ್ರಿವಾಲ್


2013ರಲ್ಲಿ ರಾಜಕೀಯ ಪ್ರವೇಶಿಸದ ಕೇಜ್ರಿವಾಲ್, ತಪ್ಪಿತಸ್ಥ ಸಂಸದರನ್ನು ತಕ್ಷಣವೇ ಅನರ್ಹಗೊಳಿಸಬೇಕು ಎಂದು ಹೇಳಿದ್ದರು, ಸುಗ್ರೀವಾಜ್ಞೆಗೆ ಸಹಿ ಹಾಕದಂತೆ ರಾಷ್ಟ್ರಪತಿಯನ್ನು ಭೇಟಿ ಮಾಡಿ ಮನವಿಯನ್ನು ಮಾಡಿದ್ದರು. ಆದರೆ 2023ರಲ್ಲಿ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವುದು ಮೋದಿ ಅವರಲ್ಲಿರುವ ಹೆದರಿಕೆಯನ್ನು ತೋರಿಸುತ್ತದೆ ಎಂದು ಉಲ್ಟಾ ಹೊಡೆದಿದ್ದಾರೆ.


ಕಾಂಗ್ರೆಸ್​ ನಿಲುವಿನಲ್ಲಿ ಬದಲಾವಣೆ


  • 2013ರಲ್ಲಿ ರಾಹುಲ್​ ಗಾಂಧಿ ತನ್ನ ಪಕ್ಷದ ನಿಲುವನ್ನು ಬೆಂಬಲಿಸಿರಲಿಲ್ಲ, ಆದರೆ ಈಗ ಅವರು ತಮ್ಮ ಪ್ರಕರಣದಲ್ಲಿ ಅಭಿಪ್ರಾಯವನ್ನು ಬದಲಾಯಿಸಿಕೊಂಡು ಸರ್ಕಾರವನ್ನು ದೂಷಿಸುತ್ತಿದ್ದಾರೆ.

  • 2013 ರಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತಪ್ಪಿತಸ್ಥ ಸಂಸದರನ್ನು ತಕ್ಷಣವೇ ಅನರ್ಹಗೊಳಿಸಬೇಕು ಮತ್ತು ಸುಗ್ರೀವಾಜ್ಞೆಗೆ ಸಹಿ ಹಾಕದಂತೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು.

  • ಆದರೆ 202ರಲ್ಲಿ ದೋಷಾರೋಪಣೆಯ ಕಾರಣದಿಂದ ರಾಹುಲ್​ ಗಾಂಧಿಯನ್ನು ಅನರ್ಹಗೊಳಿಸಿರುವುದು ಪ್ರಧಾನಿ ಮೋದಿಯವರ ಭಯವನ್ನು ತೋರಿಸುತ್ತದೆ ಎಂದು ಕೇಜ್ರಿವಾಲ್ ಹೇಳುತ್ತಾರೆ.

  • ಎಎಪಿ ಮಾತ್ರವಲ್ಲ, ಕಾಂಗ್ರೆಸ್ ಕೂಡ ತಮ್ಮ ನಾಯಕರ ವಿರುದ್ಧ ಕ್ರಮ ಕೈಗೊಂಡಾಗ ವಿಭಿನ್ನ ಮಾನದಂಡಗಳನ್ನು ತೋರಿಸಿದೆ. ಉದಾಹರಣೆಗೆ ಮಾಜಿ ಪ್ರಧಾನಿ ನರಸಿಂಹರಾವ್ ಅವರನ್ನೂ ಬಂಧಿಸಲಾಗಿತ್ತು. ಅವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದವರು ಮತ್ತು ಅತ್ಯಂತ ಅನುಭವಿ ನಾಯಕ. ಆದರೆ ಅವರನ್ನು ಬಂಧಿಸಿದಾಗ, ಯಾವುದೇ ಕಾಂಗ್ರೆಸ್ ನಾಯಕ ಯಾವುದೇ ರೀತಿಯ ಪ್ರತಿಭಟನೆ ನಡೆಸಲಿಲ್ಲ. ಇದೀಗ ರಾಹುಲ್​ ಗಾಂಧಿ ಪ್ರಕರಣದಲ್ಲಿ ಸರ್ಕಾರದ ವಿರುದ್ಧ ಮುಗಿ ಬೀಳುತ್ತಿದ್ದಾರೆ.

top videos
    First published: