• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Rahul Gandhi: ಅತ್ತ ವಯನಾಡಲ್ಲಿ ಉಪಚುನಾವಣೆಗೆ ಸಿದ್ಧತೆ, ಇತ್ತ 'ಅನರ್ಹ ಸಂಸದ' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡ ರಾಹುಲ್ ಗಾಂಧಿ!

Rahul Gandhi: ಅತ್ತ ವಯನಾಡಲ್ಲಿ ಉಪಚುನಾವಣೆಗೆ ಸಿದ್ಧತೆ, ಇತ್ತ 'ಅನರ್ಹ ಸಂಸದ' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡ ರಾಹುಲ್ ಗಾಂಧಿ!

ರಾಹುಲ್ ಗಾಂಧಿ

ರಾಹುಲ್ ಗಾಂಧಿ

2019ರಲ್ಲಿ ಕೋಲಾರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಎಲ್ಲ ಕಳ್ಳರ ಸರ್‌ನೇಮ್ ಕೂಡ ಮೋದಿ ಅಂತಲೇ ಇರುತ್ತೆ, ಅದು ಹೇಗೆ? ಎಂದು ಹೇಳಿಕೆ ನೀಡಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

 • News18 Kannada
 • 2-MIN READ
 • Last Updated :
 • Delhi, India
 • Share this:

ನವದೆಹಲಿ: ಕಾಂಗ್ರೆಸ್​ (Congress) ನಾಯಕ ರಾಹುಲ್​ ಗಾಂಧಿಯನ್ನು (Rahul Gandhi) ಸಂಸತ್​ ಸದಸ್ಯತ್ವ (Member of the Parliament) ಸ್ಥಾನದಿಂದ ಅನರ್ಹಗೊಳಿಸಿರುವ ಸುದ್ದಿ ದೇಶವಲ್ಲದೆ ವಿದೇಶದಲ್ಲೂ ಚರ್ಚೆಯಾಗುತ್ತಿದೆ. ರಾಹುಲ್ ಸದಸ್ಯತ್ವದ ಅನರ್ಹತೆ ವಿರುದ್ಧ ಶನಿವಾರ ಕಾಂಗ್ರೆಸ್‌ ದೇಶದ ಹಲವೆಡೆ ಸತ್ಯಾಗ್ರಹ ನಡೆಸಿದೆ. ಇದರ ಬೆನ್ನಲ್ಲೆ ರಾಹುಲ್​ ಸಂಸದರಾಗಿ ಆಯ್ಕೆಯಾಗಿದ್ದ ವಯನಾಡು ಲೋಕಸಭಾ ಕ್ಷೇತ್ರಕ್ಕೆ (Lok Sabha Constituency) ಸೆಪ್ಟೆಂಬರ್ ತಿಂಗಳಲ್ಲಿ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಆಲೋಚಿಸುತ್ತಿದೆ ಎನ್ನಲಾಗಿದೆ. ಈ ಸಂದರ್ಭದಲ್ಲೇ ರಾಹುಲ್‌ ಗಾಂಧಿ ತಮ್ಮ ಟ್ವಿಟ್ಟರ್‌ ಖಾತೆಯ ಬಯೋದಲ್ಲಿ (Bio Section) ಅನರ್ಹ ಸಂಸದ ಎಂದು ಬರೆದುಕೊಂಡು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.


2019ರಲ್ಲಿ ಕೋಲಾರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಎಲ್ಲ ಕಳ್ಳರ ಸರ್‌ನೇಮ್ ಕೂಡ ಮೋದಿ ಅಂತಲೇ ಇದೆ, ಅದು ಹೇಗೆ? ಎಂದು ಹೇಳಿಕೆ ನೀಡಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ನೀರವ್ ಮೋದಿ ಹಾಗೂ ಲಲಿತ್ ಮೋದಿ ಅವರ ಹೆಸರನ್ನು ಉಲ್ಲೇಖಿಸಿದ್ದ ರಾಹುಲ್ ಗಾಂಧಿ ಮೋದಿ ಉಪನಾಮದ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.


ರಾಹುಲ್​ಗೆ 2 ವರ್ಷ ಜೈಲು ಶಿಕ್ಷೆ


ಗುಜರಾತ್​ನಲ್ಲಿ ಪೂರ್ಣೇಶ್​ ಮೋದಿ ಎಂಬ ಬಿಜೆಪಿ ಶಾಸಕ ಮಾನಹಾನಿ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಜನಪ್ರತಿನಿಧಿ ಕಾಯ್ದೆ ಅನ್ವಯ ಎರಡು ವರ್ಷ ಶಿಕ್ಷೆಗೆ ಗುರಿಯಾದ ಕಾರಣಕ್ಕೆ ರಾಹುಲ್ ಗಾಂಧಿ ಅವರು ಲೋಕಸಭೆ ಸದಸ್ಯತ್ವ ಕಳೆದುಕೊಂಡಿದ್ದರು.


ಇದನ್ನೂ ಓದಿ: Rahul Gandhi: ಹೋಗಿ BJP ಬ್ಯಾಡ್ಜ್ ಹಾಕ್ಕೋ! ಪತ್ರಕರ್ತನನ್ನು ಅವಮಾನಿಸಿದ ರಾಹುಲ್ ಗಾಂಧಿ


ಅನರ್ಹ ಸಂಸದ ಎಂದು ಟ್ವಿಟರ್ ಬಯೋ ಬದಲಿಸಿದ ರಾಹುಲ್


ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯ ಬಯೋ ವಿಭಾಗದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ ಸದಸ್ಯ ಹಾಗೂ ಅನರ್ಹ ಸಂಸದ (Disqualified MP) ಎಂದು ಬದಲಿಸಿಕೊಂಡಿದ್ದಾರೆ.ವಯನಾಡಲ್ಲಿ ಉಪಚುನಾವಣೆ ಸಾಧ್ಯತೆ


ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್​ ಗಾಂಧಿ ದೋಷಿ ಎಂದು ಸೂರತ್ ನ್ಯಾಯಾಲಯ ತೀರ್ಪು ನೀಡಿದ್ದು, 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೆ ಅವರ ಸಂಸತ್​ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವು ತೆರವಾಗಿದ್ದು, ಎಲ್ಲರ ದೃಷ್ಟಿ ಉಪಚುನಾವಣೆಯತ್ತಾ ನೆಟ್ಟಿದೆ. ಚುನಾವಣಾ ಆಯೋಗವು ಸೆಪ್ಟೆಂಬರ್‌ನಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಸಬಹುದು ಎನ್ನಲಾಗುತ್ತಿದೆ.


ಟ್ವಿಟರ್​ ಬಯೋ ಬದಲಿಸಿದ ರಾಹುಲ್ ಗಾಂಧಿ


ವಯನಾಡು ಕಾಂಗ್ರೆಸ್ ಭದ್ರಕೋಟೆ


ವಯನಾಡು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಹಿಡಿತ ಸಾಧಿಸಿದೆ. ವಯನಾಡು ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್​ ಗೆಲುವು ಸಾಧಿಸುತ್ತಲೇ ಬಂದಿದೆ. ಇದೀಗ ರಾಹುಲ್​ರಿಂದ ತೆರವಾದ ನಂತರ ಆ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್​ಗೆ ಗೆಲುವು ದಕ್ಕಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. 2009ರಲ್ಲಿ ವಯನಾಡು ಲೋಕಸಭಾ ಕ್ಷೇತ್ರವಾಗಿತ್ತು. 2009 ಮತ್ತು 2014ರಲ್ಲಿ ಕಾಂಗ್ರೆಸ್​ನ​ ಶಾನವಾಸ್​ ಕ್ರಮವಾಗಿ 1,53,439 ಹಾಗೂ 20,870 ಮತಗಳಿಂದ ಜಯ ಸಾಧಿಸಿದ್ದರು. 2019ರಲ್ಲಿ ರಾಹುಲ್​ ಗಾಂಧಿ ಅಮೇಥಿಯಲ್ಲಿ ಸೋಲು ಕಂಡರೂ, ವಯನಾಡು ಮತದಾರ ಗೆಲ್ಲಿಸಿ ಸಂಸತ್​ ಪ್ರವೇಶಿಸಲು ನೆರವಾಗಿದ್ದರು.

top videos


  ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 151A ರ ಪ್ರಕಾರ, ಸಂಸತ್ತಿನ ಸದನಗಳು ಮತ್ತು ರಾಜ್ಯ ಶಾಸಕಾಂಗಗಳಲ್ಲಿನ ಸಾಂದರ್ಭಿಕ ಖಾಲಿ ಹುದ್ದೆಗಳನ್ನು ಖಾಲಿಯಾದ ದಿನಾಂಕದಿಂದ ಆರು ತಿಂಗಳೊಳಗೆ ಉಪಚುನಾವಣೆಗಳ ಮೂಲಕ ಭರ್ತಿ ಮಾಡಲು ಚುನಾವಣಾ ಆಯೋಗವನ್ನು ಕಡ್ಡಾಯಗೊಳಿಸಿದೆ. ಹಾಗಾಗಿ ಸೆಪ್ಟೆಂಬರ್ ತಿಂಗಳೊಳಗೆ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಸಾಧ್ಯತೆಯಿದೆ.

  First published: